
ಮುಂಬೈ(ಜೂ.21): ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕಿರಿಯ ಪುತ್ರ ತೇಜಸ್ ಠಾಕ್ರೆ ಹಾಗೂ ಅವರ ತಂಡ ಕರ್ನಾಟಕದ ಪಶ್ಚಿಮ ಘಟ್ಟದ ಸಕಲೇಶಪುರದಲ್ಲಿ ಹೊಸ ಪ್ರಬೇಧದ ಹಲ್ಲಿಯೊಂದನ್ನು ಪತ್ತೆ ಹಚ್ಚಿದ್ದಾರೆ. ಈ ಹೊಸ ಪ್ರಬೇಧದ ಹಲ್ಲಿಗೆ ‘Cnemaspis magnifica’ ಎಂದು ನಾಮಕರಣ ಮಾಡಲಾಗಿದೆ.
ಹೌದು ತೇಜಸ್ ಠಾಕ್ರೆ ಸೇರಿ ಒಟ್ಟು ನಾಲ್ವರ ತಂಡ ಈ ಹೊಸ ಪ್ರಬೆಧದ ಹಲ್ಲಿಯ ಸಂಶೋಧನಾ ವರದಿ ತಯಾರಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅಕ್ಷಯ್ ಖಾಂಡೆಕರ್ ಹೊಸ 'ಗೋಕೋ' ಪ್ರಬೇಧದ ಆವಿಷ್ಕಾರವನ್ನು ಜೀವ ವೈವಿಧ್ಯಗಳ ಭಂಡಾರವಿರುವ ಪಶ್ಚಿಮ ಘಟ್ಟದಲ್ಲಿ ನಡೆಸಿದ್ದೇವೆ ಎಂದಿದ್ದಾರೆ. ಇನ್ನು ಈ ಆವಿಷ್ಕಾರವನ್ನು ವರದಿಯನ್ನು ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆ ಜೂಟಾಕ್ಸಾದಲ್ಲಿ ಪ್ರಕಟ ಮಾಡಲಾಗಿದೆ ಎಂಬುವುದು ಉಲ್ಲೇನೀಯ.
ಇನ್ನು ಇದಕ್ಕೂ ಮೊದಲು ತೇಜಸ್ ಠಾಕ್ರೆ 2015ರಲ್ಲಿ ಮೊದಲ ಬಾರಿಗೆ ಬೋಯಿಗಾ ಪ್ರಬೇಧಕ್ಕೆ ಸೇರಿದ ಈ ಹಾವು ಪತ್ತೆ ಹಚ್ಚಿದ್ದರು. ಬಳಿಕ ಹಾವಿನ ವರ್ತನೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ಅದರ ವರದಿಯನ್ನು ಜೀವವೈವಿಧ್ಯ ಸಂರಕ್ಷಣಾ ಸಂಸ್ಥೆಯ ಮುಂದಿಟ್ಟಿದ್ದರು. ಈ ಸಂಶೋಧನೆಯ ನೆನಪಿನಾರ್ಥ ಈ ಹಾವಿಗೆ ಠಾಕ್ರೇಸ್ ಕ್ಯಾಟ್ ಸ್ನೇಕ್ ಎಂದು ಹೆಸರಿಡಲಾಗಿತ್ತು. ಹಾವಿನ ಸಂಶೋಧನಾ ವರದಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಪತ್ರಿಕೆಯಲ್ಲೂ ಪ್ರಕಟವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ