ಶ್ರೀರಾಮನ ಜನ್ಮಭೂಮಿಯಿಂದ ಸೀತಾ ಮಾತೆ ಊರಿಗೆ ರೈಲು, ಇಲ್ಲಿ ಟ್ರೈನ್ ಪ್ರಯಾಣ ವೇಳಾಪಟ್ಟಿ

Published : Nov 23, 2026, 02:54 PM IST
ayodhya janakpur saryu kamla express train route timetable 2026

ಸಾರಾಂಶ

ಶ್ರೀರಾಮ ಜನ್ಮಭೂಮಿಯಿಂದ ಸೀತಾ ಮಾತೆ ಊರಿಗೆ ವಿಶೇಷ ರೈಲು ಸೇವೆ ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ಬಲೆನ್ ಶಾ ಈ ರೈಲಿಗೆ ಚಾಲನೆ ನೀಡಿದ್ದಾರೆ. ರೈಲು ಟಿಕೆಟ್, ಮಾರ್ಗ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ನವದೆಹಲಿ (ನ.23) ಭಾರತ ಹಾಗೂ ನೇಪಾಳ ಧಾರ್ಮಿತ, ಸಾಂಸ್ಕೃತಿಕ ಸೇರಿದಂತೆ ಎಲ್ಲಾ ರೀತಿಯಲ್ಲೂ ಬಾಂಧವ್ಯ ಹೊಂದಿದೆ. ಇದೀಗ ಈ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಲು ಭಾರತ ಹಾಗೂ ನೇಪಾಳ ಆಯೋಧ್ಯೆದಿಂದ ಜನಕಪುರ ಧಾಮ ಬೆಸೆಯುವ ಹೊಸ ರೈಲು ಸೇವೆಗೆ ಚಾಲನೆ ನೀಡಿದೆ. ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಬಲೆನ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ರೈಲಿಗೆ ಚಾಲನೆ ನೀಡಿದ್ದಾರೆ. ಸರಯೂ-ಕಮಲಾ ಎಕ್ಸ್‌ಪ್ರೆಸ್' (Sarayu-Kamala Express) ರೈಲಿಗೆ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿದ್ದಾರೆ.

604 ಕಿಲೋಮೀಟರ್ ಪ್ರಯಾಣ ಹಾಗೂ ವೇಳಾಪಟ್ಟಿ

ಸರಯೂ ಕಮಲಾ ಎಕ್ಸ್‌ಪ್ರೆಸ್ ರೈಲು ಒಟ್ಟು ದೂರು 604 ಕಿಲೋಮೀಟರ್. ಉತ್ತರ ಪ್ರದೇಶದ ಆಯೋಧ್ಯೆ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಹೊರಡುವ ಈ ರೈಲು ನೇಪಾಳದ ಜನಕಪುರ ಧಾಮ ಸಂಪರ್ಕಿಸಲಿದೆ. 604 ಕಿಲೋಮೀಟರ್ ದೂರವನ್ನು 19 ಗಂಟೆಗಳಲ್ಲಿ ಕ್ರಮಿಸಲಿದೆ. ಇದು ನೇರ ಸಂಪರ್ಕದ ರೈಲಾಗಿದೆ, ಪ್ರಯಾಣಿಕರು ರೈಲು ಬದಲಿಸುವ ಅವಶ್ಯತೆ ಇಲ್ಲ.

ನವೆಂಬರ್ 28ರಂದು ಸಾರ್ವಜನಿಕರಿಗೆ ಈ ರೈಲು ಸೇವೆ ಲಭ್ಯವಿದೆ. ಪ್ರತಿ ಸೋಮವಾರ ಸಂಜೆ 5.50ಕ್ಕೆ ಆಯೋಧ್ಯೆಯಿಂದ ಈ ರೈಲು ಇನ್ನು ಇದೇ ರೈಲು ಶನಿವಾರ ಮಧ್ಯಾಹ್ನ 1.10ಕ್ಕೆ ನೇಪಾಳದ ಜನಕಪುರ ಧಾಮದಿಂದ ಹೊರಡಲಿದೆ.ರೈಲು ಸಂಖ್ಯೆ 15596ಈ ಸೇವೆ ನೀಡಲಿದೆ. ಒಟ್ಟು 17 ಬೋಗಿ ಹೊಂದಿರುವ ಈ ರೈಲು ಆರಾಮದಾಯಕ ಹಾಗೂ ಅತ್ಯಂತ ಸುಂದರ ತಾಣಗಳ ಮೂಲಕ ಪ್ರಯಾಣ ಬೆಳೆಸಲಿದೆ. ಆಯೋಧ್ಯೆ, ಮಂಕಪುರ, ಬಸ್ತಿ, ಗೋರಖಪುರ, ನರಕಟಿಯಾಗಂಜ್, ರಕ್ಸೌಲ್, ಸೀತಾಮಢಿ, ಶಿಶೋ, ಮಧುಬನಿ, ಜಯನಗರ ಸೇರಿದಂತೆ ಪ್ರಮುಖ ತಾಣಗಳಲ್ಲಿ ನಿಲುಗಡೆಯಾಗಲಿದೆ.

ಭಾರತದ ಭಕ್ತರು ಜನಕಪುರ ಧಾಮಕ್ಕೆ ಭೇಟಿ ನೀಡಲು ಹಾಗೆ ನೇಪಾಳದ ಭಕ್ತರು ರಾಮ ಲಲ್ಲಾ ದರ್ಶನ ಪಡೆಯಲು ಈ ರೈಲಿನಿಂದ ಸಾಧ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದೇ ವೇಳೆ ನೇಪಾಳವಿಲ್ಲದೆ ನಮ್ಮ ರಾಮ ಅಪೂರ್ಣ ಎಂದು ಪ್ರಧಾನಿ ಮೋದಿ ಭಾವುಕರಾಗಿ ಹೇಳಿದ್ದಾರೆ. ಇದೇ ವೇಳೆ ನೇಪಾಳದ ಪ್ರವಾಹದ ಪರಿಣಾಮ ಪುನಿರ್ನಿಮಾಣಕ್ಕೆ 24,000 ಕೋಟಿ ನೇಪಾಳಿ ರೂಪಾಯಿ ಅಭಿವೃದ್ೋಧಿ ಪ್ಯಾಕೇಜ್ ಘೋಷಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಮದುವೆ ಬೇಡ, ಓದಬೇಕು' ಪಟ್ಟು ಹಿಡಿದ ಬಾಲಕಿ; ಹೀಮಾಳ ಧೈರ್ಯಕ್ಕೆ ಫಿದಾ ಆದ ಫುಟ್‌ಬಾಲ್ ದಿಗ್ಗಜ ಡೇವಿಡ್ ಬೆಕ್‌ಹ್ಯಾಮ್
ಪ್ರತಿದಿನ ಸಮಾಜ ಸೇವೆಗೆ 7.1 ಕೋಟಿ ರುಪಾಯಿ ದಾನ ಮಾಡಿದ ದಕ್ಷಿಣ ಭಾರತದ ಉದ್ಯಮಿ..! ಅದಾನಿ, ನಾರಾಯಣಮೂರ್ತಿ ದೇಣಿಗೆ ಕೊಟ್ಟಿದ್ದೆಷ್ಟು?