
ಅಹಮದಾಬಾದ್(ಮೇ.22): ಕೊರೋನಾ ವೈರಸ್‌ನಿಂದ ಗುಜರಾತ್‌ನಲ್ಲಿ ಉಂಟಾಗಿರುವ ಒಟ್ಟು ಸಾವಿನ ಸಂಖ್ಯೆಯಲ್ಲಿ ಸುಮಾರು ಶೇ.50ರಷ್ಟುಸಾವುಗಳು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲೇ ಉಂಟಾಗಿದೆ. ಆ ಮೂಲಕ ಈ ಆಸ್ಪತ್ರೆ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿದೆ.
ಈವರೆಗೆ ಗುಜರಾತ್‌ನಲ್ಲಿ ಕೊರೋನಾಗೆ 749 ಮಂದಿ ಬಲಿಯಾಗಿದ್ದು, ಇದರಲ್ಲಿ 351 ಸಾವು ಈ ಆಸ್ಪತ್ರೆಯಲ್ಲೇ ಉಂಟಾಗಿದೆ. ಈವರೆಗೆ ಈ ಆಸ್ಪತ್ರೆಯಿಂದ 338 ಕೋವಿಡ್ ಬಾಧಿತರು ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದರಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯ ಪ್ರವೇಶ ಮಾಡಬೇಕು ಎಂದು ಅಹಮದಾಬಾದ್ ಶಾಸಕ ಗ್ಯಾಸುದ್ದೀನ್ ಶೇಖ್ ಒತ್ತಾಯಿಸಿದ್ದಾರೆ.
ಭಾರತದಲ್ಲಿ ಸಾವಿನ ಸಂಖ್ಯೆ:
ಇನ್ನು ಭಾರತದಲ್ಲಿ ಲಾಕ್‌ಡೌನ್ ಸಡಿಲಿಕೆ ಬಳಿಕ ಕೊರೋನಾ ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಾರಂಭಿಸಿದೆ. ಇಂದು ಶುಕ್ರವಾರ 6,088 ಹೊಸ ಪ್ರಕರಣಗಳು ವರದಿಯಾಘಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,10,000 ದಾಟುವ ಹಂತದಲ್ಲಿದೆ. ಇನ್ನು ಸಾವನ್ನಪ್ಪಿದವರ ಸಂಖ್ಯೆ 3,583 ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ