ಭಾರತೀಯರಿಗೆ ಕೊಂಚ ನೆಮ್ಮದಿ ಕೊಟ್ಟ ಐಸಿಎಂಆರ್‌, ಎನ್‌ಐವಿಗಳ ತಜ್ಞರ ಸ್ಪಷ್ಟನೆ!

Published : Dec 23, 2020, 12:26 PM IST
ಭಾರತೀಯರಿಗೆ ಕೊಂಚ ನೆಮ್ಮದಿ ಕೊಟ್ಟ ಐಸಿಎಂಆರ್‌, ಎನ್‌ಐವಿಗಳ ತಜ್ಞರ ಸ್ಪಷ್ಟನೆ!

ಸಾರಾಂಶ

ಬ್ರಿಟನ್‌ ಕೊರೋನಾ ತಳಿ ಭಾರತದಲ್ಲಿನ್ನೂ ಪತ್ತೆಯಾಗಿಲ್ಲ| ಐಸಿಎಂಆರ್‌, ಎನ್‌ಐವಿಗಳ ತಜ್ಞರ ಸ್ಪಷ್ಟನೆ| ಈವರೆಗೆ ಪತ್ತೆಯಾದ ತಳಿ ಅಪಾಯಕಾರಿಯಲ್ಲ

ನವದೆಹಲಿ(ಡಿ.23): ಬ್ರಿಟನ್ನಿನಲ್ಲಿ ಪತ್ತೆಯಾಗಿರುವ ಕೊರೋನಾ ವೈರಸ್‌ನ ಹೊಸ ಪ್ರಭೇದ ಭಾರತದಲ್ಲಿ ಇನ್ನೂ ಯಾರಲ್ಲೂ ಪತ್ತೆಯಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಂಗಳವಾರ ತಿಳಿಸಿದೆ.

ಈ ಕುರಿತು ದೇಶದಲ್ಲಿ ಎದ್ದಿರುವ ಆತಂಕದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಐಸಿಎಂಆರ್‌ನ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ

ಸಮೀರಣ ಪಾಂಡಾ, ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ)ಯಲ್ಲಾಗಲೀ ಅಥವಾ ದೇಶಾದ್ಯಂತ ಇರುವ ಯಾವುದೇ ಪ್ರಯೋಗಾಲಯದಲ್ಲಾಗಲೀ ಇಲ್ಲಿಯವರೆಗೂ ಬ್ರಿಟನ್ನಿನಲ್ಲಿ ಪತ್ತೆಯಾದ ಕೊರೋನಾ ತಳಿ ಪತ್ತೆಯಾಗಿಲ್ಲ. ನಮ್ಮಲ್ಲೇ ಈವರೆಗೆ ಕೊರೋನಾದ ಕೆಲ ಹೊಸ ಪ್ರಭೇದಗಳು ಪತ್ತೆಯಾಗಿದ್ದು, ಅವ್ಯಾವುವೂ ಅಪಾಯಕಾರಿಯಲ್ಲ ಎಂದು ಹೇಳಿದ್ದಾರೆ.

ಬ್ರಿಟನ್ನಿನಲ್ಲಿ ಪತ್ತೆಯಾಗಿರುವ ಹೊಸ ತಳಿ ಕೂಡ ಈಗಿರುವ ಕೊರೋನಾ ವೈರಸ್‌ಗಿಂತ ಹೆಚ್ಚು ಅಪಾಯಕಾರಿ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಈಗ ಬಿಡುಗಡೆಯಾಗಿರುವ ಲಸಿಕೆಗಳು ಈ ವೈರಸ್‌ ವಿರುದ್ಧ ಕಡಿಮೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂಬುದಕ್ಕೂ ಸಾಕ್ಷ್ಯವಿಲ್ಲ. ಬ್ರಿಟನ್ನಿನಲ್ಲಿ ಪತ್ತೆಯಾದ ತಕ್ಷಣ ಆ ತಳಿ ಭಾರತದಲ್ಲೂ ಪತ್ತೆಯಾಗಿಬಿಡುತ್ತದೆ ಎಂದು ಹೇಳಲಾಗದು. ಆ ವೈರಸ್‌ ಭಾರತಕ್ಕೆ ಪ್ರವೇಶಿಸಿದ್ದರೆ ಸರ್ವೇಕ್ಷಣೆಯಲ್ಲಿ ಸಿಕ್ಕೇ ಸಿಗುತ್ತದೆ ಎಂದೂ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Operation Sindoor: ಆಪರೇಷನ್ ಸಿಂದೂರ್-2 ಇನ್ನೂ ಮುಗಿದಿಲ್ಲ, ಪಾಕಿಸ್ತಾನಕ್ಕೆ ಭಾರತದ ಖಡಕ್ ವಾರ್ನಿಂಗ್!
ಕೆಲ ತಿಂಗಳ ಅಂತರದಲ್ಲಿ ಹೃದಯಾಘಾತಕ್ಕೆ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಕುಟುಂಬ: ಅಣ್ಣನ ಹಾದಿ ಹಿಡಿದ ತಂಗಿ