ಡಿ.10ಕ್ಕೆ ಹೊಸ ಸಂಸತ್ ಭವನದ ಶಿಲಾನ್ಯಾಸ, ಇದು ಆತ್ಮನಿರ್ಭರ್ ಭಾರತದ ಧ್ಯೋತಕ ಎಂದ ಸ್ಪೀಕರ್!

By Suvarna News  |  First Published Dec 5, 2020, 8:36 PM IST

ಹೊಸ ಸಂಸತ್ ಭವನ ನಿರ್ಮಾಣಕ್ಕೆ ಭರ್ಜರಿ ತಯಾರಿ ನಡೆಸಿರುವ ಕೇಂದ್ರ ಸರ್ಕಾರ ಡಿಸೆಂಬರ್ 10 ರಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಲಿದ್ದಾರೆ. ನೂತನ ಭವನದ ಕುರಿತು ಲೋಕಸಭಾ ಸ್ಪೀಕರ್ ಸುದ್ದಿಗೋಷ್ಠಿ ನಡೆಸಿದ್ದಾರೆ.


ದೆಹಲಿ(ಡಿ.05): ಸಂಸದರು, ಸಚಿವರ ದಶಕಗಳ ಬೇಡಿಕೆಯೊಂದು ಈಡೇರುತ್ತಿದೆ.  ರಾಜಪಥ ರಸ್ತೆಯಲ್ಲಿರುವ ಭವ್ಯ ಸಂಸತ್ ಭವನದ ಸನಿಹದಲ್ಲೇ ಹೊಚ್ಚ ಹೊಸ ಸಂಸತ್ ಭವನದ ನಿರ್ಮಾಣವಾಗುತ್ತಿದೆ. ಈ ಕುರಿತು  ಲೋಕಸಭಾ ಸ್ಪೀಕರ್ ಓಮ್ ಬಿರ್ಲಾ ತಮ್ಮ ನಿವಾಸದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಹೊಸ ಸಂಸತ್ ಭವನ ಶಿಲಾನ್ಯಾಸ ಕುರಿತ ವಿವರಿಸಿದ್ದಾರೆ. 

ಹೊಸ ಸಂಸತ್ತಿನ ಕಟ್ಟಡಕ್ಕೆ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕು!.

Tap to resize

Latest Videos

undefined

ಡಿಸೆಂಬರ್ 10 ರಂದು ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನದ ಶಿಲಾನ್ಯಾಸ ಮಾಡಲಿದ್ದಾರೆ ಎಂದು ಓಮ್ ಬಿರ್ಲಾ ಹೇಳಿದ್ದಾರೆ. ಅಧುನಿಕ, ಸುಸಜ್ಜಿತ ಹಾಗೂ ಎಲ್ಲಾ ಸೌಲಭ್ಯ ಹೊಂದಿರುವ ಕಟ್ಟದ ಅವಶ್ಯಕತೆ ಹಲವು ವರ್ಷಗಳಿಂದ ಇದೆ. ಸದ್ಯ ಇರುವ ಬಹುತೇಕ ಕಟ್ಟಗಳಲ್ಲಿ ಸಂವಹನ ಕೊರತೆ, ಭದ್ರತೆ, ಭೂಕಂಪನ ತಡೆಬಲ್ಲ ಶಕ್ತಿ, ಆಧುನಿಕ ಸೌಲಭ್ಯ ಹೊಂದಿರುವ ಕಟ್ಟಗಳಿಲ್ಲ. ಇವೆಲ್ಲವನ್ನೂ ಪರಿಗಣಿ ನೂತನ ಸಂಸತ್ ಭವನ ನಿರ್ಮಾಣ ಮಾಡಲಾಗುತ್ತದೆ ಎಂದು ಬಿರ್ಲಾ ಹೇಳಿದ್ದಾರೆ.

ನೂತನ ಸಂಸತ್ ಭವನದಲ್ಲಿ 888 ಆಸನ ಸಾಮರ್ಥ್ಯ ಹೊಂದಿದೆ. ಇನ್ನು ಜಂಟಿ ಅಧಿವೇಶನಗಳಲ್ಲಿ 1224 ಆಸನಗಳಿಗೆ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಇನ್ನು ರಾಜ್ಯಸಭಾ ಸದಸ್ಯರ ಆಸನ ಸಾಮರ್ಥ್ಯ 384 ಹೊಂದಿದೆ ಎಂದು ಬಿರ್ಲಾ ಸುದ್ದಿಗೋಷ್ಠಿಯಲ್ಲೇ ಹೇಳಿದರು.

ದೇಶದಲ್ಲಿರುವ ಕುಶಲಕರ್ಮಿಗಳು, ಕಾರ್ಮಿಕರು, ತಂತ್ರಜ್ಞರು ನೂತನ ಸಂಸತ್ ಭವನ ನಿರ್ಮಾಣ ಮಾಡಲಿದ್ದಾರೆ. 130 ಕೋಟಿ ಭಾರತೀಯರ ಹೆಮ್ಮೆಯ ಕಟ್ಟಡ ಇದಾಗಿದೆ.  ಹೊಸ ಸಂಸತ್ ಭವನ ಆತ್ಮನಿರ್ಭರ್ ಭಾರತದ ಧ್ಯೋತಕವಾಗಿದೆ ಎಂದು ಓಮ್ ಬಿರ್ಲಾ ಹೇಳಿದ್ದಾರೆ. ಉಭಯ ಸದನದ ಬೇಡಿಕೆಯನ್ನು ಕಳೆದ ವರ್ಷ ಮೋದಿ ಸಮ್ಮತಿಸಿದ್ದರು.

ಹೊಸ ಸಂಸತ್ ಭವನ ಭಾರತದ ಪ್ರಜಾಪ್ರಭುತ್ವ ಸ್ಮಾರಕವಾಗಿ ತಲೆ ಎತ್ತಲಿದೆ. ಇಷ್ಟೇ ಅಲ್ಲ ಭಾರತದ ಭವ್ಯ ಪರಂಪರೆಯನ್ನು,  ಇತಿಹಾಸವನ್ನು, ಸಾಂಸ್ಕೃತಿಕ   ವೈವಿಧ್ಯತೆಯನ್ನು ಎತ್ತಿ ಹಿಡಿಯಲಿದೆ. 64,500 ಚದರ ಅಡಿ ವಿಸ್ತೀರ್ಣತೆ ಹೊಂದಿರುವ ನೂತನ ಕಟ್ಟಡದ ಯೋಜನಾ ವೆಚ್ಚ971 ಕೋಟಿ ರೂಪಾಯಿ. ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ವರ್ಷದಲ್ಲಿ ಹೊಸ ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ ಎಂದು ಬಿರ್ಲಾ ಹೇಳಿದರು.

ಟಾಟಾ ಗ್ರೂಪ್ ಹೊಸ ಸಂಸತ್ ಕಟ್ಟದ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ.  ಹೊಸ ಕಟ್ಟದ ವಿನ್ಯಾಸವನ್ನು M/s HCP ಡಿಸೈನ್ ಹಾಗೂ ಮ್ಯಾನೇಜ್ಮೆಂಟ್  Pvt ಲಿಮಿಟೆಡ್ ಮಾಡಿದೆ. ಮುಂದಿನ 100 ವರ್ಷಗಳ ಅಗತ್ಯತೆಗಳು ಮತ್ತು ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಸಂಸತ್ ಕಟ್ಟದ ನಿರ್ಮಾಣ ಮಾಡಲಾಗುವುದು ಎಂದು ಬಿರ್ಲಾ ಹೇಳಿದ್ದಾರೆ.

click me!