ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರಮ ಮೇಲೆ ಕಾಲಿಟ್ಟಿದ್ದೇ ಸುಳ್ಳು ಎನ್ನುವ ಚರ್ಚೆ ಇಂದು-ನಿನ್ನೆಯದ್ದಲ್ಲ. ಆದರೆ ಇದೀಗ ಮತ್ತೆ ಅಮೆರಿಕ ಅದನ್ನು ಪ್ರೂವ್ ಮಾಡುತ್ತಿದೆಯೆ? ಏನಿದು ವಿವಾದ?
ಶಾಲಾಮಟ್ಟದಿಂದ ಹಿಡಿದು ದೊಡ್ಡವರಾಗುವವರೆಗೂ ವಿದ್ಯಾರ್ಥಿಗಳು ಕಲಿತ, ಕಲಿಯುತ್ತಿರುವ ಇತಿಹಾಸದ ಬಗ್ಗೆ ಅದೆಷ್ಟೋ ಕಟ್ಟು ಕಥೆಗಳು, ಸುಳ್ಳಿನ ಸರಮಾಲೆಗಳು ಇವೆ ಎನ್ನುವ ಬಗ್ಗೆ ಆಗಾಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಲೇ ಇರುತ್ತವೆ. ಇತಿಹಾಸವನ್ನು ತಿರುಚಿ ಹೇಗೆ ಮಕ್ಕಳ ತಲೆಯಲ್ಲಿ ತುಂಬಿ ಅದನ್ನೇ ಸತ್ಯ ಎಂದು ಸಾಬೀತು ಮಾಡಿ, ಅದರಲ್ಲಿ ಯಶಸ್ವಿಯೂ ಆಗಿರುವ ವಿಷಯಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ವಾದ-ಪ್ರತಿವಾದ-ವಿವಾದ ಎಲ್ಲವೂ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಲೇ ಇರುತ್ತವೆ. ಅದೇನೇ ಇದ್ದರೂ ಇದೀಗ ನೀಲ್ ಆರ್ಮ್‌ಸ್ಟ್ರಾಂಗ್ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.
ಹೌದು! 1969ರಲ್ಲಿ ಗಗನಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿಟ್ಟ ಎನ್ನುವುದನ್ನು ಅಂದಿನಿಂದ ಇಂದಿನವರೆಗೂ ಪಠ್ಯದಲ್ಲಿ ಕಲಿಯುತ್ತಲೇ ಬಂದಿದ್ದೇವೆ. ಇತ್ತೀಚೆಗೆ ಇದರ 55ನೇ ವರ್ಷದ ಸಂಭ್ರಮಾಚರಣೆಯೂ ನಡೆಯಿತು. ನಾಸಾ ಮಾಡಿದ್ದೆ ಎನ್ನಲಾದ ಈ ಸಾಧನೆಯ ಬಗ್ಗೆ ವಿಶ್ವ ಇಂದಿಗೂ ಕೊಂಡಾಡುತ್ತಿದೆ. ಮಾನವ ಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟು ಚಂದ್ರನ ಅಂಗಳಲ್ಲಿ ಓಡಾಡಿದ್ದ ಎನ್ನುವುದು ಇನ್ನೂ ದಾಖಲೆಗಳಲ್ಲಿ ದಾಖಲಾಗಿಯೇ ಇದೆ. ಆದರೆ ಇದು ಶುದ್ಧ ಸುಳ್ಳು. ದೊಡ್ಡಣ್ಣ ಎಂದು ಕರೆಸಿಕೊಳ್ತಿರೋ ಅಮೆರಿಕ ಮಾಡಿರುವ ಕಿತಾಪತಿ, ಚಂದ್ರನ ಮೇಲೆ ಕಾಲಿಟ್ಟಿಯೇ ಇಲ್ಲ ಬದಲಿಗೆ ಇದು ಸ್ಟುಡಿಯೋದಲ್ಲಿ ಚಿತ್ರೀಕರಿಸಿದ್ದು ಎನ್ನುವ ವಿಚಾರ ಆಗಾಗ್ಗ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ.
ಭೂಮಿಯ ಮೇಲಿಂದ ಪುರುಷ ಸಂತತಿಯೇ ನಾಶ! ಆತಂಕಕಾರಿ ಅಧ್ಯಯನ ವರದಿಯಲ್ಲಿ ಏನಿದೆ?
ಮೊದಲಿಗೆ ನಾಸಾ ಜಗತ್ತಿನ ಕಣ್ಣಿಗೆ ಮಣ್ಣೆರೆಚುತ್ತಿದೆ ಎಂದು ಹೇಳಿದ್ದು, ಖುದ್ದು ನಾಸಾಗಾಗಿ ಕೆಲಸ ಮಾಡಿದ್ದ ಬಿಲ್ ಕೇಸಿಂಗ್ ಎಂಬಾತ. ಈತ 1960 ಮತ್ತು 1963ರ ನಡುವೆ ಅಮೆರಿಕದ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದ. ಇದು ದೊಡ್ಡಣ್ಣನ ಸುಳ್ಳಿನ ಸೃಷ್ಟಿ ಎಂದು ವಾದ ಮಂಡಿಸಿದ್ದ ಆತ ಇಡೀ ವಿಶ್ವದಲ್ಲಿಯೇ ಇದರ ಬಗ್ಗೆ ಚರ್ಚೆ ಹುಟ್ಟುಹಾಕುವಂತೆ ಮಾಡಿದ್ದ. ಇದು ಸುಳ್ಳು ಎನ್ನುವುದಕ್ಕೆ ಕೆಲ ಸಾಕ್ಷ್ಯಾಧಾರಗಳನ್ನೂ ಆತ ಒದಗಿಸಿದ್ದ. ಚಂದ್ರನ ಮೇಲೆ ಇಳಿದಾಗ ಅಲ್ಲಿ ನಕ್ಷತ್ರಗಳು ಏಕೆ ಕಾಣಿಸಲಿಲ್ಲ ಎಂದು ಪ್ರಶ್ನಿಸಿರೋ ಆತ, ಚಂದ್ರನ ಮೇಲೆ ಇಳಿದಾಗ ಅಲ್ಲಿ ನೆರಳು ಯಾವ ದಿಕ್ಕಿನಿಂದ ಬರುತ್ತಿದೆ ಎಂಬುದನ್ನು ನೋಡಿದರೆ ಇದು ಶುದ್ಧ ಸುಳ್ಳು ಎನ್ನುವುದು ತಿಳಿಯುತ್ತದೆ. ವೈರಲ್ ಆಗ್ತಿರೋ ಫೋಟೋದಲ್ಲಿ ನೆರಳು ಕೂಡ ಕಾಣಿಸುತ್ತಿದ್ದು, ಇದು ಚಂದ್ರನಲ್ಲಿ ಸಾಧ್ಯವಾಗದ ಮಾತು ಎಂದಿದ್ದ. ಅಲ್ಲದೇ ಲ್ಯಾಂಡಿಂಗ್ ಮಾಡ್ಯೂಲ್ ಅಡಿಯಲ್ಲಿ ಯಾವುದೇ ಬ್ಲಾಸ್ಟ್ ಕ್ರೇಟರ್ ಇರಲಿಲ್ಲ, ಮಾತ್ರವಲ್ಲದೇ ಲ್ಯಾಂಡರ್ ಇಳಿದಾಗ ಅದರಿಂದ ಧೂಳಿನ ಕಣಗಳು ಹಾರುತ್ತಿರುವುದು ನಮಗೆ ಕಾಣಿಸುವುದೇ ಇಲ್ಲ ಎಂಬಿತ್ಯಾದಿ ಪ್ರಶ್ನೆಗಳನ್ನು ಆತ ಇಟ್ಟಿದ್ದ. ಇದರ ಬಳಿಕ ಈ ವಾದದ ಬಗ್ಗೆ ಇದುವರೆಗೂ ಪರ-ವಿರೋಧ ಚರ್ಚೆ ನಡೆಯುತ್ತಲೇ ಇದೆ.
ಆದರೆ ನೀಲ್ ಆರ್ಮ್‌ಸ್ಟ್ರಾಂಗ್ ವಿಷ್ಯ ಮತ್ತೆ ಮುನ್ನೆಲೆಗೆ ಬರಲು ಕಾರಣ ಬಾಹ್ಯಾಕಾಶದಲ್ಲಿಯೇ ಉಳಿದುಕೊಂಡಿರುವ ಸುನೀತಾ ವಿಲಿಯಮ್ಸ್! 55 ವರ್ಷಗಳ ಹಿಂದೆ ಯಾವುದೇ ಈಗ ಇರುವಷ್ಟರ ಶೇಕಡಾ 1ರಷ್ಟು ಕೂಡ ತಂತ್ರಜ್ಞಾನ ಇಲ್ಲದ ಸಮಯದಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ ಲೀಲಾಜಾಲವಾಗಿ ಚಂದ್ರನಲ್ಲಿಗೆ ಹೋಗಿ ಬರುವುದಾದರೆ, ಆ ಕಾಲಕ್ಕಿಂತ ಸಾವಿರ ಪಟ್ಟು ಹೆಚ್ಚು ತಂತ್ರಜ್ಞಾನ ಇರುವ ಈ ಸಮಯದಲ್ಲಿ ಅಮೆರಿಕಕ್ಕೆ ಸುನೀತಾ ಮತ್ತು ಬಾಹ್ಯಾಕಾಶದಲ್ಲಿಯೇ ಇದ್ದು ಒದ್ದಾಡುತ್ತಿರುವ ಗಗನಯಾತ್ರಿಗಳನ್ನು ಕರೆತರಲು ಏಕೆ ಕಷ್ಟವಾಗುತ್ತಿದೆ ಎನ್ನುವ ಪ್ರಶ್ನೆ ಹುಟ್ಟುಹಾಕಲಾಗಿದೆ. ನೀಲ್ ಆರ್ಮ್‌ಸ್ಟ್ರಾಂಗ್ ವಿಷಯ ನಿಜವೇ ಆಗಿದ್ದರೆ, ಅದಕ್ಕಿಂತಲೂ ಅತ್ಯಂತ ಸುಲಭವಾಗಿ ಈಗಿನ ಗಗನಯಾತ್ರಿಗಳನ್ನು ಕರೆಸಿಕೊಳ್ಳಬಹುದಿತ್ತು. ಆದರೆ ಅವರ ಜೀವಕ್ಕೆ ಅಪಾಯವಿದ್ದರೂ, ಅವರು ಭೂಮಿಯ ಮೇಲೆ ವಾಪಸ್ ಬರುವುದೇ ಸಂದೇಹ ಎನ್ನುವಷ್ಟರ ಮಟ್ಟಿಗೆ ಈಗಿನ ಸ್ಥಿತಿ ಇದೆ ಅಂದ ಮೇಲೆ ನಿಜಕ್ಕೂ ನಾಸಾನ್ನು, ದೊಡ್ಡಣ್ಣ ಅಮೆರಿಕವನ್ನು ನಂಬಬಹುದೇ ಎನ್ನುವ ಚರ್ಚೆ ದೊಡ್ಡ ಮಟ್ಟದಲ್ಲಿ ಈಗ ಮತ್ತೆ ಶುರುವಾಗಿದೆ. ಸ್ವಂತಿಕೆ ಇಲ್ಲದ ಜಗತ್ತಿನಲ್ಲಿ ಕೇವಲ ಹೆದರಿಸಿ ಬೆದರಿಸಿ ಬದುಕಿದ ಒಂದು ಕ್ಷುಲ್ಲಕ ದೇಶ ಅಮೆರಿಕ ಎಂದೆಲ್ಲಾ ಈಗ ಅಮೆರಿಕವನ್ನು ಜನರು ಶಪಿಸುವಂತಾಗಿದೆ. ಸತ್ಯ ಏನು ಎನ್ನುವುದನ್ನು ಅಮೆರಿಕವೇ ಉತ್ತರಿಸಬೇಕಿದೆ. ಒಂದು ವೇಳೆ ನೀಲ್ ಆರ್ಮ್‌ಸ್ಟ್ರಾಂಗ್ ಘಟನೆಯೇ ಸುಳ್ಳು ಆಗಿದ್ದರೆ, ಸುಳ್ಳು ಇತಿಹಾಸವನ್ನೇ ನಂಬಿ ಇಷ್ಟು ದಶಕಗಳವರೆಗೆ ಹಾಡಿ ಕೊಂಡಾಡಿರುವವರ ಗತಿ?
ಇನ್ಮುಂದೆ ಕತ್ತಲು ಕಡಿಮೆ, ಹಗಲು ಹೆಚ್ಚಂತೆ: ವಿಜ್ಞಾನಿಗಳಿಂದ ಬಯಲಾಯ್ತು ಸತ್ಯ!