ಪುದುಚೇರಿಯಲ್ಲಿ ಬಿಜೆಪಿ ಮೈತ್ರಿ ಜಯಭೇರಿ: ಸಮೀಕ್ಷೆ

By Suvarna NewsFirst Published Mar 17, 2021, 9:09 AM IST
Highlights

ಪುದುಚೇರಿಯಲ್ಲಿ ಬಿಜೆಪಿ ಮೈತ್ರಿ ಜಯಭೇರಿ: ಸಮೀಕ್ಷೆ| 3ನೇ 2 ಬಹುಮತ, ಕಾಂಗ್ರೆಸ್‌- ಡಿಎಂಕೆ ಧೂಳೀಪಟ| ಏಷ್ಯಾನೆಟ್‌- ಸಿ ಫೋರ್‌ ಚುನಾವಣಾಪೂರ್ವ ಸಮೀಕ್ಷೆ

ಪುದುಚೇರಿ(ಮಾ.17): ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಈವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌-ಡಿಎಂಕೆ ಮೈತ್ರಿಕೂಟ ಧೂಳೀಪಟವಾಗಲಿದೆ. ಅಣ್ಣಾಡಿಎಂಕೆ-ಎಐಎನ್‌ಆರ್‌ಸಿ-ಬಿಜೆಪಿ ಮೈತ್ರಿಕೂಟ ಭರ್ಜರಿ ಜಯ ಸಾಧಿಸಲಿದೆ ಎಂದು ‘ಕನ್ನಡಪ್ರಭ’ದ ಸೋದರ ಸಂಸ್ಥೆ ‘ಏಷ್ಯಾನೆಟ್‌ ನ್ಯೂಸ್‌-ಸಿ ಫೋರ್‌’ ಸಮೀಕ್ಷೆ ಹೇಳಿದೆ.

ಈ ಕೇಂದ್ರಾಡಳಿತ ಪ್ರದೇಶದಲ್ಲಿ 30 ವಿಧಾನಸಭಾ ಕ್ಷೇತ್ರಗಳಿವೆ. ಏಪ್ರಿಲ್‌ 6ರಂದು ಮತದಾನ, ಮೇ 2ರಂದು ಮತ ಎಣಿಕೆ ನಡೆಯಲಿದೆ. ಅಣ್ಣಾಡಿಎಂಕೆ-ಬಿಜೆಪಿ ಹಾಗೂ ಮಾಜಿ ಮುಖ್ಯಮಂತ್ರಿ ಎನ್‌. ರಂಗಸ್ವಾಮಿ ನೇತೃತ್ವದ ಅಖಿಲ ಭಾರತ ಎನ್‌ಆರ್‌ ಕಾಂಗ್ರೆಸ್‌ ಒಳಗೊಂಡ ಕೂಟ 23ರಿಂದ 27 ಸ್ಥಾನ ಗಳಿಸಲಿದ್ದು, ಮೂರನೇ ಎರಡರಷ್ಟುಬಹುಮತ ಸಂಪಾದಿಸಲಿದೆ. ಕಾಂಗ್ರೆಸ್‌-ಡಿಎಂಕೆ ಮೈತ್ರಿಕೂಟ ಕೇವಲ 3ರಿಂದ 7 ಹಾಗೂ ಇತರರು ಗರಿಷ್ಠ 1 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ವಿವರಿಸಿದೆ.

ಇದೇ ವೇಳೆ, ಶೇಕಡಾವಾರು ಮತಗಳಿಕೆಯಲ್ಲೂ ಅಣ್ಣಾಡಿಎಂಕೆ-ಎಐಎನ್‌ಆರ್‌ಸಿ-ಬಿಜೆಪಿ ಮೈತ್ರಿಕೂಟ ಪ್ರಚಂಡ ಪ್ರಗತಿ ಕಾಣಲಿದೆ. ಶೇ.52ರಷ್ಟುಮತ ಈ ಮೈತ್ರಿಕೂಟದ ಪಾಲಾಗಲಿದೆ. ಕಳೆದ ಚುನಾವಣೆಯಲ್ಲಿ ಪ್ರತಿಶತ 39ರಷ್ಟುಮತ ಪಡೆದಿದ್ದ ಕಾಂಗ್ರೆಸ್‌-ಡಿಎಂಕೆ ಮೈತ್ರಿಕೂಟ ಈ ಸಲ ಕೇವಲ ಶೇ.36ರಷ್ಟುಮತ ಗಳಿಸಲಿದೆ. ಇತರರು ಶೇ.12ರಷ್ಟುಮತ ಸಂಪಾದಿಸಬಹುದು ಎಂದು ವಿವರಿಸಲಾಗಿದೆ.

ಸ್ವಾಮಿ ಆಡಳಿತದ ಬಗ್ಗೆ ಅತೃಪ್ತಿ:

ಕಾಂಗ್ರೆಸ್‌ನ ನಿರ್ಗಮಿತ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ನೇತೃತ್ವದ ಆಡಳಿತದ ಬಗ್ಗೆ ಸಮೀಕ್ಷೆಯಲ್ಲಿ ಶೇ.44 ಮಂದಿ ‘ಅತೃಪ್ತಿ’ ವ್ಯಕ್ತಪಡಿಸಿದ್ದಾರೆ. ಶೇ.34ರಷ್ಟುಜನ ‘ಪರವಾಗಿಲ್ಲ’ ಎಂದಿದ್ದರೆ, ಶೇ.22ರಷ್ಟುಜನ ಮಾತ್ರ ‘ತೃಪ್ತಿ’ ವ್ಯಕ್ತಪಡಿಸಿದ್ದಾರೆ.

ಮೋದಿ ಪರ ‘ಜನಮತ’:

ಇನ್ನು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ಜನರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ.39ರಷ್ಟುಜನರು ಮೋದಿ ಉತ್ತಮ ಆಡಳಿತ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಶೇ.34ರಷ್ಟುಜನರು ‘ಉತ್ತಮವಾಗಿಲ್ಲ’ ಎಂದಿದ್ದರೆ, ಶೇ.27ರಷ್ಟುಜನರು ಏನೂ ಹೇಳುವುದಿಲ್ಲ ಎಂದು ಅಭಿಪ್ರಾಯ ಪ್ರಕಟಿಸಿದ್ದಾರೆ.

‘ಮೋದಿ ಅವರ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಲಿದೆಯೇ?’ ಎಂಬ ಪ್ರಶ್ನೆಗೆ ‘ಹೌದು’ ಎಂದು ಶೇ.45 ಹಾಗೂ ‘ಇಲ್ಲ’ ಎಂದು ಶೇ.37 ಮಂದಿ ಪ್ರತಿಕ್ರಿಯಿಸಿದ್ದಾರೆ.

ಸಮೀಕ್ಷೆಯ ಸ್ಯಾಂಪಲ್‌:

ಮಾಚ್‌ರ್‍ 5ರಿಂದ 12ರ ನಡುವಿನ ಅವಧಿಯಲ್ಲಿ 5077 ಮತದಾರರನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ.

click me!