
ನವದೆಹಲಿ[ಮಾ.06]: ಇತ್ತೀಚೆಗೆ ಇರಾನ್‌ಗೆ ತೆರಳಿದ್ದ ಗಾಜಿಯಾಬಾದ್ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದ್ದು ಪರೀಕ್ಷೆಯಲ್ಲಿ ದೃಢ ಪಟ್ಟಿದೆ. ಆ ಮೂಲಕ ದೇಶದಲ್ಲಿ ಈ ಮಾರಿಗೆ ತುತ್ತಾದವರ ಸಂಖ್ಯೆ 30ಕ್ಕೆ ಏರಿದೆ. ರಾಷ್ಟ್ರ ರಾಜಧಾನಿ ಪ್ರದೇಶದ ಮಧ್ಯವಯಸ್ಕ ವ್ಯಕ್ತಿಗೆ ಸೋಂಕು ಅಂಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ 16 ವರ್ಷದ ಭಾರತೀಯ ವಿದ್ಯಾರ್ಥಿನಿಯೊಬ್ಬಳಿಗೆ ದುಬೈನಲ್ಲಿ ಕೊರೋನಾ ವೈರಸ್ ತಗುಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ವಿದೇಶಕ್ಕೆ ಹೋಗಿದ್ದ ತಂದೆಯಿಂದ ಈ ಸೋಂಕು ಹರಡಿದೆ. ಹೀಗಾಗಿ ವಿದ್ಯಾರ್ಥಿನಿ ಕಲಿಯುತ್ತಿರುವ ಶಾಲೆಯನ್ನು ಗುರುವಾರ ಮುಚ್ಚಲಾಗಿದೆ.
ಮೋದಿ ವಿದೇಶ ಪ್ರವಾಸ ಮುಂದೂಡಿಕೆ:
ಕೊರೋನಾ ವ್ಯಾಧಿ ಜಗತ್ತಿನಾದ್ಯಂತ ಹರಡುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಬೆಲ್ಜಿಯಂ ಪ್ರವಾಸವನ್ನು ರದ್ದು ಮಾಡಿದ್ದಾರೆ. ಐರೋಪ್ಯ ಒಕ್ಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ಈ ಮಾಸಾಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ಗೆ ತೆರಳಬೇಕಿತ್ತು. ಆದರೆ, ಆರೋಗ್ಯ ಅಧಿಕಾರಿಗಳ ಸಲಹೆಯಂತೆ ಪ್ರವಾಸ ರದ್ದು ಮಾಡಿದ್ದಾರೆ ಎಂದು ವಿದೇಶಾಂಗ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಹೈಅಲರ್ಟ್:
ಈ ನಡುವೆ ಯಾವುದೇ ಸಮುದಾಯಗಳ ನಡುವೆ ಕೊರೋನಾ ಸೋಂಕು ಹಬ್ಬಿದ ಪ್ರಕರಣಗಳು ಬೆಳಕಿಗೆ ಬಂದಿದ್ದೇ ಆದರ ನಿರ್ವಹಣೆಗೆ ಅನುವಾಗುವಂತೆ ಜಿಲ್ಲೆ, ವಲಯ ಮತ್ತು ಗ್ರಾಮಮಟ್ಟದಲ್ಲಿ ಕ್ಷಿಪ್ರಕಾರ್ಯ ಪಡೆ ರಚಿಸುವಂತೆ ಎಲ್ಲಾ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ