ಹೀನಾಯ ಸೋಲು ಕಂಡರೂ 1 ಸ್ಥಾನದಿಂದ ತೇಜಸ್ವಿ ಯಾದವ್‌ಗೆ ವಿರೋಧ ಪಕ್ಷ ನಾಯಕ ಪಟ್ಟ?

Published : Nov 17, 2025, 07:05 PM IST
tejashwi yadav

ಸಾರಾಂಶ

ಹೀನಾಯ ಸೋಲು ಕಂಡರೂ 1 ಸ್ಥಾನದಿಂದ ತೇಜಸ್ವಿ ಯಾದವ್‌ಗೆ ವಿರೋಧ ಪಕ್ಷ ನಾಯಕ ಪಟ್ಟ, ಆರ್‌ಜೆಡಿ ಶಾಸಕರು ತೇಜಸ್ವಿ ಯಾದವ್ ವಿರೋಧ ಪಕ್ಷ ನಾಯಕ ಎಂದು ಆಯ್ಕೆ ಮಾಡಿದ್ದಾರೆ. 243ರಲ್ಲಿ 25 ಸ್ಥಾನ ಗೆದ್ದಿರುವ ಆರ್‌ಜೆಡಿಗೆ ವಿರೋಧ ಪಕ್ಷ ನಾಯಕನಾಗಲು ಸಾಧ್ಯವೇ? 

ಪಾಟ್ನಾ (ನ.17) ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ವಿರುದ್ಧ ಕಾಂಗ್ರೆಸ್, ಆರ್‌ಜೆಡಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಗಂಭೀರ ಆರೋಪ ಮಾಡುತ್ತಿದೆ. ಇತ್ತ 202 ಸ್ಥಾನಗಳನ್ನು ಗೆದ್ದಿರುವ ಎನ್‌ಡಿಎ ಸರ್ಕಾರ ರಚನೆ ತಯಾರಿ ಮಾಡುತ್ತಿದೆ. ಇಂದು ಆರ್‌ಜೆಡಿ ಪಕ್ಷದ ನೂತನ ಶಾಸಕರು ಸಭೆ ಸೇರಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ತೇಜಸ್ವಿ ಯಾದವ್ ಬಿಹಾರ ವಿಧಾನಸಭೆಯ ವಿರೋಧ ಪಕ್ಷ ನಾಯಕ ಎಂದು ಘೋಷಿಸಿದ್ದರೆ. ಇಂದು ನಡೆದ ಲೆಜಿಸ್ಲೇಟೀವ್ ಸಭೆಯಲ್ಲಿ ಆರ್‌ಜೆಡಿ ಶಾಸಕರು ತೇಜಸ್ವಿ ಯಾದವ್‌ನನ್ನು ಲೇಜಿಸ್‌ಸೇಚರ್ ಪಾರ್ಟಿ ಲೀಡರ್ ಎಂದು ಆಯ್ಕೆ ಮಾಡಿದ್ದಾರೆ. ಇದೀಗ ಆರ್‌ಜೆಡಿಗೆ ವಿರೋಧ ಪಕ್ಷ ನಾಯಕನಾಗಿ ಮುನ್ನಡೆಸುವಷ್ಟು ಸ್ಥಾನ ಇದೆಯಾ ಅನ್ನೋ ಚರ್ಚೆ ಶುರುವಾಗಿದೆ.

25 ಸ್ಥಾನ ಗೆದ್ದಿರುವ ಆರ್‌ಜೆಡಿಗೆ ಸಿಗುತ್ತಾ ವಿರೋಧ ಪಕ್ಷ ನಾಯಕ ಸ್ಥಾನ

ಬಿಹಾರದ ವಿಧಾನಭೆಯಲ್ಲಿ ಒಟ್ಟ 234 ಸ್ಥಾನಗಳಿವೆ. ಈ ಪೈಕಿ ಮಹಾಘಟಂಬದನ್ ಸೀಟು ಹಂಚಿಕೆಯಲ್ಲಿ ಗರಿಷ್ಠ ಪಾಲನ್ನು ಆರ್‌ಜೆಡಿ ಪಡೆದುಕೊಂಡಿತ್ತು. ಒಟ್ಟು 143 ಕ್ಷೇತ್ರದಲ್ಲಿ ಆರ್‌ಜೆಡಿ ಸ್ಪರ್ಧಿಸಿತ್ತು. ಈ ಪೈಕಿ 25 ಸ್ಥಾನ ಗೆದ್ದುಕೊಂಡಿದೆ. ಇಂದು ಮಹತ್ವದ ಸಭೆಯಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ, ಮಿಸಾ ಭಾರತಿ ಸೇರಿದಂತೆ ಹಲವು ಆರ್‌ಜೆಡಿ ಪ್ರಮುಖರು ಉಪಸ್ಥಿತರಿದ್ದರು.

ತೇಜಸ್ವಿ ವಿರೋಧ ಪಕ್ಷ ನಾಯಕನಾಗಲು ಸಾಧ್ಯವೇ?

ವಿಧಾನಸಭಾ ನಿಯಮಾವಳಿಗಳ ಪ್ರಕಾರ ವಿರೋಧ ಪಕ್ಷ ನಾಯಕನಾಗಲು ಒಟ್ಟು ವಿಧಾನಸಭಾ ಸ್ಥಾನಗಳ ಪೈಕಿ ಶೇಕಡಾ 10 ರಷ್ಟು ಸ್ಥಾನ ಗೆದ್ದಿರಬೇಕು. ಇದೀಗ ಬಿಹಾರ ವಿಧಾನಸಭೆಯಲ್ಲಿ 243 ಸ್ಥಾನಗಳಿವೆ. ಇದರಲ್ಲಿ ಶೇಕಡಾ 10 ಎಂದರೆ ವಿರೋದ ಪಕ್ಷ ನಾಯಕನಾಗಲು ಕನಿಷ್ಠ 24 ಸ್ಥಾನ ಗೆದ್ದಿರಬೇಕು. ಹೀಗಾಗಿ ಆರ್‌ಜೆಡಿ ಪಕ್ಷ 25 ಸ್ಥಾನ ಗೆದ್ದಿದೆ. ಈಗಾಗಲೇ ಆರ್‌ಜೆಡಿ ಶಾಸಕರು ತಮ್ಮ ನಾಯಕನಾಗಿ ತೇಜಸ್ವಿ ಯಾದವ್ ಅವರನ್ನು ಆಯ್ಕೆ ಮಾಡಿದೆ. ಹೀಗಾಗಿ ವಿಧಾನಸಭೆಯಲ್ಲಿ ತೇಜಸ್ವಿ ಯಾದವ್‌ಗೆ ವಿರೋಧ ಪಕ್ಷದ ನಾಯಕನಾಗಲು ಎಲ್ಲಾ ಅರ್ಹತೆ ಇದೆ.

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ 202 ಸ್ಥಾನ ಗೆದ್ದುಕೊಂಡರೆ, ಮಹಾಘಟಬಂದನ್ ಒಟ್ಟು 35 ಸ್ಥಾನ ಗೆದ್ದುಕೊಂಡಿದೆ. ಈ ಪೈಕಿ 25 ಸ್ಥಾನ ಆರ್‌ಜೆಡಿ ಗೆದ್ದುಕೊಂಡಿದೆ. ಇನ್ನು ಕಾಂಗ್ರೆಸ್ ಕೇವಲ 5 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಮೂಲಕ ಕಳೆದ ವಿಧಾನಸಭೆ ಚುನಾವಣೆಗಿಂತ ಈ ಬಾರಿ ಮಹಾಘಟಬಂದನ್ 79 ಸ್ಥಾನ ಕಳೆದುಕೊಂಡಿತು. 2020ರ ಚುನಾವಣೆಯಲ್ಲಿ ಕಾಂಗ್ರೆಸ್ 19 ಸ್ಥಾನ ಗೆದ್ದಿತ್ತು, ಈ ಬಾರಿ 5ಕ್ಕೆ ಇಳಿಕೆಯಾಗಿದೆ.ವಿಕಾಸ್ ಶೀಲ್ ಇನ್ಸಾನೆ ಪಾರ್ಟಿ ಕಳೆದ ಚುನಾವಣೆಯಲ್ಲಿ 16 ಸ್ಥಾನ ಗೆದ್ದಿತ್ತು, ಈ ಬಾರಿ ಕೇವಲ 3 ಸ್ಥಾನಕ್ಕೆ ಇಳಿಕೆಯಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ