NIA Raid: ಪಿಎಫ್‌ಐ - ಉಗ್ರ ಸಂಘಟನೆಗಳ ನಂಟಿನ ಬಗ್ಗೆ ತನಿಖೆ: 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

Published : Sep 08, 2022, 03:14 PM ISTUpdated : Sep 08, 2022, 06:07 PM IST
NIA Raid: ಪಿಎಫ್‌ಐ - ಉಗ್ರ ಸಂಘಟನೆಗಳ ನಂಟಿನ ಬಗ್ಗೆ ತನಿಖೆ: 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

ಸಾರಾಂಶ

ಸಮರ ಕಲೆಗಳ ತರಬೇತಿಯ ನೆಪದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದ ಆರೋಪದ ಹಿನ್ನೆಲೆ ಎನ್ಐ‌ಎ ಅಧಿಕಾರಿಗಳು ಬಿಹಾರದ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ರೇಡ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದೊಂದಿಗೆ (Popular Front of India) ನಂಟು ಹೊಂದಿರುವ ಶಂಕಿತ ಉಗ್ರಗಾಮಿ ಘಟಕದ (Terror Module) ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (National Investigative Agency) ಬಿಹಾರದ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ರೇಡ್‌ ಮಾಡಿದ್ದು, ಶೋಧ  ಕಾರ್ಯಾಚರಣೆ ನಡೆಸುತ್ತಿದೆ. ಸಮರ ಕಲೆಗಳ (Martial Arts) ತರಬೇತಿಯ ನೆಪದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದ ಆರೋಪದ ಹಿನ್ನೆಲೆ ಈ ರೇಡ್‌ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಹಾರದ ಛಾಪ್ರಾ, ಅರಾರಿಯಾ, ಔರಂಗಾಬಾದ್, ಕಿಶನ್‌ಗಂಜ್, ನಲಂದಾ ಮತ್ತು ಜೆಹಾನಾಬಾದ್‌ನಲ್ಲಿ ರೇಡ್‌ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ಈ ವರ್ಷ ಜುಲೈನಲ್ಲಿ ಮೂವರನ್ನು ಬಂಧಿಸುವುದರೊಂದಿಗೆ ಬಿಹಾರ ಪೊಲೀಸರು ಶಂಕಿತ ಭಯೋತ್ಪಾದನಾ ಘಟಕವನ್ನು ಭೇದಿಸಿದ ನಂತರ ಕೇಂದ್ರ ಗೃಹ ಸಚಿವಾಲಯವು (Union Home Ministry) ಈ  ಪ್ರಕರಣವನ್ನು ಎನ್ಐಎಗೆ (NIA) ಹಸ್ತಾಂತರಿಸಿತ್ತು. ಜಾರ್ಖಂಡ್‌ನ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾಲುದ್ದೀನ್ ಮತ್ತು ಅಥರ್ ಪರ್ವೇಜ್ ಅವರನ್ನು ಜುಲೈ 13 ರಂದು ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದಿಂದ ಬಂಧಿಸಲಾಯಿತು, ನಂತರ, ಬಿಹಾರ ಪೊಲೀಸರ ಕೋರಿಕೆಯ ಮೇರೆಗೆ ನೂರುದ್ದೀನ್ ಜಂಗಿಯನ್ನು 3 ದಿನಗಳ ಬಳಿಕ ಉತ್ತರ ಪ್ರದೇಶದ ಎಟಿಎಸ್ ಲಖನೌನಲ್ಲಿ ಬಂಧಿಸಿತು. 

Praveen Nettaru Murder Case: ದ.ಕ.ದಲ್ಲಿ 32ಕ್ಕೂ ಹೆಚ್ಚು ಕಡೆ NIA ದಾಳಿ!

ಅವರು PFI ಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಜಲಾವುದ್ದೀನ್ ಈ ಹಿಂದೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ನೊಂದಿಗೆ ಸಂಬಂಧ ಹೊಂದಿದ್ದನು… ಅವರು ಸ್ಥಳೀಯರಿಗೆ ಕತ್ತಿಗಳು ಮತ್ತು ಚಾಕುಗಳನ್ನು ಹೇಗೆ ಬಳಸಬೇಕೆಂದು ಕಲಿಸುತ್ತಿದ್ದರು ಮತ್ತು ಅವರನ್ನು ಕೋಮುಗಲಭೆಗೆ ಪ್ರಚೋದಿಸುತ್ತಿದ್ದರು. ಪಾಟ್ನಾದಲ್ಲಿ ಅವರನ್ನು ಭೇಟಿ ಮಾಡಲು ಬೇರೆ ರಾಜ್ಯಗಳ ಜನರು ಬರುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಇನ್ನು, ಆರೋಪಿಗಳು ತಮ್ಮ ಗುರುತನ್ನು ಮರೆಮಾಚಲು ಬಿಹಾರದ ರಾಜಧಾನಿಯ ಹೋಟೆಲ್‌ಗಳಲ್ಲಿ ತಂಗಿದ್ದಾಗ ತಮ್ಮ ಹೆಸರನ್ನು ಬದಲಾಯಿಸುತ್ತಿದ್ದರು ಎಂದು ಫುಲ್ವಾರಿ ಷರೀಫ್ ಸಹಾಯಕ ಪೊಲೀಸ್ ಅಧೀಕ್ಷಕ (Assistant Superintendent of Police) (ಎಎಸ್‌ಪಿ) ಮನೀಶ್ ಕುಮಾರ್ ಅವರನ್ನು ಬಂಧಿಸುವ ಸಮಯದಲ್ಲಿ ತಿಳಿಸಿದ್ದರು. ಈ ಮಧ್ಯೆ, ಜಲಾವುದ್ದೀನ್ ಮತ್ತು ಪರ್ವೇಜ್ ವಿರುದ್ಧ ಈ ಹಿಂದೆ ಶೋಧ ಕಾರ್ಯಾಚರಣೆ ನಡೆದ ವೇಳೆ ತಮಗೆ ಇಂಗ್ಲೀಷ್‌ನಲ್ಲಿ ಬರೆದಿದ್ದ 2 ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಬಿಹಾರ ಪೊಲೀಸರು ಹೇಳಿದ್ದಾರೆ - ‘ಇಂಡಿಯಾ 2047: ಟುವರ್ಡ್ಸ್ ರೂಲ್ ಆಫ್ ಇಸ್ಲಾಮಿಕ್ ಇಂಡಿಯಾ’ ಮತ್ತು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, 20 ಫೆಬ್ರವರಿ, 2021’ ಎಂಬ ಹೆಸರಿನ ಪಾಂಪ್ಲೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. 

2015 ರಲ್ಲಿ ಪಿಎಫ್‌ಐ ದರ್ಭಾಂಗ ಜಿಲ್ಲಾಧ್ಯಕ್ಷರೊಂದಿಗೆ ಸಂಪರ್ಕಕ್ಕೆ ಬಂದಿದ್ದಾಗಿ  ಮತ್ತು ಅಂದಿನಿಂದ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ನೂರುದ್ದೀನ್ ವಿಚಾರಣೆಯ ಸಮಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಯುಪಿ ಭಯೋತ್ಪಾದನಾ ನಿಗ್ರಹ ದಳ (Anti Terrorist Squad) (ಎಟಿಎಸ್) ಹೇಳಿತ್ತು. ಜಾರಿ ನಿರ್ದೇಶನಾಲಯವು ಜುಲೈನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಆರಂಭಿಸಿತ್ತು. ದೇಶದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆಗಳಿಗೆ ಉತ್ತೇಜನ ನೀಡಿದ ಆರೋಪದ ಮೇಲೆ, ಫೆಬ್ರವರಿ, 2020 ರಲ್ಲಿ ನಡೆದ ದೆಹಲಿ ಗಲಭೆಗಳು, ಹತ್ರಾಸ್ (ಉತ್ತರ ಪ್ರದೇಶದ ಜಿಲ್ಲೆ) ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ ಮತ್ತು ಸಾವಿನ ಪ್ರಕರಣದಲ್ಲಿ ಪಿತೂರಿ ಎಂದು ಆರೋಪಿಸಲಾದ ಕೆಲ ಪ್ರಕರಣಗಳಲ್ಲಿ ಪಿಎಫ್‌ಐ ಆಪಾದಿತ “ಆರ್ಥಿಕ ಸಂಪರ್ಕ” ಗಳ ಕುರಿತು ಸಂಸ್ಥೆ ತನಿಖೆ ನಡೆಸುತ್ತಿದೆ. 

Shivamogga Harsha Murder Case: ದೋಷಾರೋಪ ಪಟ್ಟಿ ಸಲ್ಲಿಸಿದ ರಾಷ್ಟೀಯ ತನಿಖಾ ತಂಡ

ಇಸ್ಲಾಮಿಸ್ಟ್ ಸಂಘಟನೆಯು 2006 ರಲ್ಲಿ ಕೇರಳದಲ್ಲಿ ರೂಪುಗೊಂಡಿತು ಮತ್ತು ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಲಖನೌನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಪಿಎಫ್‌ಐ ಮತ್ತು ಅದರ ಪದಾಧಿಕಾರಿಗಳ ವಿರುದ್ಧ ಇಡಿ 2 ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ. ಇದು ಜೂನ್‌ನಲ್ಲಿ ಈ ತನಿಖೆಗಳ ಭಾಗವಾಗಿ PFI ಮತ್ತು ಅದರ ಸಂಘಟನೆ ರಿಹಬ್ ಇಂಡಿಯಾ ಫೌಂಡೇಶನ್‌ನ 68.62 ಲಕ್ಷ ರೂ.ಗಿಂತ ಹೆಚ್ಚಿನ ಬ್ಯಾಂಕ್ ಠೇವಣಿಗಳನ್ನು ಲಗತ್ತಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!