Punjab Polls: ಡ್ರಗ್ಸ್‌ ಮುಕ್ತ ‘ನಯಾ ಪಂಜಾಬ್‌’ ನಿರ್ಮಾಣ: ನರೇಂದ್ರ ಮೋದಿ

Kannadaprabha News   | Asianet News
Published : Feb 15, 2022, 02:25 AM IST
Punjab Polls: ಡ್ರಗ್ಸ್‌ ಮುಕ್ತ ‘ನಯಾ ಪಂಜಾಬ್‌’ ನಿರ್ಮಾಣ: ನರೇಂದ್ರ ಮೋದಿ

ಸಾರಾಂಶ

ಹಾಲಿ ಮುಖ್ಯಮಂತ್ರಿ ಚರಣ್‌ ಜಿತ್‌ ಸಿಂಗ್‌ ಚನ್ನಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ‘ಎನ್‌ಡಿಎ ಮೈತ್ರಿಕೂಟ ಹೊಸ ಸರ್ಕಾರ ರಚನೆ ಮಾಡಲಿದೆ. 

ಜಲಂಧರ್‌(ಪಂಜಾಬ್‌ ಫೆ.15): ಹಾಲಿ ಮುಖ್ಯಮಂತ್ರಿ ಚರಣ್‌ ಜಿತ್‌ ಸಿಂಗ್‌ ಚನ್ನಿ (Charanjit Singh Channi) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ರಾಜ್ಯದಲ್ಲಿ ಬಿಜೆಪಿ (BJP) ನೇತೃತ್ವದ ‘ಎನ್‌ಡಿಎ ಮೈತ್ರಿಕೂಟ ಹೊಸ ಸರ್ಕಾರ ರಚನೆ ಮಾಡಲಿದೆ. ತನ್ಮೂಲಕ ರಾಜ್ಯದ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಲಿದೆ.  ಡ್ರಗ್ಸ್‌ ಮುಕ್ತ ಹಾಗೂ ಸಾಲ ಮುಕ್ತ ಹೊಸ ಪಂಜಾಬ್‌ ನಿರ್ಮಿಸುತ್ತೇವೆ’ ಎಂದು ಭವಿಷ್ಯ ನುಡಿದಿದ್ದಾರೆ. 

ಅಲ್ಲದೆ, ‘ಸರ್ಜಿಕಲ್‌ ದಾಳಿ ನಡೆದ ಬಗ್ಗೆ ಕೆಲವರು (ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi)) ಸಾಕ್ಷ್ಯ ಕೇಳುತ್ತಾರೆ. ಅವರ ಬಗ್ಗೆ ಎಚ್ಚರದಿಂದ ಇರಿ’ ಎಂದೂ ಅವರು ಚಾಟಿ ಬೀಸಿದ್ದಾರೆ. ಮೊದಲ ಬಾರಿ ಪಂಜಾಬ್‌ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾರ‍ಯಲಿಯಲ್ಲಿ ಮಾತನಾಡಿದ ಅವರು, ಆಂತರಿಕ ಕಿತ್ತಾಟದಲ್ಲಿ ತಲ್ಲೀನರಾಗಿರುವವರಿಂದ ಸ್ಥಿರ ಸರ್ಕಾರ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ತನ್ಮೂಲಕ ಕಾಂಗ್ರೆಸ್‌ನಲ್ಲಿ (Congress) ನವಜೋತ್‌ ಸಿಂಗ್‌ ಸಿಧೂ (Navjot Singh Sidhu) ಮತ್ತು ಸಿಎಂ ಚನ್ನಿ ಎಂಬ 2 ಬಣಗಳಿವೆ ಎಂಬುದನ್ನು ಸೂಚ್ಯವಾಗಿ ಹೇಳಿದರು.

ಮಂದಿರ ಭೇಟಿಗೆ ಅವಕಾಶ ಸಿಗಲಿಲ್ಲ: ‘ನಾನು ಮೊದಲಿಗೆ ದೇವಿ ತಲಾಬ್‌ ಮಂದಿರಕ್ಕೆ ಭೇಟಿ ನೀಡಿ ನಮಸ್ಕರಿಸುವ ಉದ್ದೇಶ ಹೊಂದಿದ್ದೆ. ಆದರೆ ಇಲ್ಲಿನ ಸರ್ಕಾರ ಮತ್ತು ಪೊಲೀಸರು (Police) ಅಗತ್ಯ ಕ್ರಮ ಕೈಗೊಳ್ಳಲಿಲ್ಲ’ ಎಂದು ಚನ್ನಿ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.

Pulwama Attack ಪುಲ್ವಾಮಾದಲ್ಲಿ ಹುತಾತ್ಮ ಯೋಧರ ಸ್ಮರಿಸಿ ಗೌರವ ನಮನ ಸಲ್ಲಿಸಿದ ಮೋದಿ

ಮನಿಷಾ ಗುಲಾಟಿ ಬಿಜೆಪಿಗೆ: ಪಂಜಾಬ್ ವಿಧಾನಸಭಾ ಚುನಾವಣೆಯ ದಿನಾಂಕ ಸಮೀಪಿಸುತ್ತಿದೆ. ಹೀಗಿರುವಾಗ ರಾಜ್ಯ ರಾಜಕಾರಣ ರಂಗೇರುತ್ತಿದೆ. ಈ ಮಧ್ಯೆ, ಪಂಜಾಬ್ ಮಹಿಳಾ ಆಯೋಗದ ಅಧ್ಯಕ್ಷೆ ಮನಿಶಾ ಗುಲಾಟಿ ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಜಲಂಧರ್‌ನಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭೌತಿಕ ರ್ಯಾಲಿಯಲ್ಲಿ ಅವರು ಬಿಜೆಪಿ ಸೇರಬಹುದು ಎಂದು ಹೇಳಲಾಗುತ್ತಿದೆ.

ಮಹಿಳಾ ಹಕ್ಕುಗಳ ವಿಚಾರದಲ್ಲಿ ಸದ್ದು ಮಾಡುತ್ತಿರುತ್ತಾರೆ: ಮನಿಶಾ ಗುಲಾಟಿ ಅವರನ್ನು ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆಪ್ತರೆಂದು ಪರಿಗಣಿಸಲಾಗಿದೆ. ಸಿಎಂ ಆದ ಬಳಿಕ ಕ್ಯಾಪ್ಟನ್ ಮನೀಷಾಗೆ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದ್ದರು. ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗುವುದರ ಹಿಂದೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ದೊಡ್ಡ ಕೈವಾಡವಿದೆ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಅವರು ರಾಜ್ಯದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಭದ್ರತೆಗಾಗಿ ಜನಮನದಲ್ಲಿ ಉಳಿದಿದ್ದಾರೆ. ಅಷ್ಟೇ ಅಲ್ಲ ರಾಜ್ಯದಲ್ಲಿರುವ ಮದುವೆಯಾದ ಪುರುಷರು ವಿದೇಶಕ್ಕೆ ಪಲಾಯನ ಮಾಡುವ ವಿಚಾರದ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಸಿಎಂ ಚನ್ನಿ MeToo ವಿಚಾರ ಪ್ರಸ್ತಾಪ: ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಮೀಟೂ ವಿಚಾರವನ್ನು ಪ್ರಸ್ತಾಪಿಸಿದ ನಂತರ ಮನೀಶಾ ಗುಲಾಟಿ ಮುನ್ನೆಲೆಗೆ ಬಂದಿದ್ದರು ಎಂಬುವುದು ಉಲ್ಲೇಖನೀಯ. ಎರಡು ವರ್ಷಗಳ ಹಿಂದೆ ಚನ್ನಿ ವಿರುದ್ಧ ಮೀಟೂ ಕೇಸ್ ಹಾಕಿದ್ದರು ಮನೀಶಾ ಗುಲಾಟಿ. ಈ ಬಗ್ಗೆ ಕ್ರಮ ಜರುಗಿಸಿ, ನೋಟಿಸ್ ಕೂಡ ಜಾರಿ ಮಾಡಿದೆ. ಆದರೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಧ್ಯಪ್ರವೇಶಿಸಿದ ನಂತರ ವಿಷಯ ಇತ್ಯರ್ಥವಾಗಿತ್ತು.

Mann Ki Baat: ನಿಮ್ಮಲ್ಲೂ ಐಡಿಯಾ ಇದ್ದರೆ, 27ರ ಮೋದಿ 'ಮನ್‌ ಕೀ ಬಾತ್‌'ಗೆ ಕಳುಹಿಸಿ!

ಪಂಜಾಬ್ ಚುನಾವಣೆಯಲ್ಲಿ ಅತ್ಯಂತ ಮಹತ್ವದ ದಿನ: ಇಂದು ಪಂಜಾಬ್ ಚುನಾವಣೆಯಲ್ಲಿ ಬಹಳ ಮಹತ್ವದ ದಿನ. ಏಕೆಂದರೆ ಚುನಾವಣಾ ದಿನಾಂಕ ಘೋಷಣೆಯಾದ ನಂತರ ಇಂದು ಮೊದಲ ಬಾರಿಗೆ ಪ್ರಧಾನಿ ಮೋದಿ ಸಾರ್ವಜನಿಕರೊಂದಿಗೆ ನೇರವಾಗಿ ಸಂವಾದ ನಡೆಸಲಿದ್ದಾರೆ. ಸೋಮವಾರ ಅವರು ಜಲಂಧರ್‌ನಲ್ಲಿ ಭೌತಿಕ ರ್ಯಾಲಿ ನಡೆಸಲಿದ್ದಾರೆ. ಇದೀಗ ಪ್ರಧಾನಿ ಮೋದಿ ಚುನಾವಣಾ ಉಸ್ತುವಾರಿಯನ್ನು ಕೈಗೆ ತೆಗೆದುಕೊಂಡ ನಂತರ ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿದೆ. ಏಕೆಂದರೆ ರಾಜ್ಯದಲ್ಲಿ ಪ್ರಧಾನಿಯವರ ಮೂರು ಬ್ಯಾಕ್ ಟು ಬ್ಯಾಕ್ ರ್ಯಾಲಿಗಳು ನಡೆಯಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?