
ಯೆಮೆನ್ (ಜು.17) ಕೇರಳ ಮೂಲದ ನರ್ಸ್ ನಿಮಿಷ ಪ್ರಿಯಾ ಉಳಿಸಿಕೊಳ್ಳಲು ಭಾರತ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಯೆಮೆನ್ ಪ್ರಜೆ ತಲಾಲ್ ಅಬ್ದೊ ಮಹದಿ ಹತ್ಯೆ ಪ್ರಕರಣದಲ್ಲಿ ನಿಮಿಷ ಪ್ರಿಯಾಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಜುಲೈ 16ರಂದು ನಿಮಿಷ ಪ್ರಿಯಾಗೆ ವಿಧಿಸಿದ್ದ ಗಲ್ಲು ಶಿಕ್ಷೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಸತತ ಮಾತುಕತೆ, ಪ್ರಯತ್ನಗಳ ಬಳಿಕ ಶಿಕ್ಷೆ ಮುಂದೂಡಲಾಗಿದೆ. ಆದರೆ ನಿಮಿಷ ಪ್ರಿಯಾಗೆ ಶಿಕ್ಷೆಯಿಂದ ಪಾರಾಗಿಲ್ಲ. ಇದೀಗ ನಿಮಿಷ ಪ್ರಿಯಾ ಮುಂದೆ ಯಾವುದೇ ದಾರಿಗಳಿಲ್ಲ. ಇದೀಗ ಪರಿಸ್ಥಿತಿ ಅಥವಾ ನಿಮಿಷ ಪ್ರಿಯಾ ಹಣೆಬರಹ 2 ದಾರಿಯಲ್ಲಿ ನಿರ್ಧಾರವಾಗಲಿದೆ. ಒಂದು ಖಿಸಾಸ್, ಮತ್ತೊಂದು ದಿಯ್ಹಾ ಮಾತ್ರ.
ಭಾರತದ ರಾಜತಾಂತ್ರಿಕ ಮಾತುಕತೆ, ಕೇರಳದ ಗ್ರ್ಯಾಂಡ್ ಮುಫ್ತಿ ಆಫ್ ಇಂಡಿಯಾದ ಕಾಂತಾಪುರಂ ಎಬಿ ಅಬೂಬಕರ್ ಮುಸ್ಲಿಯಾರ್ ನಡೆಸುತ್ತಿರುವ ಮಾತುಕತೆ ಇಲ್ಲಿ ಪ್ರಧಾನವಾಗಿದೆ. ಯೆಮೆನ್‌ನಲ್ಲಿ ಅಲ್ಲಿನ ನಿಯಮದ ಪ್ರಕಾರ ಯೆಮೆನ್ ಪ್ರಜೆ ತಲಾಲ್ ಅಬ್ದೊ ಮೆಹದಿ ನೆರವಿನಿಂದ ಕ್ಲಿನಿಕ್ ಆರಂಭಿಸಿದ ನಿಮಿಷ ಪ್ರಿಯಾ ಕೊನೆಗೆ ಆತನ ಬಂಧಿಯಾದಳು. ಬಿಡಿಸಿಕೊಂಡು ಬರಲಾರದ ಸಂಕಷ್ಟಕ್ಕೆ ಸಿಲುಕಿದ ತಲಾಲ್ ತಪ್ಪಿಸಿಕೊಂಡು ಬರಲು ನೀಡಿದ ಡೋಸ್ ಹೆಚ್ಚಾಗಿ ಎಡವಟ್ಟಾಗಿದೆ. ತಲಾಲ್ ಹತ್ಯೆಯಾಗಿದ್ದ. ಬಳಿಕ ಆತನ ಮೃತದೇಹವನ್ನು ಮರೆಮಾಚಲು ಪ್ರಯತ್ನ ಮಾಡಿ ಅರೆಸ್ಟ್ ಆದ ನಿಮಿಷಾ ಪ್ರಿಯಾಗೆ ತನಿಖೆ, ವಿಚಾರಣೆ ಬಳಿಕ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಖಿಸಾಸ್‌ಗೆ ತಲಾಲ್ ಅಬ್ದೋ ಕುಟುಂಬ ಒತ್ತಾಯ
ತಲಾಲ್ ಅಬ್ದೊ ಮೆಹದಿ ಕುಟುಂಬ ನಿಮಿಷ ಪ್ರಿಯಾಗೆ ಯಾವುದೇ ಕ್ಷಮೆ ನೀಡಲ್ಲ ಎಂದಿದೆ. ಆಕೆಗೆ ಗಲ್ಲು ಶಿಕ್ಷೆ ಒಂದೇ ಗುರಿ ಎಂದಿದೆ. ಷರಿಯಾ ಕಾನೂನು ಅಥವಾ ಮುಸ್ಲಿಮ್ ಕಾನೂನು ಪ್ರಕಾರ ಖಿಸಾಸ್ ಎಂದರೆ ಮುಯ್ಯಿಗೆ ಮುಯ್ಯಿ. ಅಥವಾ ಕಣ್ಣಿಗೆ ಕಣ್ಣು ನಿಯಮ. ಹತ್ಯೆ ಮಾಡಿದ ನಿಮಿಷ ಪ್ರಿಯಾಗೆ ಗಲ್ಲು ಶಿಕ್ಷೆ ಬಿಟ್ಟು ಬೇರೇನು ಇಲ್ಲ ಎಂದು ಮೆಹದಿ ಕುಟುಂಬ ಆಗ್ರಹಿಸಿದೆ. ಈ ಗಲ್ಲು ಶಿಕ್ಷೆ ತಪ್ಪಿಸಲು ಭಾರತ ಎಲ್ಲಾ ಪ್ರಯತ್ನ ಮಾಡುತ್ತಿದೆ. ಆದರೆ ಮೆಹದಿ ಕುಟುಂಬ ಮಾತ್ರ ಒಪ್ಪುತ್ತಿಲ್ಲ.
ದಿಯ್ಹಾ ಮೂಲಕ ಪಾರಾಗುತ್ತಾರಾ ನಿಮಿಷ ಪ್ರಿಯಾ?
ದಿಯ್ಹಾ ಅಂದರೆ ಇಸ್ಲಾಮಿಕ್ ಕಾನೂನಿನ ಹತ್ಯೆಗೆ ಪರಿಹಾರ ಪಡೆದು ಕ್ಷಮೆ ನೀಡುವುದಾಗಿದೆ. ನಿಮಿಷ ಪ್ರಿಯಾ ಪ್ರಕರಣದಲ್ಲಿ ಕೇಳಿಬರುತ್ತಿರುವ ಬ್ಲಡ್ ಮನಿ ಮಾತು. ನಿಮಿಷ ಪ್ರಿಯಾ ಕುಟುಂಬಸ್ಥರು ಅಥವಾ ಭಾರತ ನೀಡುವ ಪರಿಹಾರ ಮೊತ್ತ ಪಡೆದು ನಿಮಿಷ ಪ್ರಿಯಾಳ ಗಲ್ಲು ಶಿಕ್ಷೆ ತಪ್ಪಿಸುವುದಾಗಿದೆ. ಆದರೆ ಈ ಮಾತುಕತೆಗೆ, ಈ ನಿರ್ದಾರಕ್ಕೆ ತಲಾಲ್ ಕುಟುಂಬ ಒಪ್ಪುತ್ತಿಲ್ಲ. ಖಿಸಾಸ್ ಒಂದೇ ಮಾರ್ಗ ಎಂದು ಖಡಕ್ ಆಗಿ ಹೇಳಿದೆ.
ಖಿಸಾಸ್ ಶಿಕ್ಷೆ ಉದ್ದೇಶಪೂರ್ವಕವಾಗಿ ನಡೆಸಿದ ಕೊಲೆಗೆ ನೀಡುವ ಶಿಕ್ಷೆಯಾಗಿದೆ. ಈ ಪ್ರಕರಣದಲ್ಲಿ ನಿಮಿಷ ಪ್ರಿಯಾ ತಲಾಲ್‌ನನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿರುವುದಾಗಿ ಸಾಬೀತಾಗಿದೆ. ಇನ್ನು ದಿಯ್ಹಾ ಶಿಕ್ಷೆ ಅಚಾನಕ್ಕಾಗಿ ಅಥವಾ ಪರಿಸ್ಥಿತಿ, ಸಂದರ್ಭದಲ್ಲಿ ನಡೆದ ಹತ್ಯೆಗೆ ನೀಡುವ ಶಿಕ್ಷೆಯಾಗಿದೆ. ಇಲ್ಲಿ ತಲಾಲ್ ಕುಟುಂಬ ದಿಯ್ಹಾ ಸಾಧ್ಯವೇ ಇಲ್ಲ ಎಂದಿದೆ. ಉದ್ದೇಶಪೂರ್ವಕವಾಗಿ ನಡೆಸಿದ ಕೊಲೆಗೆ ಶಿಕ್ಷೆಯಲ್ಲಿ ಬೇರೆ ಮಾರ್ಗವಿಲ್ಲ. ತಲಾಲ್ ಕುಟುಂಬದ ನಿರ್ಧಾರ ಸ್ಪಷ್ಟವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಲಾಲ್ ಸಹೋದರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ