ದೇಶದಲ್ಲಿ 2 ಲಕ್ಷದತ್ತ ಸೋಂಕಿತರ ಸಂಖ್ಯೆ, 94800 ಮಂದಿ ಚೇತರಿಕೆ!

By Kannadaprabha NewsFirst Published Jun 2, 2020, 8:27 AM IST
Highlights

2 ಲಕ್ಷದತ್ತ ಸೋಂಕಿತರ ಸಂಖ್ಯೆ| ನಿನ್ನೆ 7512 ಜನಕ್ಕೆ ಸೋಂಕು, 178 ಮಂದಿ ಸಾವು| 94800 ಮಂದಿ ಚೇತರಿಕೆ

ನವದೆಹಲಿ(ಜೂ.02): ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 2 ಲಕ್ಷದ ಸನಿಹಕ್ಕೆ ತಲುಪಿದೆ. ಸೋಮವಾರ ಹೊಸದಾಗಿ 7512 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 192174ಕ್ಕೆ ಏರಿಕೆಯಾಗಿದೆ. ಅಲ್ಲದೇ ಒಂದೇ ದಿನ 178 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 5394ಕ್ಕೆ ಏರಿಕೆಯಾಗಿದೆ.

ಅತಿ ಹೆಚ್ಚು ಸೋಂಕಿತರು ಇರುವ ದೇಶಗಳ ಪಟ್ಟಿಯಲ್ಲಿ ಭಾರತವು ಇಟಲಿಯ ಬಳಿಕ 7ನೇ ಸ್ಥಾನದಲ್ಲಿದೆ. ಒಂದು ವೇಳೆ ಸೋಂಕಿತರ ಸಂಖ್ಯೆ ಇದೇ ಗತಿಯಲ್ಲಿ ಏರಿಕೆ ಕಂಡರೆ ಭಾರತ ಕೆಲವೇ ದಿನಗಳಲ್ಲಿ ಇಟಲಿಯನ್ನೂ ಹಿಂದಿಕ್ಕುವ ಸಾಧ್ಯತೆಗಳು ಗೋಚರಿಸಿವೆ.

"

ಈ ಮಧ್ಯೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 20 ಸಾವಿರ ಗಡಿ ದಾಡಿದ್ದರೆ, ತಮಿಳುನಾಡಿನಲ್ಲಿ 23 ಸಾವಿರ ಗಡಿ ದಾಟಿದೆ. ಅದೇ ರೀತಿ ಗುಜರಾತಿನಲ್ಲಿ ಸೋಂಕಿತರ ಸಂಖ್ಯೆ 17217ಕ್ಕೆ ಏರಿಕೆ ಕಂಡಿದೆ. ಸಮಾಧಾನಕರ ಸಂಗತಿಯೆಂದರೆ ಈವರೆಗೆ 94879 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

click me!