
ಕೋಲ್ಕತಾ (ಫೆ.12) ಭಾರತದಲ್ಲಿ ನಿಫಾ ವೈರಸ್ ಪ್ರಕರಣ ನಿಧಾನವಾಗಿ ಆತಂಕ ಸೃಷ್ಟಿಸುತ್ತಿದೆ. ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ನಿಫಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ನಿಫಾ ವೈರಸ್‌ಗೆ ಆತಂಕ ಹೆಚ್ಚಿಸುತ್ತಿದೆ. ಇತ್ತ ನರ್ಸ್ ಒಬ್ಬರು ನಿಫಾ ವೈರಸ್ ಸೋಂಕಿಂತ ಆಸ್ಪತ್ರೆ ದಾಖಲಾಗಿತ್ತು. ನರ್ಸ್ ಆರೋಗ್ಯ ಪರಿಸ್ಥಿತಿ ಗಂಭೀರವಾಗುತ್ತಾ ಸಾಗಿದೆ. ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನರ್ಸ್ ಇಂದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಜನವರಿ 11 ರಂದು ಪಶ್ಚಿಮ ಬಂಗಾಳದ ಎರಡು ನಿಫಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಈ ಪೈಕಿ ಬರಸಾತ್ ಜಿಲ್ಲೆಯಲ್ಲಿ ಆರೋಗ್ಯ ಕೇಂದ್ರದ ನರ್ಸ್ ನಿಫಾ ವೈರಸ್ ಸೋಂಕಿನಿಂದ ಬಳಲಿದ್ದರು. ಜನವರಿ ಮೂರನೇ ವಾರದಲ್ಲಿ ನಿಫಾ ವೈರಸ್ ಸೋಂಕಿನಿಂದ ನರ್ಸ್ ಆರೋಗ್ಯ ತೀವ್ರ ಹದಗೆಟ್ಟಿತ್ತು. ಜನವರಿ ಅಂತ್ಯಕ್ಕೆ ನರ್ಸ್ ಆರೋಗ್ಯ ಸಂಪೂರ್ಣ ಕ್ಷೀಣಿಸಿತ್ತು. ವೆಂಟಿಲೇಟರ್ ಸಪೋರ್ಟ್ ನೀಡಲಾಗಿತ್ತು. ಇಂದು (ಫೆ.12) ಹೃದಯಾಘಾತಕ್ಕೆ ನರ್ಸ್ ಬಲಿಯಾಗಿದ್ದಾರೆ.
ನಿಫಾ ವೈರಸ್‌ನಿಂದ ನರ್ಸ್ ಆರೋಗ್ಯ ಕ್ಷೀಣಿಸಿತ್ತು. ಇದೇ ವೇಳೆ ನರ್ಸ್ ಇತರ ಆರೋಗ್ಯ ಸಮಸ್ಯೆಯನ್ನು ಎದುರಿಸಿದ್ದರು.ಸತತ ಚಿಕಿತ್ಸೆ ಮೂಲಕ ನಿಫಾ ವೈರಸ್‌ನಿಂದ ಚೇತರಿಸಿಕೊಂಡಿದ್ದರು. ಆದರೆ ಇತರ ಆರೋಗ್ಯ ಸಮಸ್ಯೆ ಉಲ್ಭಣಿಸಿತ್ತು. ಹೀಗಾಗಿ ವೆಂಟಿಲೇಟರ್ ಸಪೋರ್ಟ್ ನೀಡಲಾಗಿತ್ತು. ಇಂದು ಹೃದಯಾಘಾತಕ್ಕೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ನಿಫಾ ವೈರಸ್‌ನಿಂದ ನರ್ಸ್ ಆರೋಗ್ಯ ಸಂಪೂರ್ಣ ಕ್ಷೀಣಿಸಿತ್ತು. ನರ್ಸ್ ರೋಗ ನಿರೋಧಕ ಶಕ್ತಿ ಕುಂದಿತ್ತು. ಹೀಗಾಗಿ ನರ್ಸ್ ಕೋಮಾಗೆ ಜಾರಿದ್ದರು. ಪರಿಣಾಮ ನರ್ಸ್ ಲಂಗ್ ಇನ್‌ಫೆಕ್ಷನ್ ಇಂಜೆಕ್ಷನ್ ನೀಡಲಾಗಿತ್ತು. ಹಲವು ಆರೋಗ್ಯ ಸಮಸ್ಯೆ ನರ್ಸ್ ಆರೋಗ್ಯಕ್ಕೆ ಕುತ್ತು ತಂದಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಡಿಸೆಂಬರ್ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಿಫಾ ವೈರಸ್ ಪತ್ತೆಯಾಗಿತ್ತು. ಈ ಪೈಕಿ ಒಬ್ಬ ಪುರುಷ ನರ್ಸ್ ಚೇತರಿಸಿಕೊಂಡು ಆಸ್ಪತ್ರೆಯಿದಂ ಬಿಡುಗಡೆಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಪ್ರಕರಣದ ಸಂಪರ್ಕಿತರ ಪರೀಕ್ಷೆ ಮಾಡಲಾಗಿದೆ. ಇದು ನೆಗಟೀವ್ ಆಗಿದೆ. ಹೀಗಾಗಿ ಜನರು ನಿರಾಳರಾಗಿದ್ದಾರೆ. ಇತ್ತ ನರ್ಸ್ ಬಲಿಯಾಗುತ್ತಿದ್ದಂತೆ ತೀವ್ರ ಮುನ್ನಚ್ಚೆರಿಕೆ ವಹಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ