ಬೆಳಗ್ಗೆ 11.30ಕ್ಕೆ ಆಸ್ಪತ್ರೆ ಮೇಲ್ಭಾಗ ಹೋದ ಪೋಷಕರು ಐದು ದಿನದ ಮಗುವನ್ನು ಬಿಸಿಲಿನಲ್ಲಿ ಮಲಗಿಸಿದ್ದಾರೆ. ಬಿರು ಬಿಸಿಲಿಗೆ ನಲುಗಿದ ಮಗು ಉಸಿರು ಚೆಲ್ಲಿದೆ.
ಲಕ್ನೋ: ಉತ್ತರ ಪ್ರದೇಶದ ಮೈನಪುರಿಯಲ್ಲಿ ತಾಯಿಯ ತಪ್ಪಿನಿಂದ ಐದು ದಿನದ ಮಗು ಸಾವನ್ನಪ್ಪಿದೆ. ಮಧ್ಯಾಹ್ನ ಸುಮಾರು 12 ಗಂಟೆಗೆ ಬಿರು ಬಿಸಿಲಿನಲ್ಲಿ ಮಾಳಿಗೆ ಮೇಲೆ ಅರ್ಧ ಗಂಟೆ ಮಗುವನ್ನು ಇರಿಸಲಾಗಿತ್ತು. ಅತಿಯಾದ ಬಿಸಿಲಿನಿಂದ ಐದು ದಿನದ ಮಗು ಸಾವನ್ನಪ್ಪಿದೆ. ಇತ್ತ ಮಗು ಸಾವಿನ ಬಳಿಕ ಪೋಷಕರಿಗೆ ಸಲಹೆ ನೀಡಿದ್ದ ಡಾಕ್ಟರ್ ಪರಾರಿಯಾಗಿದ್ದಾನೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಸ್ಪತ್ರೆ ಸೀಜ್ ಮಾಡಿದ್ದಾರೆ.
ಡಾಕ್ಟರ್ ನೀಡಿದ ಸಲಹೆ ಏನು?
ಮಗು ಕೆಲ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿತ್ತು. ಆದ್ದರಿಂದ ವೈದ್ಯರು ಮಗುವನ್ನು ಅರ್ಧ ಗಂಟೆ ಬಿಸಿಲಿಗೆ ಹಿಡಿಯುವಂತೆ ಸಲಹೆ ನೀಡಿದ್ದರು.
ವೈದ್ಯರ ಸಲಹೆಯಂತೆ ಪೋಷಕರು ಬೆಳಗ್ಗೆ 11.30ರ ವೇಳೆಗೆ ಆಸ್ಪತ್ರೆಯ ಛಾವಣಿ ಮೇಲೆ ಹೋಗಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಮಾಳಿಗೆ ಮೇಲೆ ಮಗುವನ್ನು ಮಲಗಿಸಿದ್ದಾರೆ. ಬಿಸಿಲು ಅಧಿಕವಾಗಿರುವ ಕಾರಣ ಮಗುವಿನ ಆರೋಗ್ಯದ ಏರುಪೇರು ಕಾಣಿಸಿಕೊಂಡಿದೆ.
12 ಗಂಟೆಗೆ ಮಗುವನ್ನು ಆಸ್ಪತ್ರೆಯೊಳಗೆ ಕರೆದುಕೊಂಡು ಬರಲಾಗಿದೆ. ಆದರೆ ಕೆಲ ಸಮಯದ ಬಳಿಕ ಐದು ದಿನದ ಕಂದಮ್ಮ ಕೊನೆಯುಸಿರೆಳೆದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ರೀಫಂಡ್ ಮಾಡಿದ್ರೆ ಪಾಪ ಹೋಗುತ್ತಾ? ಪನೀರ್ ಬಿರಿಯಾನಿಯಲ್ಲಿ ಚಿಕನ್ ಪೀಸ್ ಕಳುಹಿಸಿದ ಜೊಮ್ಯಾಟೋಗೆ ತರಾಟೆ!
ಪೋಷಕರಿಂದ ಆಸ್ಪತ್ರೆಯಲ್ಲಿ ಗಲಾಟೆ
ಮಗುವನ್ನು ಕಳೆದುಕೊಳ್ಳುತ್ತಿದ್ದಂತೆ ಆಕ್ರೋಶಿತರಾದ ಪೋಷಕರು ಗಲಾಟೆ ಮಾಡಲು ಶುರು ಮಾಡಿದ್ದಾರೆ. ಪೋಷಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಡಾಕ್ಟರ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಇತ್ತ ಆಸ್ಪತ್ರೆ ಸಿಬ್ಬಂದಿ ಮೃತ ಮಗುವಿನ ತಾಯಿಯನ್ನು ಹೊರಗೆ ಕಳುಹಿಸಿದ್ದಾರೆ.
ಕೊನೆಗೆ ಮಗುವಿನ ಪೋಷಕರು ಪೊಲೀಸ್ ಠಾಣೆಗೆ ತೆರಳಿ ವೈದ್ಯ ಡಾ.ಆರ್.ಸಿ.ಗುಪ್ತಾ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆಗೆ ಬೀಗ ಜಡಿದು ತನಿಖೆ ಆರಂಭಿಸಿದ್ದಾರೆ. ಪರಾರಿಯಾಗಿರುವ ವೈದ್ಯನ ಬಂಧನಕ್ಕೆ ಪೊಲೀಸರು ಬಲೆ ಬೀಸದ್ದಾರೆ.
ಗಂಟೆಗೆ 160 ಕಿಲೋ ಮೀಟರ್ ವೇಗ, ಜತೆಗೆ ಇನ್ಸ್ಟಾಗ್ರಾಮ್ ಲೈವ್: ಯುವಕರ ಲಾಂಗ್ ಡ್ರೈವ್ ಆಯ್ತು ಲಾಸ್ಟ್ ಡ್ರೈವ್
ವರದಿ ಕೇಳಿದ ಆರೋಗ್ಯ ಇಲಾಖೆ
ಈ ಘಟನೆ ಸ್ಥಳೀಯ ಮಟ್ಟದಲ್ಲಿ ತೀವ್ರ ಚರ್ಚೆಗ ಗ್ರಾಸವಾಗಿದೆ. ಆರೋಗ್ಯ ಇಲಾಖೆಯು ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ, ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳಿಂದ ವರದಿಯನ್ನು ಕೇಳಿದೆ. ಮಗುವಿನ ಸಾವಿಗೆ ನಿಜವಾದ ಕಾರಣವನ್ನು ಆರೋಗ್ಯ ಇಲಾಖೆ ಕೇಳಿದೆ. ಇತ್ತ ಮಗುವನ್ನು ಕಳೆದುಕೊಂಡ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.