ಅಲ್‌ಖೈದಾ ಚಟುವಟಿಕೆ; ಕರ್ನಾಟಕ ಸೇರಿ 9 ಕಡೆ ಎನ್‌ಐಎ ದಾಳಿ

By Kannadaprabha News  |  First Published Nov 12, 2024, 8:56 AM IST

ಕೆಲವು ಬಾಂಗ್ಲಾ ದೇಶಿ ಯುವಕರನ್ನು ಅಲ್ ಖೈದಾ ಪರ ಪ್ರಚಾರ ಮಾಡಿದ್ದರು. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ 2023ರಲ್ಲಿ ಐವರನ್ನು ಬಂಧಿಸಲಾಗಿತ್ತು.


ನವದೆಹಲಿ: ಭಾರತವನ್ನು ಅಸ್ಥಿರಗೊಳಿಸುವ ಅಲ್-ಖೈದಾ ಉಗ್ರ ಸಂಘಟನೆಯ ಸಂಚಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ವ್ಯಾಪಕ ಶೋಧ ನಡೆಸಿದೆ ಹಾಗೂ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಕೆಲವು ಬಾಂಗ್ಲಾ ದೇಶಿ ಯುವಕರನ್ನು ಅಲ್ ಖೈದಾ ಪರ ಪ್ರಚಾರ ಮಾಡಿದ್ದರು. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ 2023ರಲ್ಲಿ ಐವರನ್ನು ಬಂಧಿಸಲಾಗಿತ್ತು. 

ಇವರ ಬಗ್ಗೆ  ಸಹಾನುಭೂತಿ ಹೊಂದಿದ್ದ ಹಾಗೂ ಅಲ್ -ಖೈದಾ ಚಟುವಟಿಕೆಗಳನ್ನು ಬೆಂಬಲಿಸುವ ಮತ್ತು ಧನಸಹಾಯ ಮಾಡುವ ವ್ಯಕ್ತಿಗಳ ವಿರುದ್ಧ ಜಮ್ಮು-ಕಾಶ್ಮೀರ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ, ತ್ರಿಪುರಾ ಮತ್ತು ಅಸ್ಸಾಂನ 9 ಕಡೆ ಮಾಡಲಾಗಿದೆ.  ಈ ವೇಳೆ ಬ್ಯಾಂಕಿಂಗ್ ವಹಿವಾಟುಗಳು, ಮೊಬೈಲ್ ಫೋನ್, ಡಿಜಿಟಲ್ ಸಾಧನಗಳು ಮತ್ತು ಭಯೋತ್ಪಾದಕ ನಿಧಿ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಹೇಳಿದೆ.

Tap to resize

Latest Videos

click me!