ನೆಹರೂ ಅವಧೀಲಿ ₹12 ಲಕ್ಷಕ್ಕೆ ಶೇ.25ರಷ್ಟು, ಇಂದಿರಾ ಸರ್ಕಾರದಲ್ಲಿ 10 ಲಕ್ಷ ತೆರಿಗೆ ಪಾಲಾಗುತ್ತಿತ್ತು: ಪ್ರಧಾನಿ ಮೋದಿ ತಿರುಗೇಟು

Published : Feb 03, 2025, 05:50 AM IST
ನೆಹರೂ ಅವಧೀಲಿ ₹12 ಲಕ್ಷಕ್ಕೆ ಶೇ.25ರಷ್ಟು, ಇಂದಿರಾ ಸರ್ಕಾರದಲ್ಲಿ 10 ಲಕ್ಷ ತೆರಿಗೆ ಪಾಲಾಗುತ್ತಿತ್ತು: ಪ್ರಧಾನಿ ಮೋದಿ ತಿರುಗೇಟು

ಸಾರಾಂಶ

ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳವನ್ನು ಪ್ರಧಾನಿ ಮೋದಿ ಹೊಗಳಿದ್ದಾರೆ. 12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲದಿರುವುದು ಸ್ವಾತಂತ್ರ್ಯಾನಂತರ ಇದೇ ಮೊದಲು ಎಂದಿದ್ದಾರೆ. ಮಧ್ಯಮ ವರ್ಗಕ್ಕೆ ಇದು ಲಾಭದಾಯಕ ಎಂದೂ ಹೇಳಿದ್ದಾರೆ.

ನವದೆಹಲಿ (ಫೆ.3): ನೆಹರೂ ಅವಧಿಯಲ್ಲಿ ವಾರ್ಷಿಕ 12 ಲಕ್ಷ ವೇತನ ಪಡೆಯತ್ತಿದ್ದರೆ ವೇತನದ ನಾಲ್ಕನೇ ಒಂದು ಭಾಗದಷ್ಟು ತೆರಿಗೆಗೇ ಹೋಗುತ್ತಿತ್ತು. ಇಂದಿರಾ ಗಾಂಧಿ ಅವರ ಸರ್ಕಾರ ಅಧಿಕಾರಲ್ಲಿದ್ದಾಗ 12 ಲಕ್ಷದಲ್ಲಿ 10 ಲಕ್ಷ ತೆರಿಗೆ ಪಾಲಾಗುತ್ತಿತ್ತು. 10-12 ವರ್ಷಗಳ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 12 ಲಕ್ಷದ ವರೆಗಿನ ಆದಾಯದಲ್ಲಿ 2.60 ಲಕ್ಷ ತೆರಿಗೆ ಪಾವತಿಸಬೇಕಿತ್ತು. ಆದರೆ ಬಿಜೆಪಿ ಸರ್ಕಾರದ ಈ ಬಾರಿಯ ಬಜೆಟ್‌ ಬಳಿಕ 12 ಲಕ್ಷದವರೆಗಿನ ಆದಾಯಕ್ಕೆ ಒಂದೇ ಒಂದು ರುಪಾಯಿ ತೆರಿಗೆ ಕಟ್ಟಬೇಕಿಲ್ಲ!

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ ಕ್ರಮವನ್ನು ಹೊಗಳುತ್ತಲೇ ಪ್ರತಿಪಕ್ಷವನ್ನು ಪ್ರಧಾನಿ ಮೋದಿ ತಿವಿದಿದ್ದು ಹೀಗೆ.

ಇದನ್ನೂ ಓದಿ: ಚೀನಾ ಕೆನಡಾಕ್ಕೆ ಟ್ರಂಪ್ ತೆರಿಗೆ ಏಟು, ಭಾರತ ಪಾರು! ಪ್ರಧಾನಿ ಮೋದಿಯ ಈ ಗಟ್ಟಿ ನಿರ್ಧಾರ ತೆರಿಗೆ ಹೆಚ್ಚಿಸಲು ಅಮೆರಿಕಕ್ಕೆ ಭಯ?

ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ‘ ಸ್ವಾತಂತ್ರ್ಯಾನಂತರ 12 ಲಕ್ಷ ವಾರ್ಷಿಕ ಆದಾಯ ಗಳಿಸುತ್ತಿರುವವರು ಈ ರೀತಿಯ ವಿನಾಯ್ತಿ ಪಡೆಯುತ್ತಿರುವುದು ಇದೇ ಮೊದಲು. ದೇಶದ ಅಭಿವೃದ್ಧಿಯಲ್ಲಿ ನಮ್ಮ ಮಧ್ಯಮವರ್ಗದವರ ಪಾತ್ರ ದೊಡ್ಡದಿದೆ. ಬಿಜೆಪಿ ಮಾತ್ರ ಈ ವರ್ಗವನ್ನು ಗೌರವಿಸಿದೆ ಮತ್ತು ನಿಷ್ಠಾವಂತ ತೆರಿಗೆದಾರರಿಗೆ ಪ್ರತಿಫಲ ನೀಡಿದೆ. ಇದು ಜನಸ್ನೇಹಿ ಬಜೆಟ್‌ ಎಂದು ಇಡೀ ದೇಶವೇ ಹೇಳುತ್ತಿದೆ ಎಂದರು.

ಇದನ್ನೂ ಓದಿ:  ಟ್ರಂಪ್ ತೆರಿಗೆ ಬೆದರಿಕೆಗೆ ಮೋದಿ ಸರ್ಕಾರ ಅಮೆರಿಕ ಉತ್ಪನ್ನಗಳ ಮೇಲೂ ತೆರಿಗೆ ಕಡಿತಕ್ಕೆ ಚಿಂತನೆ?

ವಿಕಸಿತ ಭಾರತದ ಕನಸು ನನಸು ಮಾಡಲು ರೈತರು, ಮಹಿಳೆಯರು, ಯುವಕರು ಮತ್ತು ಬಡವರು ಎಂಬ ನಾಲ್ಕು ಆಧಾರಸ್ತಂಭಗಳನ್ನು ಬಲಿಷ್ಠಗೊಳಿಸುವುದಾಗಿ ನಾನು ಗ್ಯಾರಂಟಿ ನೀಡಿದ್ದೇನೆ. ಶನಿವಾರದ ಬಜೆಟ್‌ ಆ ಗ್ಯಾರಂಟಿಗಳನ್ನು ಪೂರ್ಣಗೊಳಿಸುವ ಗ್ಯಾರಂಟಿಯಾಗಿದೆ ಎಂದು ಮೋದಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..