ಡ್ರಗ್ಸ್ ದಂಧೆ ಜೊತೆ ಸ್ಫೋಟಕ ಮಾಹಿತಿ ಬಯಲು, ಮಾದಕ ವಸ್ತು ಸೇವಿಸಿದ 9 ಮಂದಿಗೆ HIV ಸೋಂಕು

ಡ್ರಗ್ಸ್ ಸೇವನೆ ಪ್ರಕರಣಗಳು, ಮಾರಾಟ ಸೇರಿದಂತೆ ಹಲವು ಸ್ಫೋಟಕ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದರ ನಡುವೆ ಮತ್ತೊಂದು ಭಯಾನಕ ಮಾಹಿತಿ ಬಯಲಾಗಿದೆ. ಡ್ರಗ್ಸ್ ಗ್ಯಾಂಗ್‌ನ 9 ಮಂದಿಗೆ ಹೆಚ್ಐವಿ ಸೋಂಕು ತಗುಲಿದೆ. 
 

Nine Drug users infected with HIV positive due same syringes usage in Kerala

ಮಲಪ್ಪುರಂ(ಮಾ.27) ದೇಶದ ಹಲವು ಭಾಗದಲ್ಲಿ ಡ್ರಗ್ಸ್ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಅದರಲ್ಲೂ ಶಾಲಾ ಕಾಲೇಜು ವಿದ್ಯಾರ್ಥಿಗಳಿರುವ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಗೂಢವಾಗಿ ಈ ಡ್ರಗ್ಸ್ ಜಾಲ ಕಾರ್ಯನಿರ್ವಹಿಸುತ್ತಿದೆ. ಇದರ ನಡುವೆ ಮತ್ತೊಂದು ಸ್ಫೋಟಕ ಮಾಹಿತಿ ಬಯಲಾಗಿದೆ. ಡರ್ಗ್ಸ್ ವ್ಯಸನಿಗಳ ಗುಂಪಿಗೆ ಸಂಕಷ್ಟ ಹೆಚ್ಚಾಗಿದೆ.ಕುಖ್ಯಾತ ಡ್ರಗ್ಸ್ ಗ್ಯಾಂಗ್‌ನ 9 ಮಂದಿಗೆ ಹೆಚ್‌ಐವಿ ಸೋಂಕು ತಗುಲಿದೆ. ಹೌದು, ಈ ಗ್ಯಾಂಗ್ ಒಂದೇ ಸಿರಿಂಜ್ ಬಳಸಿ ಡ್ರಗ್ಸ್ ಸೇವನೆ ಮಾಡಿದ್ದಾರೆ. ಇದರ ಪರಿಣಾಮ ಡ್ರಗ್ಸ್ ಗ್ಯಾಂಗ್‌ನ 9 ಮಂದಿ ಇದೀಗ ಹೆಚ್ಐವಿ ಸೋಂಕನಿಂದ ಕಂಗಾಲಾಗಿದ್ದಾರೆ. ಈ ಪ್ರಕರಣ ಕೇರಳದ ಮಲಪ್ಪುರಂನಲ್ಲಿ ಬೆಳಕಿಗೆ ಬಂದಿದೆ.

ಕೇರಳ ಏಡ್ಸ್ ಸೊಸೈಟಿಯ ಪ್ರಕಾರ, ಮಲಪ್ಪುರಂನ ವಲಂಚೇರಿಯ ಡ್ರಗ್ಸ್ ವ್ಯಸನಿಗಳ ಗುಂಪಿನ ಒಂಬತ್ತು ವ್ಯಕ್ತಿಗಳಿಗೆ ಎಚ್‌ಐವಿ ಪಾಸಿಟಿವ್ ದೃಢಪಟ್ಟಿದೆ. ಸೊಸೈಟಿ ನಡೆಸಿದ ತಪಾಸಣೆಯಲ್ಲಿ ಸೋಂಕು ಪತ್ತೆಯಾಗಿದೆ. ಮಲಪ್ಪುರಂ ಜಿಲ್ಲಾ ವೈದ್ಯಾಧಿಕಾರಿ (ಡಿಎಂಒ)ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

ರನ್ಯಾ ಚಿನ್ನ ಕಳ್ಳ ಸಾಗಣೆ ಪ್ರಕರಣ ಬೆನ್ನಲ್ಲೇ DRI ಮತ್ತೊಂದು ಭರ್ಜರಿ ಬೇಟೆ! ಸಿಕ್ಕಿದ್ದೇನು? ಬಂಧಿತ ಮಹಿಳೆ ಯಾರು?

Latest Videos

ಸೋಂಕಿತರಲ್ಲಿ ಮೂವರು ಇತರ ರಾಜ್ಯಗಳ ವಲಸೆ ಕಾರ್ಮಿಕರಾಗಿದ್ದಾರೆ. ಡ್ರಗ್ಸ್ ಬಳಸುವಾಗ ಸಿರಿಂಜ್‌ಗಳನ್ನು ಹಂಚಿಕೊಂಡಿರುವುದೇ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಕೇರಳ ಏಡ್ಸ್ ಸೊಸೈಟಿಯು ಜನವರಿಯಲ್ಲಿ ನಡೆಸಿದ ಸಾಮಾನ್ಯ ತಪಾಸಣೆಯ ಸಮಯದಲ್ಲಿ ಮೊದಲ ಪ್ರಕರಣ ಪತ್ತೆಯಾಯಿತು. ಇದರ ನಂತರ, ಸೋಂಕಿತ ವ್ಯಕ್ತಿಯ ಸುತ್ತ ಕೇಂದ್ರೀಕರಿಸಿದ ಹೆಚ್ಚಿನ ತನಿಖೆಗಳು ಎಂಟು ಪ್ರಕರಣಗಳನ್ನು ಗುರುತಿಸಲು ಕಾರಣವಾದವು. ಆರೋಗ್ಯ ಇಲಾಖೆಯು ಈಗ ವ್ಯಾಪಕವಾದ ತಪಾಸಣಾ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ, ಸೋಂಕಿತ ವ್ಯಕ್ತಿಗಳ ಕುಟುಂಬಗಳು ಮತ್ತು ಅವರೊಂದಿಗೆ ಸಂಪರ್ಕ ಹೊಂದಿರಬಹುದಾದ ಇತರರ ಮೇಲೆ ಗಮನ ಕೇಂದ್ರೀಕರಿಸಿದೆ.

ಕೇರಳದಲ್ಲಿ ಇತ್ತೀಚೆಗೆ ಡ್ರಗ್ಸ್ ಕುರಿತು ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ದೇಶದಲ್ಲಿ ಅತೀ ಹೆಚ್ಚು ಡ್ರಗ್ಸ್ ಗ್ಯಾಂಗ್ ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ರಾಜಕೀಯವಾಗಿಯೂ ಈ ವಿಚಾರ ಭಾರಿ ಸಂಚಲನ ಸೃಷ್ಟಿಸಿತ್ತು. ಹಲವು ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಡ್ರಗ್ಸ್ ವ್ಯಸನಿಗಳಾಗುತ್ತಿದ್ದಾರೆ ಅನ್ನೋ ಮಾತುಗಳು ಕೇರಳದಲ್ಲಿ ಪೋಷಕರ ನಿದ್ದೆಗೆಡಿಸಿತ್ತು. ಇದೀಗ ಡ್ರಗ್ಸ್ ವ್ಯಸನಿಗಳಲ್ಲಿ ಹೆಚ್ಐವಿ ಸೋಂಕು ಕಾಣಿಸಿಕೊಂಡಿರುವುದು ಕೇರಳದಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ.

ರಾಜ್ಯದ ಇತಿಹಾಸದಲ್ಲೇ ದೊಡ್ಡ ಡ್ರಗ್ಸ್ ಬೇಟೆ: ಮಂಗಳೂರು ಸಿಸಿಬಿ ಪೊಲೀಸರಿಂದ 75 ಕೋಟಿ ಮಾಲು ವಶ

vuukle one pixel image
click me!