ಅಯೋಧ್ಯೆ ಮಸೀದಿಗೆ ಬಾಬರ್ ಹೆಸರಿಡುವುದಕ್ಕೆ ಗ್ರಾಮಸ್ಥರ ವಿರೋಧ| ಹೊಸ ಮಸೀದಿಗೆ ಸಿಗುತ್ತಾ ಹೊಸ ಹೆಸರು?
ಅಯೋಧ್ಯೆ[ಫೆ.09]: ರಾಮ ಜನ್ಮಭೂಮಿ-ಬಾಬ್ರಿ ಪ್ರಕರಣದ ತೀರ್ಪಿನ ಅನುಸಾರ ಮುಸ್ಲಿಂ ಅರ್ಜಿದಾರರಿಗೆ ಅಯೋಧ್ಯೆಯ ಧನ್ನೀಪುರದಲ್ಲಿ ನೀಡಲಾದ 5 ಎಕರೆ ಸ್ಥಳದಲ್ಲಿ ನಿರ್ಮಾಣ ಮಾಡುವ ಮಸೀದಿಗೆ ಮೊಘಲ್ ದೊರೆ ಬಾಬರನ ಹೆಸರು ಇಡಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಬಾಬರ್ ಬದಲು ಅಮಾನ್ ಮಸೀದಿ (ಶಾಂತಿಯ ಮಸೀದಿ) ಎಂದು ನಾಮಕರಣ ಮಾಡಿ ಎಂದು ಒತ್ತಾಯಿಸಿದ್ದಾರೆ.
ಮುಘಲ್ ದೊರೆ ಬಾಬರ್ ಭಾರತೀಯ ಮುಸಲ್ಮಾನರ ಪ್ರತಿನಿಧಿ ಅಲ್ಲ. ಹಜರತ್ ನಿಜಾಮುದ್ದೀನ್, ಖ್ವಾಜಾ ಮೊಯಿನುದ್ದಿನ್ ಚಿಸ್ತಿ ಮುಂತಾದ ಸೂಫಿಗಳು ಹಾಗೂ ಸ್ವಾತಂತ್ರ ಹೋರಾಟದಲ್ಲಿ ಹುತಾತ್ಮರಾದ ಧಾರ್ಮಿಕ ನಾಯಕರು ಭಾರತೀಯ ಮುಸ್ಲಿಮರ ಪ್ರತಿನಿಧಿಗಳು. ಹಾಗಾಗಿ ಇಲ್ಲಿ ನಿರ್ಮಾಣವಾಗುವ ಮಸೀದಿಗೆ ‘ಅಮಾನ್ ಮಸ್ಜಿದ್’ ಎಂದು ನಾಮಕರಣ ಮಾಡಬೇಕೆಂದು ಬಯಸುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಮಸೀದಿ ನಿರ್ಮಾಣಕ್ಕೆ ಐದು ಎಕ್ರೆ ಪ್ರತ್ಯೇಕ ಸ್ಥಳ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ, ಅಯೋಧ್ಯೆಯಿಂದ 30 ಕಿ.ಮಿ ದೂರದಲ್ಲಿರುವ ಧನ್ನೀಪುರದಲ್ಲಿ ಉತ್ತರ ಪ್ರದೇಶ ಸರ್ಕಾರ ಸ್ಥಳ ನೀಡಿದೆ. ಆದರೆ ಇದನ್ನು ಅರ್ಜಿದಾರ ಸುನ್ನೀ ವಖ್ಫ್ ಬೋರ್ಡ್ ಈ ವರೆಗೂ ಸ್ವೀಕರಿಸಿಲ್ಲ.
ಫೆಬ್ರವರಿ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ