ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದಲ್ಲಿ ಕೆಲ ಮಹತ್ತರ ಬದಲಾವಣೆಗಳಿವೆ. ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕ್ಯಾಬಿನೆಟ್ ಸೇರಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನವದೆಹಲಿ(ಜೂ.09) ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದಲ್ಲಿ ಯಾರಿಗೆಲ್ಲಾ ಮಂತ್ರಿ ಸ್ಥಾನ ಅನ್ನೋ ಕುತೂಹಲಕ್ಕೆ ಕೆಲ ಉತ್ತರಗಳು ಸಿಕ್ಕಿದೆ. ಇದರ ನಡುವೆ ಮತ್ತೊಂದು ಮಹತ್ವದ ಬೆಳವಣಿಯಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ಮೋದಿ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನ ನೀಡಲಾಗುತ್ತಿದೆ. ಇದಕ್ಕಾಗಿ ಜೆಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮೋದಿ 3ನೇ ಅವಧಿಯ ಸರ್ಕಾರದಲ್ಲಿ ಜೆಪಿ ನಡ್ಡಾಗೆ ಕೇಂದ್ರ ಸಚಿವ ಸ್ಥಾನ ನೀಡಲಾಗುತ್ತಿದೆ. ಇದರ ಹಿನ್ನಲೆಯಲ್ಲಿ ಜೆಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಾರಿಯ ಮೋದಿ ಸಂಪುಟದಲ್ಲಿ ಹಿಮಾಚಲ ಪ್ರದೇಶದ ನಾಯಕ ಅನುರಾಗ್ ಠಾಕೂರ್‌ಗೆ ಸ್ಥಾನ ನೀಡಿಲ್ಲ. ಅನುರಾಗ್ ಠಾಕೂರ್‌ಗೆ ಬಿಜೆಪಿ ಪಕ್ಷದಲ್ಲಿ ಮಹತ್ವದ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಅನುರಾಗ್ ಠಾಕೂರ್ ಬದಲು ಹಿಮಾಚಲ ಪ್ರದೇಶದ ಮತ್ತೊಬ್ಬ ಪ್ರಮುಖ ನಾಯಕ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಯಶಸ್ಸು ತಂದುಕೊಟ್ಟಿರುವ ಜೆಪಿ ನಡ್ಡಾಗೆ ಮಂತ್ರಿಗಿರಿ ನೀಡಲು ಬಿಜೆಪಿ ಮುಂದಾಗಿದೆ.
undefined
3ನೇ ಬಾರಿ ಪ್ರಧಾನಿಯಾಗಿ ಮೋದಿ ಪ್ರಮಾಣವಚನ; ರಾಜ್ಯಾದ್ಯಂತ ಬಿಜೆಪಿ ಹಿಂದೂಪರ ಕಾರ್ಯಕರ್ತರಿಂದ ವಿಶೇಷ ಪೂಜೆ, ಹರಕೆ!
ಗುಜರಾತ್‌ನಿಂದ ರಾಜ್ಯಸಭಾ ಸದಸ್ಯರಾಗಿರುವ ಜೆಪಿ ನಡ್ಡಾ, 2014 ಮೋದಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಜೆಪಿ ನಡ್ಡಾ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. 2019 ಜೂನ್ 19 ರಂದು ಜೆಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು. ಅಮಿತ್ ಶಾ ಬಳಿಕ ಜೆಪಿ ನಡ್ಡಾ ಬಿಜೆಪಿ ಅಧ್ಯಕ್ಷ ಜವಾಬ್ದಾರಿ ವಹಿಸಿಕೊಂಡಿದ್ದರು. 2019ರಿಂದ 2020ರ ವರೆಗೆ ಬಿಜೆಪಿಯ ವರ್ಕಿಂಗ್ ಪ್ರಸಿಡೆಂಟ್ ಆಗಿ ನೇಮಕಗೊಂಡಿದ್ದ ಜೆಪಿ ನಡ್ಡಾ ಬಳಿಕ ಅವಧಿ ಮುಂದವರಿಸಲಾಗಿತ್ತು. ಮತ್ತೆರಡು ವರ್ಷಕ್ಕೆ ಜೆಪಿ ನಡ್ಡಾರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಸಲಾಗಿತ್ತು.
ಜೆಪಿ ನಡ್ಡಾ ರಾಜೀನಾಮೆಯಿಂದ ಇದೀಗ ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ಯಾರು ಅನ್ನೋ ಕುತೂಹಲ ಮೂಡಿದೆ. ಬಿಜೆಪಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಯಾರ ಹೆಗಲೇರಲಿದೆ ಅನ್ನೋ ಚರ್ಚೆ ನಡೆಯುತ್ತಿದೆ. ಜೂನ್ ತಿಂಗಳಲ್ಲೇ ಜೆಪಿ ನಡ್ಡಾ ಅಧ್ಯಕ್ಷ ಅವಧಿ ಅಂತ್ಯಗೊಳ್ಳುತ್ತಿತ್ತು. ಇದಕ್ಕೂೂ ಮೊದಲೇ ರಾಜೀನಾಮೆ ನೀಡಿರುವ ಜೆಪಿ ನಡ್ಡಾಗೆ ಇದೀಗ ಮೋದಿ ಕ್ಯಾಬಿನೆಟ್‌ನಲ್ಲಿ ಮಂತ್ರಿಸ್ಥಾನ ನೀಡುವುದು ಬಹುತೇಕ ಖಚಿತಗೊಂಡಿದೆ. ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಕೆಲ ನಾಯಕರ ಹೆಸರುಗಳು ಕೇಳಿಬರುತ್ತಿದೆ.
ಮೋದಿ 3.O ಸಂಪುಟದಲ್ಲಿ ಅಣ್ಣಾಮಲೈ? ಸಿಂಗಂಗೆ ಸಿಗುವ ಖಾತೆ ಯಾವುದು?