
ಪಿಟಿಐ ನವದೆಹಲಿ (ಡಿ.3): ಇತ್ತೀಚೆಗಷ್ಟೇ ರಾಜ್ಯಪಾಲರ ನಿವಾಸವಾದ ‘ರಾಜಭವನ’ವನ್ನು ‘ಲೋಕಭವನ’ವಾಗಿ ಮರುನಾಮಕರಣ ಮಾಡುವಂತೆ ಆದೇಶಿಸಿದ್ದ ಕೇಂದ್ರ ಸರ್ಕಾರ, ಇದೀಗ ಪ್ರಧಾನ ಮಂತ್ರಿಗಳ ಕಚೇರಿಯನ್ನು (ಪಿಎಂಒ) ‘ಸೇವಾ ತೀರ್ಥ’ ಎಂದು ಹೆಸರಿಸಲು ನಿರ್ಧರಿಸಿದೆ. ಇದುವರೆಗೆ ಪಿಎಂಒವನ್ನು ‘ಎಕ್ಸಿಕ್ಯುಟಿವ್ ಎನ್‌ಕ್ಲೇವ್’ ಎಂದು ಕರೆಯಲಾಗುತ್ತಿತ್ತು.
ಸೆಂಟ್ರಲ್ ವಿಸ್ತಾ ಪುನರಭಿವೃದ್ಧಿ ಯೋಜನೆಯ ಅಡಿಯಲ್ಲಿ ಹೊಸ ಕಟ್ಟಡ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ. ಪಿಎಂಒ, ಸಂಪುಟ ಸಚಿವಾಲಯ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಭಾರತ ಸದನದ ಕಚೇರಿಗಳನ್ನು ಇದೇ ಸಂಕೀರ್ಣಕ್ಕೆ ವರ್ಗಾಯಿಸಲಾಗುತ್ತಿದೆ. ಇವು ಸರ್ಕಾರದ ಮಹತ್ವದ ಕಾರ್ಯಸ್ಥಳಗಳಾಗಿರುವುದರಿಂದ ಜನತೆಯನ್ನೇ ಕೇಂದ್ರವಾಗಿಸಿಕೊಂಡು ಮರುನಾಮಕರಣ ಮಾಡಲು ಸರ್ಕಾರ ಮುಂದಾಗಿದೆ.
‘ಸತ್ತೆಯಿಂದ (ಅಧಿಕಾರ) ಸೇವೆಯೆಡೆಗೆ, ಆಡಳಿತದಿಂದ ಜವಾಬ್ದಾರಿಯೆಡೆಗೆ ಮುನ್ನಡೆಯುವುದು ಸರ್ಕಾರದ ಉದ್ದೇಶ. ಹಾಗಾಗಿ ಆಡಳಿತಾತ್ಮಕವಾಗಿ ಮಾತ್ರವಲ್ಲದೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಿಎಂಒಗೆ ಸೇವಾ ತೀರ್ಥವೆಂದು ಹೆಸರು ಬದಲಿಸಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ