Farmer Success Story: ಜಸ್ಟ್ 12 ಗುಂಟೆ ಜಮೀನಿನಲ್ಲಿ ವರ್ಷಕ್ಕೆ 3.37 ಲಕ್ಷ ರೂ. ಆದಾಯ ಗಳಿಸುತ್ತಿರುವ ಯುವಕ

Published : Oct 18, 2026, 05:43 PM IST
gaurav maurya uttar pradesh Farmer

ಸಾರಾಂಶ

ಯುವ ರೈತ ಗೌರವ್ ಮೌರ್ಯ ಕೇವಲ 12 ಗುಂಟೆ ಜಮೀನಿನಲ್ಲಿ ಕಸಿ ಮಾಡಿದ ಬದನೆಕಾಯಿ ಬೆಳೆದು ಲಕ್ಷಾಂತರ ರೂಪಾಯಿ ಲಾಭ ಗಳಿಸಿದ್ದಾರೆ. ಕೃಷಿಯ ಜೊತೆಗೆ ನರ್ಸರಿ ಉದ್ಯಮವನ್ನು ಪ್ರಾರಂಭಿಸಿ, ಕಸಿ ಮಾಡಿದ ಸಸಿಗಳನ್ನು ಮಾರಾಟ ಮಾಡುವ ಮೂಲಕ ವಾರ್ಷಿಕ 16 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ.

ಆಧುನಿಕತೆ ಬೆಳೆದಂತೆ ರೈತರು ಕೂಡ ಸ್ಮಾರ್ಟ್ ಆಗುತ್ತಿದ್ದಾರೆ. ವಾಣಿಜ್ಯ ಬೆಳೆಗಳು, ಹಣ್ಣು ಹಾಗೂ ಪ್ರಕೃತಿ ವ್ಯವಸಾಯದ ಕಡೆಗೆ ಇಂದಿನ ಯುವ ರೈತರು ಮುಂದಾಗುತ್ತಿದ್ದಾರೆ. ಇಂತಹದ್ದೆ ಹಾದಿಯಲ್ಲಿ ಹೆಜ್ಜೆ ಹಾಕಿರುವ ಯುವ ರೈತನೋರ್ವ ಜಸ್ಟ್ 12 ಗಂಟೆ ಜಮೀನಿನಲ್ಲಿ ಕೃಷಿಯ ಮಾಡಿ ಲಕ್ಷ ಲಕ್ಷ ಆದಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯುವ ರೈತ ಅಷ್ಟಕ್ಕೂ ಬಳಸಿದ ತಂತ್ರಜ್ಞಾನವೇನು? ಹೇಗೆ ಎಷ್ಟೆಲ್ಲಾ ಲಾಭ ಆಯ್ತು ಅಂತ ನಾವು ಹೇಳ್ತೀವಿ ಕೇಳಿ.

112 ಕ್ವಿಂಟಾಲ್ ಬದನೆಕಾಯಿ ಕೊಯ್ಲು

ಅದು 2023ರ ಏಪ್ರಿಲ್, ಉತ್ತರ ಪ್ರದೇಶದ ಸೋನ್ ಭದ್ರ ಜಿಲ್ಲೆಯ ರೈತ ಗೌರವ್ ಮೌರ್ಯ 12 ಗುಂಟೆ ಭೂಮಿಯಲ್ಲಿ ಕಸಿ ಮಾಡಿದ ಬದನೆಕಾಯಿ ಬೆಳೆಯಲು ಮೊದಲ ಪ್ರಯತ್ನ ಮಾಡಿದ್ದರು. ಈ ಪ್ರಯತ್ನ ಯಶಸ್ವಿಯಾಗಿ 112 ಕ್ವಿಂಟಾಲ್ ಬದನೆಕಾಯಿ ಕೊಯ್ಲು ಮಾಡಿದ್ದರು. ಇದರಿಂದ 2.27 ಲಕ್ಷ ರೂಪಾಯಿ ಲಾಭ ಸಿಕ್ಕಿತ್ತು.

ಇದರೊಂದಿಗೆ ಮತ್ತಷ್ಟು ಭೂಮಿಯಲ್ಲಿ ಕೃಷಿ ಮಾಡಲು ಮುಂದಾದರು. ಅಲ್ಲದೇ ಕಸಿ ಮಾಡಿದ ಬದನೆಕಾಯಿ ಸಸಿಗಳನ್ನು ಉತ್ಪಾದಿಸಲು ಪ್ರಾರಂಭಿಸಿದ್ದರು. ಇದರಂತೆ ಸುಮಾರು 75 ಸಾವಿರ ಸಸಿಗಳಿಗೆ ಕಸಿ ಮಾಡಿ, ಟೊಮೆಟೊ ಮತ್ತು ಬದನೆಕಾಯಿ ಸಸಿಗಳನ್ನು ಮಾರಾಟ ಮಾಡಿ 3.37 ಲಕ್ಷ ರೂಪಾಯಿ ಲಾಭ ಗಳಿಸಿದ್ದರು.

ಮೊದಲ ಕೃಷಿಯಲ್ಲೇ ಸುಮಾರು 2.27 ಲಕ್ಷ ರೂಪಾಯಿ ಆದಾಯ

ಸದ್ಯ ಈ ಉದ್ಯಮವನ್ನು ಉತ್ತರ ಪ್ರದೇಶ ಮಾತ್ರವಲ್ಲದೇ ಇತರೇ ಪ್ರದೇಶಗಳಿಗೂ ವಿಸ್ತರಣೆ ಮಾಡಿದ್ದಾರೆ. ಕೃಷಿಯೊಂದಿಗೆ ನರ್ಸರಿ ಉದ್ಯಮವನ್ನು ಅಭಿವೃದ್ಧಿಪಡಿಸಿ, ಲಕ್ಷ ಲಕ್ಷ ರೂಪಾಯಿ ಲಾಭ ಗಳಿಸುತ್ತಿದ್ದಾರೆ. ಗೌರವ್, ಮೊದಲು ಸೋಲನಮ್ ಟಾರ್ವಮ್ ಬೇರುಕಾಂಡಕ್ಕೆ ಕಸಿ ಮಾಡಿದ ಹೈಬ್ರಿಡ್ ಬದನೆಕಾಯಿ ಸಸಿಗಳೊಂದಿಗೆ ಹೊಸ ಪ್ರಯೋಗ ಮಾಡಿದ್ದರು. ಇದರೊಂದಿಗೆ ಮೊದಲ ಕೃಷಿಯಲ್ಲಿ ಸರಾಸರಿಯಾಗಿ ಕೆಜಿ ಬದನೆಕಾಯಿಯನ್ನು 42 ರೂಪಾಯಿಗೆ ಮಾರಾಟ ಮಾಡಿ, 112 ಕ್ವಿಂಟಾಲ್‌ಗೆ ಸುಮಾರು 2.27 ಲಕ್ಷ ರೂಪಾಯಿ ಆದಾಯ ಗಳಿಸಿದ್ದರು.

ಕೃಷಿಯೊಂದಿಗೆ ನರ್ಸರಿ ಉದ್ಯಮ

ಗೌರವ್ ಅವರು ಹೇಳಿರುವಂತೆ, ಒಂದು ಕಸಿ ಮಾಡಿರುವ ಸಸಿಯನ್ನು 8-10 ರೂಪಾಯಿ ವೆಚ್ಚವಾಗುತ್ತದೆ. ಈ ಸಸಿಯನ್ನು 12 ರಿಂದ 13 ರೂಪಾಯಿ ವರೆಗೂ ಮಾರಾಟ ಮಾಡಲಾಗುತ್ತದೆ. ರೈತರು ಅಗತ್ಯವಿರುವ ಸಸಿಗಳನ್ನು ಮೊದಲೇ ಅರ್ಡರ್ ಮಾಡಿದರೆ ಮಾತ್ರ ಸಸಿಗಳನ್ನು ಪೂರೈಕೆ ಮಾಡಲಾಗುತ್ತದೆ. ಬೇಡಿಕೆಗೆ ತಕ್ಕಂತೆ ಕಸಿ ಮಾಡಿರುವ ಸಸಿಗಳನ್ನು ಮಾತ್ರ ಉತ್ಪಾದಿಸಲಾಗುತ್ತದೆ. ಇದರಂತೆ ನಷ್ಟ ತಪ್ಪಿಸಬಹುದಾಗಿದೆ.

ಒಂದು ವರ್ಷದಲ್ಲಿ ಸುಮಾರು ನಾಲ್ಕು ಲಕ್ಷ ಗಿಡಗಳನ್ನು ಗೌರವ್ ಮಾರಾಟ ಮಾಡಿದ್ದಾರೆ. ಇದರಿಂದ 60 ಲಕ್ಷ ರೂಪಾಯಿ ಬ್ಯುಸಿನೆಸ್ ಮಾಡಿದ್ದು, ಸುಮಾರು 16 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಗೌರವ್ ಅವರ ನರ್ಸರಿಯಲ್ಲಿ ಹೂ ಕೋಸು, ಕೊತ್ತಂಬರಿ, ಹಸಿರು ಮೆಣಸಿನಕಾಯಿ, ಕಸಿ ಮಾಡಿರುವ ಬದನೆಕಾಯಿ, ಪಪ್ಪಾಯಿ ಸೇರಿದಂತೆ ಇತರೆ ತರಕಾರಿ ಸಸಿಗಳನ್ನು ಮಾರಾಟ ಮಾಡುತ್ತಾರೆ. ವಾರ್ಷಿಕವಾಗಿ ಸುಮಾರು 20 ಲಕ್ಷ ಸಸಿಗಳನ್ನು ಗೌರವ ಮೌರ್ಯ ಮಾರಾಟ ಮಾಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಿಯೋ IPOಗೆ ಆರಂಭದಲ್ಲೇ 2.5 ಲಕ್ಷ ಕೋಟಿ ರೂ ಬೇಡಿಕೆ, ಅಕ್ಟೋಬರ್ 19ಕ್ಕೆ ಆಂಕರ್ ಬಿಡ್ಡಿಂಗ್
ಬಂಪರ್ ಆಫರ್ ಕೊಟ್ಟ Airtel, ಅತ್ಯಂತ ಕಮ್ಮಿ ಬೆಲೆಗೆ ಮೂರು ರಿಚಾರ್ಜ್ ಪ್ಲಾನ್