ಗುಜರಾತ್‌ನ 4, ಮ.ಪ್ರ.ದ 10 ನಗರಗಳಲ್ಲಿ ರಾತ್ರಿ ಕರ್ಫ್ಯೂ!

By Suvarna NewsFirst Published Mar 17, 2021, 9:47 AM IST
Highlights

ಗುಜರಾತ್‌ನ 4, ಮ.ಪ್ರ.ದ 10 ನಗರಗಳಲ್ಲಿ ರಾತ್ರಿ ಕರ್ಫ್ಯೂ| ಭೋಪಾಲ್‌ನಲ್ಲಿ ಪ್ರತಿಭಟನೆಗಳ ನಿಷೇಧ| ಕೋವಿಡ್‌ ನಿಯಂತ್ರಣಕ್ಕೆ ಈ ಕ್ರಮ

 

ಅಹಮದಾಬಾದ್‌/ಭೋಪಾಲ್‌(ಮಾ.17): ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಗುಜರಾತ್‌ನ 4 ನಗರಗಳು ಹಾಗೂ ಮಧ್ಯಪ್ರದೇಶದ 10 ನಗರಗಳಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದೆ.

ಗುಜರಾತ್‌ನ ಅಹಮದಾಬಾದ್‌, ಸೂರತ್‌, ವಡೋದರಾ ಹಾಗೂ ರಾಜಕೋಟ್‌ನಲ್ಲಿ ರಾತ್ರಿ 10ರಿಂದ ನಸುಕಿನ 6 ಗಂಟೆಯವರೆಗೆ ಕಫä್ರ್ಯ ವಿಧಿಸಲಾಗಿದೆ. ಮಾಚ್‌ರ್‍ 31ರವರೆಗೆ ಜಾರಿಯಲ್ಲಿರುತ್ತದೆ. ಗುಜರಾತ್‌ನಲ್ಲಿ ಸೋಮವಾರ 890 ಕೊರೋನಾ ಪ್ರಕರಣಗಳು ದಾಖಲಾಗಿದ್ದವು. ಕಳೆದ ತಿಂಗಳು ದೈನಂದಿನ ಕೇಸು ಸರಾಸರಿ 200 ಇತ್ತು.

ಇನ್ನು ಮಧ್ಯಪ್ರದೇಶದ ಭೋಪಾಲ್‌, ಇಂದೋರ್‌, ಗ್ವಾಲಿಯರ್‌, ಜಬಲ್‌ಪುರ, ಉಜ್ಜಯಿನಿ, ರತ್ಲಾಂ, ಛಿಂದ್ವಾಡಾ, ಬುರ್ಹಾನ್‌ಪುರ, ಬೇತುಲ್‌ ಹಾಗೂ ಖರ್ಗೋನ್‌ ಜಿಲ್ಲೆಗಳಲ್ಲಿ ಕೂಡ ರಾತ್ರಿ ಕಫä್ರ್ಯ ವಿಧಿಸಲಾಗಿದೆ. ಒಲ್ಲಿ ಮಾಚ್‌ರ್‍ 17ರ ರಾತ್ರಿ 10 ಗಂಟೆಯಿಂದ ಕರ್ಫ್ಯೂ ಜಾರಿಗೆ ಬರಲಿದೆ.

ಇದೇ ವೇಳೆ, ಭೋಪಾಲ್‌ನಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ಇತರ ಸಮಾರಂಭಗಳಿಗೆ 200 ಜನರ ಮಿತಿ ಹೇರಲಾಗಿದೆ.

click me!