
ಆಘಾತಕಾರಿ ಘಟನೆಯೊಂದರಲ್ಲಿ ನವವಿವಾಹಿತೆಯೊಬ್ಬರು ತಮ್ಮ ಸೋದರನಿಗೆ ಭಾವುಕ ಪತ್ರ ಬರೆದು ಸಾವಿಗೆ ಶರಣಾಗಿದ್ದಾಳೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಾಯುವ ಮೊದಲು ಆಕೆ ತನ್ನ ಸೋದರನಿಗೆ ಬರೆದ ಭಾವುಕ ಪತ್ರ ಮನಮಿಡಿಯುವಂತಿದೆ.
ಜೋಪಾನವಾಗಿರು ನನ್ನ ಪುಟ್ಟ ಸೋದರ, ಈ ಬಾರಿ ನಾನು ನಿನಗೆ ರಾಖಿ ಕಟ್ಟುವುದಕ್ಕೆ ಆಗುವುದಿಲ್ಲ ಎಂದು ಸಾಯುವುದಕ್ಕೆ ಮೊದಲು ತನ್ನ ಸೋದರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದು, ಇದು ಕುಟುಂಬದವರನ್ನು ಇನ್ನಷ್ಟು ದುಃಖಕ್ಕೀಡು ಮಾಡಿದೆ. 24 ವರ್ಷದ ಶ್ರೀವಿದ್ಯಾ ಸಾವಿಗೆ ಶರಣಾದ ಮಹಿಳೆ. ಕೇವಲ ಆರು ತಿಂಗಳ ಹಿಂದಷ್ಟೇ ಶ್ರೀವಿದ್ಯಾ ಮದುವೆ ರಾಂಬಾಬು ಜೊತೆ ನಡೆದಿತ್ತು. ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಶ್ರೀವಿದ್ಯಾ ಗ್ರಾಮದ ಸರ್ವೇಯರ್‌ರನ್ನು ಮದುವೆಯಾಗಿದ್ದರು. ಮದುವೆಯಾಗಿ ತಿಂಗಳು ಕಳೆಯುತ್ತಿದ್ದಂತೆ ಮನೆಯಲ್ಲಿ ಕಿರುಕುಳ ಶುರುವಾಗಿದೆ ಎಂದು ಶ್ರೀವಿದ್ಯಾ ಡೆತ್‌ನೋಟ್‌ನಲ್ಲಿ ಹೇಳಿಕೊಂಡಿದ್ದಾಳೆ.
ಪತಿ ರಾಂಬಾಬು ದಿನವೂ ಕುಡಿದು ಬಂದು ಹಲ್ಲೆ ಮಾಡುತ್ತಾನೆ. ಹಾಗೂ ಆತ ಕೆಟ್ಟ ಮಾತುಗಳಿಂದ ನಿಂದಿಸುತ್ತಾನೆ. ಇತರ ಮಹಿಳೆಯರ ಮುಂದೆ ತನ್ನನ್ನು ನಿಷ್ಪ್ರಯೋಜಕಿ ಎಂದು ಹೇಳುತ್ತಾನೆ, ತಲೆಯನ್ನು ಹಿಡಿದು ಗೋಡೆಗೆ ಬಡಿಯುವ ಮೂಲಕ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾನೆ. ಆತನ ಹಿಂಸೆ ತಾಳಲಾಗದೇ ಸಾವಿಗೆ ಶರಣಾಗುತ್ತಿದ್ದೇನೆ ಎಂದು ಶ್ರೀವಿದ್ಯಾ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಈಗ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ಮಗನ ಮುಂದೆಯೇ ಗಂಡನ ಕೊಂದು ಸಾವಿಗೆ ಶರಣಾದ ಹೆಂಡ್ತಿ
ಹಾಗೆಯೇ ಮತ್ತೊಂದು ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ಪತಿಯೋರ್ವನನ್ನು ಪತ್ನಿಯೇ ಕೊಲೆ ಮಾಡಿದ್ದಾಳೆ. 7 ವರ್ಷದ ಅಪ್ರಾಪ್ತ ಮಗನ ಮುಂದೆಯೇ ಗಂಡನ ಹತ್ಯೆ ಮಾಡಿದ ಹೆಂಡ್ತಿ ಬಳಿಕ ತಾನು ಸಾವಿಗೆ ಶರಣಾಗಿದ್ದಾಳೆ. ಅಹ್ಮದಾಬಾದ್‌ನ ಡ್ಯಾನಿಲಿಮ್ಡಾ ಪೊಲೀಸ್ ಲೈನ್‌ನಲ್ಲಿ ಇರುವ ಮನೆಯಲ್ಲಿ ಈ ದಂಪತಿ ವಾಸ ಮಾಡುತ್ತಿದ್ದರು. ಈ ದಂಪತಿ ವಾಸವಿದ್ದ ಕ್ವಾರ್ಟರ್ಸ್‌ನಲ್ಲಿಯೇ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತ ರವಿ ಮೋಹನ್ ಸೈನಿ ತಿಳಿಸಿದ್ದಾರೆ.
ಎ ಡಿವಿಷನ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮುಖೇಶ್ ಪರ್ಮಾರ್ ಹಾಗೂ ಅವರ ಪತ್ನಿ ಸಂಗೀತಾ ನಡುವೆ ದೀರ್ಘಕಾಲದ ವೈವಾಹಿಕ ಸಮಸ್ಯೆಗಳಿದ್ದವು. ನಿನ್ನೆಯೂ ಬೆಳಗ್ಗೆ ದಂಪತಿಗಳ ನಡುವೆ ಜಗಳ ನಡೆದಿದೆ. ಜಗಳದ ವೇಳೆ ಸಂಗೀತಾ ಮರದ ಕೋಲಿನಿಂದ ಗಂಡನ ತಲೆಗೆ ಹೊಡೆದ ಪರಿಣಾಮ ಪರ್ಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಂತರ ಸಂಗೀತಾ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ದಾಂಪತ್ಯ ಹಾಗೂ ಆರ್ಥಿಕ ಸಮಸ್ಯೆಗಳಿಂದಾಗಿ ಆರಂಭವಾದ ಜಗಳ ದುರಂತ ಅಂತ್ಯಕಂಡಿದೆ ಎಂದು ಡಿಸಿಪಿ ಸೈನಿ ಹೇಳಿದರು.
ವಿಶೇಷ ಮನವಿ:
ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ, ಕಷ್ಟಗಳಿದ್ದರೆ ಆತ್ಮೀಯರಿಗೆ ಹೇಳಿಕೊಳ್ಳಿ, ಏನೇ ಕಷ್ಟಗಳಿದ್ದರೂ ಆ ಸಮಯ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:
Sahai Helpline - 080 2549 7777
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ