Priyanka Gandhi Dance ರಾವತ್ ಶೋಕದ ನಡುವೆ ಕಾಂಗ್ರೆಸ್ ನಾಯಕಿಯ ಡ್ಯಾನ್ಸ್, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ!

Published : Dec 10, 2021, 08:20 PM ISTUpdated : Dec 10, 2021, 08:24 PM IST
Priyanka Gandhi Dance ರಾವತ್ ಶೋಕದ ನಡುವೆ ಕಾಂಗ್ರೆಸ್ ನಾಯಕಿಯ ಡ್ಯಾನ್ಸ್, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ!

ಸಾರಾಂಶ

ದೇಶದಲ್ಲಿ ಮಡುಗಟ್ಟಿದ ಬಿಪಿನ್ ರಾವತ್ ಶೋಕ ದೇಶದ ಮೊದಲ ಸೇನಾ ಮುಖ್ಯಸ್ಥನಿಗೆ ಅಂತಿಮ ವಿದಾಯ ಶೋಕದ ನಡುವೆ ಪ್ರಿಯಾಂಕಾ ಗಾಂಧಿ ಚುನಾವಣಾ ಗಿಮಿಕ್ ಗೋವಾದಲ್ಲಿ ಬುಡುಕಟ್ಟ ಸಮುದಾಯದ ಮಹಿಳೆಯರ ಜೊತೆ ಡ್ಯಾನ್ಸ್

ಗೋವಾ(ಡಿ.10):  ದೇಶ ಶೋಕಸಾಗರದಲ್ಲಿ ಮುಳುಗಿದೆ. ದೇಶದ ಮೊದಲ ಸೇನಾ ಮುಖ್ಯಸ್ಥ ಬಿಪಿನ್ ರಾವತ್(CDS Gen Bipin Rawat Death) ನಿಧನದ ನೋವು ಮತ್ತೆ ಮತ್ತೆ ಉಮ್ಮಳಿಸಿ ಬರುತ್ತಿದೆ. ಇಂದು(ಡಿ.10) ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ(IAF Helicopter Crash) ಮಡಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ರಾವತ್ ಅಂತ್ಯಕ್ರಿಯೆ(Cremation) ಮಿಲಿಟರಿ ಗೌರವಗಳೊಂದಿಗೆ ಮಾಡಲಾಗಿದೆ. ಇಡೀ ದೇಶ ರಾವತ್ ಅಮರ್ ರಹೇ, ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದೆ. ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿರುವಾಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ(Priyanka Gandhi vadra) ಚುನಾವಣಾ ಗಿಮಿಕ್ ಭಾರಿ ಆಕ್ರೋಶಕ್ಕೆ ತುತ್ತಾಗಿದೆ.

"

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗೋವಾ ಚುನಾವಣಾ ಪ್ರಚಾರದಲ್ಲಿ(Poll bound Goa) ಬುಡುಕಟ್ಟು ಸಮುದಾಯದ ಮಹಿಳೆಯರ(tribal women) ಜೊತೆ ಡ್ಯಾನ್ಸ್ ಮಾಡಿದ್ದಾರೆ(traditional dance).  ರಾವತ್ ಅಂತ್ಯಕ್ರಿಯೆ ದೇಶದ ಜನರ ನೋವು ಇಮ್ಮಡಿಗೊಳಿಸಿದ ಸಂದರ್ಭದಲ್ಲೇ ಪ್ರಿಯಾಂಕಾ ವಾದ್ರಾ ಗೋವಾದ ಮೋರ್ಪಿರ್ಲಾ ಗ್ರಾಮದಲ್ಲಿ ಡ್ಯಾನ್ಸ್(Priyanka gandhi vadra dance) ಮಾಡಿ ಆಕ್ರೋಶಕ್ಕೆ ತುತ್ತಾಗಿದ್ದಾರೆ.

Bipin Rawat Death ಸೇನಾ ಮುಖ್ಯಸ್ಥನ ಸಾವು ಸಂಭ್ರಮಿಸಿದ ಕೇರಳ ಸರ್ಕಾರ ವಕೀಲೆ, ನಿವೃತ್ತ ಸೇನಾನಿಗಳ ಪ್ರತಿಭಟನೆ!

ಗೋವಾದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ(Goa assembly elections) ನಡೆಯಲಿದೆ. ಚುನಾವಣೆಗಲೆ ಕೆಲ ತಿಂಗಳು ಮಾತ್ರ ಬಾಕಿ ಇದೆ. ಹೀಗಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಗೋವಾದಲ್ಲಿ ಚುನಾವಣಾ ಪ್ರಚಾರ(Election campaign) ಆರಂಭಿಸಿದ್ದಾರೆ. ಇದಕ್ಕಾಗಿ ಗೋವಾಗೆ ಆಗಮಿಸಿದ ಪ್ರಿಯಾಕ, ಬುಡಕಟ್ಟು ಸಮುದಾಯದ ಮಹಿಳೆಯರ ಜೊತೆ ಹೆಜ್ಜೆ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷ ಈ ವಿಡಿಯೋ ಪೋಸ್ಟ್ ಮಾಡಿದೆ. 

 

ಮೋರ್ಪಿರ್ಲಾ ಗ್ರಾಮ ಬುಡುಕಟ್ಟು ಸಮುದಾಯದ ತುಂಬಿದ ಗ್ರಾಮ. ಇಲ್ಲಿಂದ ಗೋವಾ ಚುನಾವಣೆಯ ಕಾಂಗ್ರೆಸ್ ಪ್ರಚಾರ ಆರಂಭಿಸಿದೆ. ಪ್ರಿಯಾಂಕ ಆಗಮನದ ಹಿನ್ನಲೆಯಲ್ಲಿ ಗೋವಾ ಕಾಂಗ್ರೆಸ್ ಬುಡಕಟ್ಟು ಸಮುದಾಯದ ಮಹಿಳೆಯರ ಡ್ಯಾನ್ಸ್ ಆಯೋಜಿಸಿತ್ತು. ಈ ಡ್ಯಾನ್ಸ್‌ನಲ್ಲಿ ಪಾಲ್ಗೊಂಡ ಪ್ರಿಯಾಂಕಾ ತಾವು ಹೆಜ್ಜೆ ಹಾಕಿದ್ದಾರೆ. ಬಳಿಕ ತಮ್ಮ ಟ್ವಿಟರ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.

 

Top 10 News ಪಂಚಭೂತಗಳಲ್ಲಿ ರಾವತ್ ಲೀನ, BCCI ವಿರುದ್ಧ ರವಿ ಶಾಸ್ತ್ರಿ ಅಸಮಾಧಾನ!

ಕಾಂಗ್ರೆಸ್ ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ವಿಡಿಯೋ ಇದೀಗ ಪಕ್ಷಕ್ಕೆ ಸಂಕಷ್ಟ ತಂದಿದೆ. ಬಿಪಿನ್ ರಾವತ್ ಅಂತ್ಯಕ್ರಿಯೆ ನಡೆಯುವುದಕ್ಕೂ ಮೊದಲೇ ಕಾಂಗ್ರೆಸ್ ತನ್ನ ಬುದ್ದಿ ತೋರಿಸಿದೆ. ನೆಪ ಮಾತ್ರಕ್ಕೆ ಗೌರವ ನಮನ ಸಲ್ಲಿಸಿ, ಕಾಂಗ್ರೆಸ್ ತನ್ನ ಚುನಾವಣಾ ಗಿಮಿಕ್‌ನಲ್ಲಿ ತೊಡಗಿಕೊಂಡಿದೆ ಎಂದು ಸಾಮಾಜಿಕ ಜಾಲತಾಣಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿದೆ.

 

ವಾದ್ರಾ ಡ್ಯಾನ್ಸ್ ವೇಳೆ ಜನರಲ್ ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ಅಂತ್ಯಕ್ರಿಯೆ ನೆರವೇರಿರಲಿಲ್ಲ. ಇಂದು 11.30 ರಿಂದ 12.30ರ ವರೆಗೆ ರಾವತ್ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಪಾರ್ಥೀವ ಶರೀರ ಇಡಲಾಗಿತ್ತು. ಬಳಿಕ ಕಾಮರಾಜ್ ಮಾರ್ಗ್‌ದಿಂದ 9 ಕಿಲೋಮೀಟರ್ ಅಂತಿಮ ಯಾತ್ರೆ ಸಾಗಿ ಬಂದಿತ್ತು. ದೆಹಲಿಯ ಬ್ರಾರ್ ಸ್ಕ್ವೇರ್ ರುದ್ರಭೂಮಿಯಲ್ಲಿ(brar square delhi cantt) ರಾವತ್ ದಂಪತಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ರಾವತ್ ಇಬ್ಬರು ಪುತ್ರಿಯರು ಅಂತಿಮ ವಿಧಿವಿಧಾನಗಳನ್ನು ಮಾಡಿದ್ದಾರೆ. ಬಳಿಕ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ. ಮಿಲಿಟರಿ ಗೌರವಗಳೊಂದಿಗೆ ಬಿಪಿನ್ ರಾವತ್‌ಗೆ ಅಂತ್ಯಕ್ರಿಯೆ ನೆರವೇರಿದೆ. ಭೂತಾನ್, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಸೇರಿದಂತೆ ವಿದೇಶಗಳ ಸೇನಾ ದಂಡಾಧಿಕಾರಿಗಳು, ಬ್ರಿಟೀಷ್ ಹೈಕಮಿಶನ್, ಫ್ರಾನ್ಸ್ ರಾಯಭಾರಿ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಆದರೆ ಸಂತಾಪ ಸೂಚಿಸುವ ಬದಲು ಚುನಾವಣಾ ಗಿಮಿಕ್‌ನಲ್ಲೇ ಕಾಂಗ್ರೆಸ್ ಮುಳಿಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !