ವೈದ್ಯೆಯಾಗುವುದು ಅವಳ ಬಾಲ್ಯದ ಕನಸಾಗಿತ್ತು. ಆದರೆ ಹಣಕ್ಕಾಗಿ ಅಲ್ಲ ಜನರ ಕಷ್ಟವನ್ನು ಎಷ್ಟು ಸಾಧ್ಯವೋ ಅಷ್ಟು ಗುಣಪಡಿಸುವ ಆಸೆ ಆಕೆಗಿತ್ತು ಎಂದು ಹತ್ಯೆಯಾದ ಟ್ರೈನಿ ವೈದ್ಯಯ ತಾಯಿ ಶಿಕ್ಷಕರ ದಿನಾಚರಣೆಯಂದು ಬರೆದ ಬಹಿರಂಗ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಅವರ ಪತ್ರದ ಸಾರಾಂಶ ಇಲ್ಲಿದೆ.
ಕೋಲ್ಕತಾದ ಆರ್‌ಜಿ ಕಾರ್ ಆಸ್ಪತ್ರೆಯ 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣ ನಡೆದು ಹತ್ತಿರ ಹತ್ತಿರ ತಿಂಗಳಾಗುತ್ತಿದೆ. ಆದರೆ ಯಾರಿಗೂ ಕೂಡ ಆಕೆಯ ಆ ಭೀಕರ ಸಾವನ್ನು ನಂಬಲು ಆಗುತ್ತಿಲ್ಲ, ಮರೆಯಲೂ ಆಗುತ್ತಿಲ್ಲ, ಈ ಮಧ್ಯೆ ನಿನ್ನೆ ಶಿಕ್ಷಕರ ದಿನಾಚರಣೆ ಕಳೆದು ಹೋಗಿದ್ದು, ತನ್ನ ಮಗಳ ಪರವಾಗಿ ಟ್ರೈನಿ ವೈದ್ಯೆಯ ತಾಯಿ ಶಿಕ್ಷಕರಿಗೆ ಪತ್ರವೊಂದನ್ನು ಬರೆದಿದ್ದು, ಮನಕಲಕುವಂತಿದೆ.
ವೈದ್ಯೆಯಾಗುವುದು ಅವಳ ಬಾಲ್ಯದ ಕನಸಾಗಿತ್ತು. ಆದರೆ ಹಣಕ್ಕಾಗಿ ಅಲ್ಲ ಜನರ ಕಷ್ಟವನ್ನು ಎಷ್ಟು ಸಾಧ್ಯವೋ ಅಷ್ಟು ಗುಣಪಡಿಸುವ ಆಸೆ ಆಕೆಗಿತ್ತು ಎಂದು ಹತ್ಯೆಯಾದ ಟ್ರೈನಿ ವೈದ್ಯಯ ತಾಯಿ ಶಿಕ್ಷಕರ ದಿನಾಚರಣೆಯಂದು ಬರೆದ ಬಹಿರಂಗ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಅವರ ಪತ್ರದ ಸಾರಾಂಶ ಇಲ್ಲಿದೆ.
ಕೋಲ್ಕತಾ ಆರ್‌ಜಿ ಕರ್ ಆಸ್ಪತ್ರೆ ನಿವೃತ್ತ ಪ್ರಿನ್ಸಿಪಾಲ್ ಅರೆಸ್ಟ್, ಸಿಎಂ ಮಮತಾಗೆ ಹೆಚ್ಚಾದ ಸಂಕಷ್ಟ!
ನಾನು ರೇಪ್ ಸಂತ್ರಸ್ತ ವೈದ್ಯೆಯ ತಾಯಿ, ಇಂದು ಶಿಕ್ಷಕರ ದಿನ, ನಾನು ಎಲ್ಲಾ ಶಿಕ್ಷಕರಿಗೂ ನನ್ನ ಮಗಳ ಪರವಾಗಿ ಶಿಕ್ಷಕರ ದಿನವಾದ ಇಂದು ಧನ್ಯವಾದ ಸಲ್ಲಿಸುತ್ತೇನೆ. ಬಾಲ್ಯದಿಂದಲೂ ಆಕೆಗೆ ವೈದ್ಯೆಯಾಗುವ ಕನಸಿತ್ತು. ಆ ಕನಸಿನ ಪ್ರೇರಕ ಶಕ್ತಿ ನೀವಾಗಿದ್ದೀರಿ. ಪೋಷಕರಾಗಿ ನಾವು ಆಕೆಗೆ ಎಷ್ಟು ಸಾಧ್ಯವೂ ಅಷ್ಟು ಬೆಂಬಲ ನೀಡಿದ್ದೇವೆ. ಆದರೆ ನಿಮ್ಮಂತಹ ಒಳ್ಳೆಯ ಶಿಕ್ಷಕರು ಆಕೆಗೆ ಸಿಕ್ಕಿ ಮಾರ್ಗದರ್ಶನ ನೀಡಿದ ಕಾರಣ ಆಕೆಯ ವೈದ್ಯೆಯಾಗಬೇಕೆಂಬ ಕನಸು ಪೂರ್ತಿಗೊಳ್ಳಲು ಸಾಧ್ಯವಾಯ್ತು ಎಂದು ಟ್ರೈನಿ ವೈದ್ಯೆಯ ಅಮ್ಮ ಬರೆದುಕೊಂಡಿದ್ದಾರೆ.
ಅಲ್ಲದೇ ಆಕೆ, ಅಮ್ಮ ನನಗೆ ಹಣವೇನು ಬೇಡ, ನನಗೆ ನನ್ನ ಹೆಸರಿನ ಮುಂದೆ ತುಂಬಾ ಡಿಗ್ರಿಗಳು ಬೇಕು ಹಾಗೂ ನಾನು ಎಷ್ಟು ಸಾಧ್ಯವೋ ಅಷ್ಟು ರೋಗಿಗಳ ರೋಗ ಗುಣಪಡಿಸಬೇಕು ಎಂದು ಆಕೆ ಹೇಳಿಕೊಂಡಿದ್ದಳು ಎಂದು ಹತ್ಯೆಗೀಡಾದ ವೈದ್ಯೆಯ ಅಮ್ಮ ಮಗಳ ನೆನೆದು ಕಣ್ಣೀರಾಕಿದ್ದಾರೆ.
ಕೋಲ್ಕತಾದಲ್ಲಿನ ಸಂಗೀತ ಸಂಜೆ ರದ್ದು ಮಾಡಿದ ಶ್ರೇಯಾ ಘೋಷಾಲ್
ಘಟನೆ ನಡೆದ ದಿನವೂ ಆಕೆ ಆಸ್ಪತ್ರೆಯಲ್ಲಿ ಅನೇಕ ರೋಗಿಗಳಿಗೆ ನೆರವಾಗಿದ್ದಾಳೆ. ಆಕೆ ಕರ್ತವ್ಯದಲ್ಲಿರುವಾಗಲೇ ದುಷ್ಕರ್ಮಿಗಳು ಆಕೆಯನ್ನು ಕೊಂದರು ಆಕೆಯ ಕನಸನ್ನು ಭೀಕರವಾಗಿ ಉಸಿರುಕಟ್ಟಿಸಿದರು ಎಂದು ಅವರು ದುಃಖ ತೋಡಿಕೊಂಡಿದ್ದಾರೆ. ಆಗಸ್ಟ್ 8ರ ಮಧ್ಯರಾತ್ರಿ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯಯ ಬರ್ಬರ ಹತ್ಯೆ ನಡೆದಿತ್ತು. ಆಗಸ್ಟ್ ರಂದು ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಆಕೆಯ ಮೃತದೇಹ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ವೈದ್ಯಯ ಅತ್ಯಾಚಾರ ಹಾಗೂ ಭೀಕರ ಕೊಲೆ ಖಂಡಿಸಿ ದೇಶದೆಲ್ಲೆಡೆ ವೈದ್ಯರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗಿಳಿದಿದ್ದರು. ಆದರೆ ನಂತರ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿ ನ್ಯಾಯದ ಭರವಸೆ ನೀಡಿದ ಹಿನ್ನೆಲೆಯಲ್ಲಿ ವೈದ್ಯರು ಪ್ರತಿಭಟನೆ ಹಿಂಪಡೆದಿದ್ದರು. ಆದರೆ ಕೋಲ್ಕತ್ತಾದಲ್ಲಿ ಮಾತ್ರ ವೈದ್ಯರ ಪ್ರತಿಭಟನೆ ನಡೆಯುತ್ತಲೇ ಇದೆ. ನಿನ್ನೆ ನಡೆದ ಪ್ರತಿಭಟನೆಯಲ್ಲಿ ವೈದ್ಯೆಯ ಪೋಷಕರು ಕೂಡ ಭಾಗಿಯಾಗಿದ್ದರು.
ಸಿಬಿಐ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಪೊಲೀಸ್ ಇಲಾಖೆಯಲ್ಲಿ ಸ್ವಯಂ ಸೇವಕನಾಗಿ ಕೆಲಸ ಮಾಡುತ್ತಿದ್ದ ಸಂಜಯ್ ರಾಯ್‌ನನ್ನು ಬಂಧಿಸಲಾಗಿದೆ. ಜೊತೆಗೆ ಆರ್ ಜಿ ಕಾರ್ ಆಸ್ಪತ್ರೆಯ ಮುಖ್ಯಸ್ಥ ಸಂದೀಪ್ ಘೋಷ್ ಅವರನ್ನು ಕೂಡ ಬಂಧಿಸಲಾಗಿದೆ. ಈ ಇಬ್ಬರಿಗೂ ಸತ್ಯ ತಿಳಿಯುವುದಕ್ಕಾಗಿ ಪಾಲಿಗ್ರಾಪ್ ಪರೀಕ್ಷೆಯನ್ನು ಸಿಬಿಐ ನಡೆಸಿದೆ.