ಉ.ಪ್ರ. ಶಾಸಕರಿಗೆ ಸದನದಲ್ಲಿ ಮೂಗುದಾರ: ದಾಖಲೆ ಹರಿಯುವಂತಿಲ್ಲ, ಮೊಬೈಲ್‌ ಒಯ್ಯುವಂತಿಲ್ಲ

By Kannadaprabha NewsFirst Published Aug 10, 2023, 9:01 AM IST
Highlights

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಶೀಘ್ರ ಹೊಸ ಬಿಗಿ ನಿಯಮಗಳು ಜಾರಿಗೆ ಬರಲಿದ್ದು, ಆ ಪ್ರಕಾರ ಶಾಸಕರು ತಮ್ಮ ಮೊಬೈಲ್ ಫೋನ್‌ಗಳನ್ನು ಸದನದೊಳಗೆ ತೆಗೆದುಕೊಂಡು ಹೋಗುವುದರ ಮೇಲೆ ನಿಷೇಧ ಹೇರಲಾಗುತ್ತದೆ. ಇದಲ್ಲದೆ, ದಾಖಲೆಗಳನ್ನು ಹರಿದು ಹಾಕುವಂತಿಲ್ಲ ಅಥವಾ ಸ್ಪೀಕರ್‌ಗೆ ಬೆನ್ನು ತೋರಿಸುವಂತಿಲ್ಲ ಎಂದು ಸೂಚಿಸಲಾಗಿದೆ.

ಲಖನೌ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಶೀಘ್ರ ಹೊಸ ಬಿಗಿ ನಿಯಮಗಳು ಜಾರಿಗೆ ಬರಲಿದ್ದು, ಆ ಪ್ರಕಾರ ಶಾಸಕರು ತಮ್ಮ ಮೊಬೈಲ್ ಫೋನ್‌ಗಳನ್ನು ಸದನದೊಳಗೆ ತೆಗೆದುಕೊಂಡು ಹೋಗುವುದರ ಮೇಲೆ ನಿಷೇಧ ಹೇರಲಾಗುತ್ತದೆ. ಇದಲ್ಲದೆ, ದಾಖಲೆಗಳನ್ನು ಹರಿದು ಹಾಕುವಂತಿಲ್ಲ ಅಥವಾ ಸ್ಪೀಕರ್‌ಗೆ ಬೆನ್ನು ತೋರಿಸುವಂತಿಲ್ಲ ಎಂದು ಸೂಚಿಸಲಾಗಿದೆ. ಇತ್ತೀಚೆಗೆ ಹೊಸ ನಿಯಮಗಳಿಗೆ ಸಂಬಂಧಿಸಿದ ಮಸೂದೆ ಮಂಡಿಸಲಾಗಿದ್ದು, ಹಳೆಯ 1958ರ ನಿಯಮಗಳು ಇದರ ಅಂಗೀಕಾರದ ನಂತರ ರದ್ದಾಗಲಿವೆ. ಕಳೆದ ಅಧಿವೇಶನದಲ್ಲಿ ಎಸ್‌ಪಿ ಶಾಸಕರೊಬ್ಬರು (SP MLA) ಸದನದ ಕಲಾಪಗಳನ್ನು ಫೇಸ್‌ಬುಕ್‌ನಲ್ಲಿ ಲೈವ್‌ ಸ್ಟ್ರೀಂ (Facebook Live Steam) ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೊಬೈಲ್‌ ನಿರ್ಬಂಧಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ, ಶಾಸಕರು ಸದನದಲ್ಲಿ ಯಾವುದೇ ದಾಖಲೆಗಳನ್ನು ಹರಿದು ಹಾಕುವಂತಿಲ್ಲ. ಅವರು ಭಾಷಣ ಮಾಡುವಾಗ ಗ್ಯಾಲರಿಯಲ್ಲಿ ಕೂತವರತ್ತ ಬೊಟ್ಟು ಮಾಡಿ ಯಾರನ್ನೂ ತೋರಿಸುವಂತಿಲ್ಲ ಅಥವಾ ಅವರನ್ನು ಹೊಗಳುವುದಿಲ್ಲ. ಶಾಸಕರು ಸ್ಪೀಕರ್‌ರತ್ತ ಬೆನ್ನು ಮಾಡಿ ಕೂರುವುದಾಗಲಿ ನಿಲ್ಲುವುದಾಗಲಿ ಮಾಡುವಂತಿಲ್ಲ. ಅವರು ಸದನದಲ್ಲಿ ಪ್ರದರ್ಶನಕ್ಕೆಂದು ಶಸ್ತ್ರಾಸ್ತ್ರಗಳನ್ನು ತರುವಂತಿಲ್ಲ. ಅಲ್ಲದೆ, ಸದಸ್ಯರು ಲಾಬಿಯಲ್ಲಿ ಧೂಮಪಾನ ಮಾಡುವಂತಿಲ್ಲ. ಜೋರಾಗಿ ಮಾತಾಡುವುದಾಗಲಿ ನಗುವುದಾಗಲಿ ಮಾಡುವಂತಿಲ್ಲ.

Latest Videos

ಬೆಂಗಳೂರು, ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸರ್ಕಾರದ ಹೊಸ ಗೆಸ್ಟ್‌ ಹೌಸ್‌!

ಶಾಸನ ಸಭೆಯ ಸದಸ್ಯರು (ಶಾಸಕರು) ಸಭಾಧ್ಯಕ್ಷರ ಪೀಠಕ್ಕೆ ನಮಸ್ಕರಿಸುವುದರ ಮೂಲಕ ಗೌರವವನ್ನು ತೋರಿಸಬೇಕು ಮತ್ತು ಸದನವನ್ನು ಪ್ರವೇಶಿಸುವಾಗ ಅಥವಾ ಹೊರಡುವಾಗ ಅಥವಾ ತಮ್ಮ ಆಸನಗಳಲ್ಲಿ ಕುಳಿತುಕೊಳ್ಳುವಾಗ ಅಥವಾ ಏಳುವಾಗ ಬೆನ್ನು ತೋರಿಸಬಾರದು ಎಂದು ನಿಯಮ ರೂಪಿಸಲಾಗಿದೆ.

ಶಾಸಕರರು ಯಾವುದೇ ಸಾಹಿತ್ಯ, ಪ್ರಶ್ನಾವಳಿ, ಪುಸ್ತಕ, ಪಕ್ಷದ ಧ್ವಜಗಳು, ಚಿಹ್ನೆಗಳು ಅಥವಾ ಪತ್ರಿಕಾ ವರದಿಗಳನ್ನು ಒಳಗೆ ತೆಗೆದುಕೊಳ್ಳಲು ಅಥವಾ ಕಲಾಪಕ್ಕೆ ಸಂಬಂಧಿಸದ ಸ್ಲಿಪ್‌ಗಳನ್ನು ವಿತರಿಸಲು ಅನುಮತಿ ಇಲ್ಲ. ಇದೇ ವೇಳೆ, ರಾಜ್ಯ ವಿಧಾನಸಭೆಯ ಅಧಿವೇಶನವನ್ನು ಕರೆಯುವ ಅವಧಿಯನ್ನು ಪ್ರಸ್ತುತ 14 ದಿನಗಳಿಂದ ಏಳು ದಿನಕ್ಕೆ ಇಳಿಸಲಾಗಿದೆ.

ಲೋಕಸಭೆಗೆ ಉತ್ತರ ಪ್ರದೇಶದಿಂದ ನಿತೀಶ್‌ ಸ್ಪರ್ಧೆಯ ಗುಸು ಗುಸು ಸುದ್ದಿ

click me!