ನರೇಂದ್ರ ಮೋದಿ 3.0 ಸರ್ಕಾರ ರಚನೆಯಾಗಿದೆ. 3ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾವಚನ ಸ್ವೀಕರಿಸಿದ್ದಾರೆ. ಈಶ್ವರನ ಹೆಸರಿನಲ್ಲಿ ಪ್ರಮಾಣವನಚನ ಸ್ವೀಕರಿಸಿದ್ದಾರೆ. ಮೋದಿ ಸರ್ಕಾರದಲ್ಲಿ ಯಾರಿಗೆ ಸಿಕ್ಕಿದೆ ಮಂತ್ರಿ ಭಾಗ್ಯ?
ನವದೆಹಲಿ(ಜೂ.09) ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಎನ್‌ಡಿಎ ಮಿತ್ರ ಇದೀಗ ಹೊಸ ಸರ್ಕಾರ ರಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಶ್ವರನ ಹೆಸರಿನಲ್ಲಿ ಮೋದಿ ಪ್ರಮಾಣವಚನ ತೆಗೆದುಕೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಮೋದಿ ಜೊತೆ ಪ್ರಮಾಣವಚನ ಸ್ವೀಕರಿಸಿದ ಸಚಿವರ ಪಟ್ಟಿ ಇಲ್ಲಿದೆ
ರಾಜನಾಥ್ ಸಿಂಗ್
ಅಮಿತ್ ಶಾ
ನಿತಿನ್ ಗಡ್ಕರಿ
ಜೆಪಿ ನಡ್ಡಾ
ಶಿವರಾಜ್ ಸಿಂಗ್ ಚೌಹ್ಹಾಣ್
ನಿರ್ಮಲಾ ಸೀತಾರಾಮನ್
ಎಸ್ ಜೈಶಂಕರ್
ಮನೋಹರ್ ಲಾಲ್ ಕಟ್ಟರ್
ಹೆಚ್‌ಡಿ ಕುಮಾರಸ್ವಾಮಿ
ಪಿಯೂಷ್ ಗೊಯೆಲ್
ಧಮೇಂದ್ರ ಪ್ರಧಾನ್
ಜಿತನ್ ರಾಮ್ ಮಾಂಜಿ
ರಾಜೀವ್ ರಂಜನ್ ಸಿಂಗ್
ಸರ್ಬಾನಂದ್ ಸೊನ್ವಾಲ್
ವಿರೇಂದ್ರ ಕುಮಾರ್
ಕೆ ರಾಮ್ ಮೋಹನ್ ನಾಯ್ಡು
ಪ್ರಹ್ಲಾದ್ ಜೋಶಿ
ಲೋಕಸಭೆಯಲ್ಲಿ ರಾಹುಲ್‌ಗೆ ವಿಪಕ್ಷ ನಾಯಕ ಹೊಣೆ?
ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಧಾನಿ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದೇಶ ವಿದೇಶಗಳ ಹಲವು ಗಣ್ಯರು ಆರಂಭಿಸಿದ್ದಾರೆ. ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸಿನಾ, ಮಾರಿಷಸ್ ಪ್ರಧಾನಿ, ಭೂತಾನ್ ಪ್ರಧಾನಿ ತ್ಸಷರಿಂಗ್ ತೊಬ್‌ಗೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಡಿವೈ ಚಂದ್ರಚೂಡ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಇನ್ನು ಬಾಲಿವುಡ್ ನಟ-ನಟಿಯರು, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಗಣ್ಯರು ಸೇರಿದ್ದರು.
2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿ, 2019ರ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ 2ನೇ ಬಾರಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. 10 ವರ್ಷದ ಆಡಳಿತದ ಬಳಿಕ ಮತ್ತೆ ಮೋದಿ ಸರ್ಕಾರ ರಚನೆಗೊಂಡಿದೆ. ಸತತ 3ನೇ ಬಾರಿಗೆ ಪ್ರಧಾನಿಯಾಗುವ ಮೂಲಕ ಜವಾಹರ್‌ಲಾಲ್ ನೆಹರೂ ದಾಖಲೆ ಸರಿಗಟ್ಟಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮಿತ್ರ ಪಕ್ಷಗಳು 292 ಸ್ಥಾನ ಪಡೆದುಕೊಂಡಿತ್ತು. ಬಿಜೆಪಿ ಏಕಾಂಗಿಯಾಗಿ 240 ಸ್ಥಾನ ಗೆದ್ದುಕೊಂಡಿತ್ತು. ಕಳೆದೆರಡು ಬಾರಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆದಿದ್ದರೆ ಈ ಬಾರಿ ಭಾರಿ ಕುಸಿತ ಕಂಡಿತ್ತು. ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಗಣನೀಯವಾಗಿ ಸ್ಥಾನಗಳ ಸಂಖ್ಯೆ ಕಡಿಮೆಯಾಗಿತ್ತು. ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹಾಗೂ ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮೋದಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರನಿರ್ವಹಿಸಿದೆ.
ಲೋಕಸಭಾ ಚುನಾವಣೆ: ಬಿಜೆಪಿಯನ್ನು ಬಚಾವ್ ಮಾಡಿದ್ದು ಮಾಯಾವತಿ!