ಸೌರವ್ ದಾಸ್‌, ರಾಂಕಾ ಬಿಡುಗಡೆ ಬಳಿಕ ಸಿಜೆಪಿಯಿಂದ ಹೊಸ ರಣತಂತ್ರ: ಅಭಿಜೀತ್‌ ದೀಪ್ಕೆ

Published : Oct 19, 2026, 06:14 AM IST
dipke ranka das

ಸಾರಾಂಶ

ನ್ಯಾಯಾಂಗ ಬಂಧನದಲ್ಲಿರುವ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶೋಕ್ ರಾಂಕಾ ಬಿಡುಗಡೆಯಾದ ಬಳಿಕ ಹೊಸ ರಣತಂತ್ರ ರೂಪಿಸುವುದಾಗಿ ಅಭಿಜೀತ್‌ ದೀಪ್ಕೆ ತಿಳಿಸಿದ್ದಾರೆ. ಜಂತರ್ ಮಂತರ್ ಪ್ರವೇಶಿಸಿದ ಆರೋಪದ ಮೇಲೆ ಬಂಧಿತರಾಗಿರುವ ಇವರ ಜಾಮೀನು ಶ್ಯೂರಿಟಿಗಳನ್ನು ತಿರಸ್ಕರಿಸಲಾಗಿದೆ.

ನವದೆಹಲಿ: ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶೋಕ್ ರಾಂಕಾ ಬಿಡುಗಡೆಯಾಗಿ ಬಂದ ನಂತರ ಮುಂದಿನ ಪ್ರತಿಭಟನೆಯ ಕುರಿತು ಮರು ರಣತಂತ್ರವನ್ನು ರೂಪಿಸುತ್ತೇವೆ ಎಂದು ಸಿಜೆಪಿ ಸ್ಥಾಪಕ ಅಭಿಜೀತ್‌ ದೀಪ್ಕೆ ಭಾನುವಾರ ತಿಳಿಸಿದ್ದಾರೆ.

‘ಸೌರವ್‌ ಮತ್ತು ಆಶು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸೌರವ್‌ ಮತ್ತು ಆಶು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ. ಅವರು ಬಿಡುಗಡೆಯಾಗಿ ಬಂದನಂತರ ನಮ್ಮ ಮುಂದಿನ ಹೆಜ್ಜೆಗಳ ಬಗ್ಗೆ ನಿರ್ಧರಿಸಲು ಸಭೆ ಸೇರಿ ಹೊಸ ರಣತಂತ್ರ ರೂಪಿಸುತ್ತೇವೆ. ನಮಗೆ ಎಷ್ಟೇ ಬೆದರಿಕೆ ಹಾಕಿದರೂ ಹಿಂದೆ ಸರಿಯುವುದಿಲ್ಲ. ಇದು ಸುದೀರ್ಘ ಹೋರಾಟವಾಗಿದ್ದು, ಇದಕ್ಕೆ ಸಂಪೂರ್ಣವಾಗಿ ಸಿದ್ಧರಿದ್ದೇವೆ’ ಎಂದು ಸ್ಪಷ್ಟಪಡಿಸಿದರು. ಇತ್ತೀಚೆಗಷ್ಟೇ ದೀಪ್ಕೆಯನ್ನು ಬಂಧಿಸಿ, 1 ವರ್ಷ ಕಾಲ ಶಾಂತಿ ಕದಡದಂತೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ.

ದಾಸ್‌, ರಾಂಕಾ ಸಲ್ಲಿಸಿದ್ದ 4 ಜಾಮೀನು ಶ್ಯೂರಿಟಿ ತಿರಸ್ಕಾರ

ನವದೆಹಲಿ: ನ್ಯಾಯಾಂಗ ಬಂಧನದಲ್ಲಿರುವ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರು ಜಾಮೀನಿಗಾಗಿ ಸಲ್ಲಿಸಿದ್ದ 4 ಶ್ಯೂರಿಟಿಗಳನ್ನು (ಖಾತ್ರಿ) ಅಸ್ಪಷ್ಟ ಕಾರಣ ನೀಡಿ ತಿರಸ್ಕರಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ರತ್ನಾ ಸಿಂಗ್‌ ತಿಳಿಸಿದ್ದಾರೆ.ನಿಷೇಧಿತ ಜಂತರ್ ಮಂತರ್ ಪ್ರವೇಶಿಸಿದ ಆರೋಪದ ಮೇಲೆ ಅ.14ರಂದು ದಾಸ್‌ ಮತ್ತು ರಾಂಕಾರನ್ನು 5 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.

ದೀಪ್ಕೆ ಪ್ರತಿಭಟನೆಗೆ ದೆಹಲಿ ಪೊಲೀಸ್‌ 1 ವರ್ಷ ನಿರ್ಬಂಧ?

ಅನುಮತಿ ನಿರಾಕರಣೆ ಹೊರತಾಗಿಯೂ ಶುಕ್ರವಾರ ದೆಹಲಿಯಲ್ಲಿ ‘ಲೆಹರಾದೋ ತಿರಂಗಾ’ ಹೆಸರಿನಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಕಾರಣಕ್ಕೆ ಪೊಲೀಸರು ಬಂಧಿಸಿದ್ದ ಜಿರಳೆ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ, ವಶದಲ್ಲಿದ್ದ ಎಐಎಸ್‌ಎ ಸಂಘಟನೆ ನಾಯಕಿ ನೇಹಾ ಬೋರಾರನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ನೇಹಾರನ್ನು ಶನಿವಾರ ಬೆಳಗ್ಗೆಯೇ ಬಿಡುಗಡೆ ಮಾಡಲಾಗಿದ್ದರೆ, ದೀಪ್ಕೆಯನ್ನು ಶನಿವಾರ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಮುಂದಿನ 1 ವರ್ಷ ಕಾಲ ಶಾಂತಿ ಕಾಪಾಡುವ ‘ಶಾಂತಿ ಮುಚ್ಚಳಿಕೆ’ ಬರೆದುಕೊಟ್ಟ ಬಳಿಕ ಬಿಡುಗಡೆ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಚೀನಾದ ಸಹಯೋಗದೊಂದಿಗೆ ಚಂದ್ರನೂರಿಗೆ ಹೊರಟ ಪಾಕಿಸ್ತಾನ; 2035ಕ್ಕೆ ಚಂದ್ರಯಾನದ ಗುರಿ
Mumbai: ಸಾವು-ಬದುಕಿನ ಮಧ್ಯೆ ಹೋರಾಟ; ಡ್ರೈವರ್‌ಗೆ ಶೂಟ್ ಮಾಡಿದ್ರೂ ಗಾಡಿ ನಿಲ್ಲಿಸದ 'ಟೈಗರ್'! ಮನಗೆದ್ದ 2 ನಿಮಿಷದ ವಿಡಿಯೋ