ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ನೀಡುವಂತೆ ಸಿಎಂ ಪಿಣರಾಯಿ ವಿಜಯನ್ ಅವರನ್ನು ಸೋಮವಾರ ಕೊಚ್ಚಿಯಲ್ಲಿ ಭೇಟಿಯಾದ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕೊಚ್ಚಿ(ನ.12): ಕೇರಳದ ಎರ್ನಾಕುಲಂ ಜಿಲ್ಲೆಯ ಮುನಂಬಂ ಗ್ರಾಮವನ್ನು ಸಂಪೂರ್ಣವಾಗಿ ವಕ್ಫ್ ಆಸ್ತಿ ಎಂದು ಉಲ್ಲೇಖ ಮಾಡಿರುವುದರ ವಿರುದ್ಧ ಆರಂಭವಾಗಿರುವ ಪ್ರತಿಭಟನೆಗೆ ಇದೀಗ ಕೇರಳದ ಚರ್ಚ್‌ಗಳು ಕೂಡಾ ದೊಡ್ಡಮಟ್ಟದಲ್ಲಿ ಬೆಂಬಲ ವ್ಯಕ್ತಪಡಿಸಿ ಹೋರಾಟದ ಕಣಕ್ಕೆ ಧುಮುಕಿವೆ. ಇದರೊಂದಿಗೆ ಮನೆ, ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಮುನಂಬಂನ 600ಕ್ಕೂ ಹೆಚ್ಚು ಕುಟುಂಬಗಳ ಹೋರಾಟಕ್ಕೆ ದೊಡ್ಡ ಬಲ ಸಿಕ್ಕಂ ತಾಗಿದೆ. ಈ ನಡುವೆ ಕೇರಳದ ವಕ್ಫ್ ಗದ್ದಲದ ಕುರಿತು ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದಾರೆ.
ಕೇರಳ ಬಿಜೆಪಿ ನಾಯಕ ಶೋನ್ ಜಾರ್ಜ್ ಜೊತೆ ಅವರು ಸೋಮವಾರ ಕೇಂದ್ರ ಕಾನೂನು ಖಾತೆ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ನೀಡುವಂತೆ ಕೋರಿದ್ದಾರೆ. ಇದಕ್ಕೆ ಸಚಿವರು ಕೂಡಾ ಪೂರಕವಾಗಿ ಸ್ಪಂದಿಸಿದ್ದು ಸಂತ್ರಸ್ತರಿಗೆ ನ್ಯಾಯ ದೊರಕಿಸುವ ಭರವಸೆ ನೀಡಿದ್ದಾರೆ.
ಮಕ್ಕಳ ಕೈಗೆ ಪೆನ್ ಬದಲು ತಲ್ವಾರ್ ಕೊಡಿ: ಮರುಳಾರಾಧ್ಯ ಸ್ವಾಮೀಜಿ
1000 ಚರ್ಚ್‌ಗಳ ಬೆಂಬಲ:
ಮುನಂಬಂ ವಕ್ಫ್ ಆಸ್ತಿ ಗದ್ದಲದ ವಿರುದ್ದ ಭಾನುವಾರ ಕೇರಳದ 1000ಕ್ಕೂ ಹೆಚ್ಚು ಚರ್ಚ್‌ಗಳಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಚರ್ಚ್ ಗಳ ಅಧಿಕೃತ ಸಮುದಾಯ ಸಂಸ್ಥೆಯಾದ ಆಲ್ ಕೇರಳ ಕ್ಯಾಥಲಿಕ್ ಕಾಂಗ್ರೆಸ್ ಆಯೋಜಿಸಿದ್ದ ಈ ಸಭೆಯಲ್ಲಿ ವಿಶೇಷ ಪ್ರಾರ್ಥನೆ ಕೈಗೊಂಡು, ಗ್ರಾಮಸ್ಥರ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು. ಈ ವೇಳೆ ಮಾತನಾಡಿ ಸದಸ್ಯೆ ರೋಮಲಬಾರ್ ಚರ್ಚ್ ಮುಖ್ಯ ಸ್ಥಬಿಷಪ್ ರಾಫೆಲ್‌ತಟ್ಟಿಲ್, 'ಇದುಮಾನವೀಯ ಬಿಕ್ಕಟ್ಟಾಗಿದ್ದು, ಸಂವಿಧಾನದ ಪ್ರಕಾರ ಮಾನವೀಯ, ಪ್ರಜಾಸತ್ತಾತ್ಮಕ ರೀತಿಯಲ್ಲಿ ಪರಿಹರಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯ ಪ್ರವೇಶ ಅಗತ್ಯ ಎಂದು ಪ್ರತಿಪಾದಿಸಿದರು. ಜೊತೆಗೆ ಮುನಂಬಂ ಹೋರಾಟಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಘೋಷಿಸಿದರು.
ಸಿಎಂಗೆ ಮನವಿ:
ಈ ನಡುವೆ ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ನೀಡುವಂತೆ ಸಿಎಂ ಪಿಣರಾಯಿ ವಿಜಯನ್ ಅವರನ್ನು ಸೋಮವಾರ ಕೊಚ್ಚಿಯಲ್ಲಿ ಭೇಟಿಯಾದ ಗ್ರಾಮಸ್ಥರು ಮನವಿ ಮಾಡಿದ್ದಾರೆ.
* ಎರ್ನಾಕುಲಂ ಜಿಲ್ಲೆಯ ಇಡೀ ಮುನಂಬಂ ಗ್ರಾಮ ವಕ್ಸ್ ಆಸ್ತಿ ಎಂದು ದಾಖಲೆಯಲ್ಲಿ ಉಲ್ಲೇಖಿಸಿದ್ದು ಬೆಳಕಿಗೆ
* ಇದರ ವಿರುದ್ಧ 600 ಕುಟುಂಬಗಳ ಪ್ರತಿಭಟನೆ: ಜನರ ಹೋರಾಟಕ್ಕೆ ಚರ್ಚ್‌ಗಳ ಸಂಘಟನೆಯಿಂದಲೂ ಸಾಥ್
* ಹೋರಾಟದ ಬಗ್ಗೆ ದೆಹಲಿಯಲ್ಲಿ ಸರ್ಕಾರದ ಮಟ್ಟದಲ್ಲಿ ಧ್ವನಿಯೆತ್ತಿದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್
* ಕೇರಳದ ಬಿಜೆಪಿ ನಾಯಕರೊಂದಿಗೆ ತೆರಳಿ ಕಾನೂನು ಸಚಿವ ಕಿರಣ್ ರಿಜಿಜುಗೆ ದೂರು ನೀಡಿದ ಮಾಜಿ ಸಚಿವ
* ಕೇರಳದ ಗ್ರಾಮಸ್ಥರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಲು ಬಿಡಲ್ಲ ಎಂದು ಸಚಿವ ರಿಜಿಜು ಭರವಸೆ
* ಇತ್ತ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿಯಾಗಿ ದೂರು ಸಲ್ಲಿಸಿದ ಮುನಂಬಂ ಗ್ರಾಮಸ್ಥರು