ನಕ್ಸಲ್ ದಾಳಿ ಬೆನ್ನಲ್ಲೇ ಉನ್ನತ ಮಟ್ಟದ ಸಭೆ ನಡೆಸಿದ ಅಮಿತ್ ಶಾ!

By Suvarna NewsFirst Published Apr 4, 2021, 9:39 PM IST
Highlights

ಚತ್ತೀಸ್‌ಘಡದ ಬಿಜಾಪುರದಲ್ಲಿ ಯೋಧರ ಮೇಲೆ ನಡೆದ ನಕ್ಸಲರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದಾರೆ. ಅತೀ ಭೀಕರ ದಾಳಿ ಬೆನ್ನಲ್ಲೇ ಚತ್ತೀಸಘಡ ಮುಖ್ಯಮಂತ್ರಿ ಜೊತೆ ಮಾತನಾಡಿದ ಅಮಿತ್ ಶಾ, ಇದೀಗ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ಎ.04): ದೇಶ ಕಂಡ ಅತೀ ಭೀಕರ ನಕ್ಸಲರ ದಾಳಿಗಲ್ಲಿ ಚತ್ತೀಸಘಡ ಬಿಜಾಪುರ-ಸುಕ್ಮ ಅರಣ್ಯ ಪ್ರದೇಶದಲ್ಲಿ ನಡೆದ ದಾಳಿ ಒಂದಾಗಿದೆ. 400ಕ್ಕೂ ಹೆಚ್ಚು ನಕ್ಸಲರು ಭಾರತೀಯ ಭದ್ರತಾ ಪಡೆಗಳ ಮೇಲೆ ದಾಳಿ ಮಾಡಿದೆ. ಈ ಗುಂಡಿನ ಚಕಮಕಿಯಲ್ಲಿ 22 ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

22 ಯೋಧರು ಹುತಾತ್ಮ, 30 ಮಂದಿ ನಾಪತ್ತೆ; ಚತ್ತೀಸ್‌ಘಡದಲ್ಲಿ ಅತೀ ಭೀಕರ ನಕ್ಸಲ್ ದಾಳಿ!.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಗುಪ್ತಚರ ಬ್ಯೂರೋ ನಿರ್ದೇಶಕ ಅರವಿಂದ್ ಕುಮಾರ್, ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. 

ಚತ್ತೀಸಘಡದಲ್ಲಿ ಭದ್ರತಾ ಪರಿಸ್ಥಿತಿ ಪರಿಶೀಲನೆ, ಮುಂದಿನ ಕ್ರಮ ಸೇರಿದಂತೆ ಹಲವು ಮಹತ್ವ ಮಾಹಿತಿಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ. ಘಟನೆ ಬಳಿಕ ಚತ್ತೀಸ್‌ಘಡ ಮುಖ್ಯಮಂತ್ರಿ ಭೂಪೇಶ್ ಬಘೇಲಾ ಜೊತೆ ಮಾತುಕತೆ ನಡೆಸಿದ್ದರು. ನಕ್ಸಲ್ ದಾಳಿಯಿಂದಾಗಿ ಅಮಿತ್ ಶಾ ತಮ್ಮ ಚುನಾವಣಾ ಪ್ರಚಾರ ರ್ಯಾಲಿ ರದ್ದು ಮಾಡಿದ್ದಾರೆ. 

click me!