
ನವದೆಹಲಿ (ನ.17) ದೆಹಲಿ ಕೆಂಪು ಕೋಟೆ ಬಳಿ ನಡೆಸಿದ ಉಗ್ರರ ಕಾರು ಸ್ಫೋಟ ಪ್ರಕರಣದಲ್ಲಿ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ತನಿಖೆ ತೀವ್ರಗೊಳ್ಳುತ್ತಿದ್ದಂತೆ ಇದೀಗ ಎನ್‌ಐಎ ಅಧಿಕಾರಿಗಳು ಪ್ರಕರಣ ಸಂಬಂಧ ಮತ್ತೊಬ್ಬನ ಬಂಧಿಸಿದ್ದಾರೆ. ಶ್ರೀನಗರದ ನಿವಾಸಿ, ದೆಹಲಿ ಸ್ಫೋಟದ ಪ್ರಮುಖ ರೂವಾರಿಗಳಲ್ಲಿ ಒಬ್ಬನಾಗಿರುವ ಜಸೀರ್ ಬಿಲಾಲ್ ವಾನಿ ಅಲಿಯಾಸ್ ದಾನೀಶ್‌ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಅನಂತನಾಗ್ ಜಿಲ್ಲೆಯ ಖಾಜಿಗುಂಡ್ ನಿವಾಸದಿಂದ ಜಸೀರ್ ಬಿಲಾಲ್‌ನ ಅರೆಸ್ಟ್ ಮಾಡಲಾಗಿದೆ.
ಜಸೀರ್ ಬಿಲಾಲ್ ವಾನಿ ಸಾಮಾನ್ಯದವನಲ್ಲ, ಈ ಉಗ್ರ ದೆಹಲಿ ಸ್ಫೋಟಕ್ಕೆ ಎಲ್ಲಾ ತಾಂತ್ರಿಕ ನೆರವು ನೀಡಿದ್ದ. ಇಷ್ಟೇ ಅಲ್ಲ ದೆಹಲಿ ಸ್ಫೋಟದ ಹಿಂದೆ ಅತೀ ದೊಡ್ಡ ವಿಧ್ವಂಸಕ ಕೃತ್ಯಕ್ಕೂ ಪ್ಲಾನ್ ಮಾಡಲಾಗಿತ್ತು. ಇದಕ್ಕಾಗಿ ಡ್ರೋನ್, ರಾಕೆಟ್ ಅಭಿವೃದ್ಧಿಪಡಿಸಲಾಗಿತ್ತು. ಡ್ರೋನ್ ಹಾಗೂ ರಾಕೆಟ್ ಅಬಿವೃದ್ಧಿ ಮಾಡಿ ಈ ಮೂಲಕ ಸ್ಫೋಟ ನಡೆಸಲು ಇದೇ ಜಸೀರ್ ಬಿಲಾಲ್ ಸಂಚು ರೂಪಿಸಿದ್ದ. ಈ ಜಸೀರ್ ಬಿಲಾಲ್, ದೆಹಲಿ ಸ್ಫೋಟದ ಪ್ರಮುಖ ರೂವಾರಿ ವೈದ್ಯ ಉಮರ್ ನಬಿ ಜೊತೆ ಕೆಲಸ ಮಾಡಿದ್ದ. ದೆಹಲಿ ಸ್ಫೋಟ ಹಾಗೂ ಇತರ ಸ್ಫೋಟಕ್ಕೆ ಪ್ಲಾನ್ ಮಾಡಿದ್ದ ಎಂದು ಎನ್ಐಎ ಅಧಿಕಾರಿಗಳ ತನಿಖೆಯಲ್ಲಿ ಬಯಲಾಗಿದೆ.
ಹಲವು ದಾಖಲೆಗಳಲ್ಲಿ ಜಸೀರ್ ಬಿಲಾಲ್ ವಾನಿ ದೆಹೆಲಿ ಸ್ಫೋಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ಇದೀಗ ಈ ಸ್ಫೋಟದ ಹಿಂದೆ ಕಾರ್ಯನಿರ್ವಹಿಸಿರು ಉಗ್ರರಿಗಾಗಿ ತನಿಖೆ ತೀವ್ರಗೊಂಡಿದೆ. ಇಡೀ ಜಾಲವನ್ನೇ ಬಂಧಿಸಲು ಎನ್ಐಎ ಪ್ಲಾನ್ ಮಾಡಿದೆ.
ಭಾರತದಲ್ಲಿ ಹಲವು ಸಂಘಟನೆಗಳನ್ನು ರಚಿಸಿ ಸಾಮಾಜಿಕ, ಶೈಕ್ಷಣಿ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳ ಹೆಸೆರಿನಲ್ಲಿ ಹೋರಾಟ, ಪ್ರತಿಭಟನೆ ಮೂಲಕ ಉಗ್ರ ಚಟುವಟಿಕೆ ನಡೆಸುತ್ತಿರುವುದು ಹೊಸ ವಿಚಾರವಲ್ಲ. ಈ ರೀತಿ ಹಲವು ಸಂಘಟನೆಗಳನ್ನು ಭಾರತ ಬ್ಯಾನ್ ಮಾಡಿದೆ. ಹೀಗಾಗಿ ಈ ನಿಷೇಧಿತ ಉಗ್ರ ಚಟುವಟಿಕೆ ನಡೆಸುವ ಸಂಘಟನೆಗಳು ಕಾರ್ಯನಿರ್ವಹಿಸುವುದು ಸುಲಭದ ಮಾತಲ್ಲ, ಹೀಗಾಗಿ ವೈದ್ಯರ ಸೋಗಿನಲ್ಲಿ ಯಾರಿಗೂ ಅನುಮಾನ ಬರದಂತೆ ಕೃತ್ಯ ನಡೆಸಲು ಪ್ಲಾನ್ ಮಾಡಲಾಗಿದೆ. ಈ ಪೈಕಿ ಫರೀದಾಬಾದ್‌ನ ಅಲ ಫಲಾಹ್ ವಿಶ್ವವಿದ್ಯಾಲಯದ ಹಲವು ವೈದ್ಯರು ದೆಹಲಿ ಸ್ಫೋಟ ಇದರ ಜೊತೆ ಇತರ ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ. ಇಷ್ಟೇ ಅಲ್ಲ ಕೆಲ ವೈದ್ಯರನ್ನು ಅರೆಸ್ಟ್ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ