
ನವದೆಹಲಿ (ಸೆ.22) ನವರಾತ್ರಿ ಹಬ್ಬ ಆರಂಭಗೊಂಡಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದೆ. ಹಿಂದೂಗಳು ಪವಿತ್ರ ನವರಾತ್ರಿ ಹಬ್ಬಕ್ಕಾಗಿ ವೃತ ಕೈಗೊಂಂಡಿದ್ದಾರೆ. ಹಲವರು ಕನಿಷ್ಠ ಮಾಂಸಾಹಾರ ತ್ಯಜಿಸಿ ದೇವರ ಕೃಪೆಗೆ ಪಾತ್ರರಾಗಲು ಬಯಸಿದ್ದಾರೆ. ಇತ್ತ ಹಿಂದೂ ಸಂಘಟನೆಗಳು, ಕೆಲ ಹಿಂದೂ ಮುಖಂಡರು ನವರಾತ್ರಿ ಹಬ್ಬದ ವೇಳೆ ಮಾಂಸಾಹಾರ ಮಾರಾಟ ಬ್ಯಾನ್ ಮಾಡುವಂತೆ ಆಗ್ರಹಿಸಿದ್ದಾರೆ. ಈ ಆಗ್ರಹದ ಬೆನ್ನಲ್ಲೇ ಗರಂ ಆಗಿರುವ ಕಾಂಗ್ರೆಸ್ ನಾಯಕ ಉದಿತ್ ರಾಜ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಯಾರೋ ಹೇಳಿದರೂ ಎಂದು ಹಿಂದೂಗಳು ಮಾಂಸಾಹಾರ ಬಿಡ್ತೀರಾ? ನವರಾತ್ರಿ ವೇಳೆ ಹಲವು ಹಿಂದೂಗಳು ಮಾಂಸಾರಾ ಸೇವನೆ ಮಾಡುತ್ತಾರೆ. ನವರಾತ್ರಿ ವೇಳೆ ಮಾಂಸಾಹಾರ ನಿಷೇಧ ಸರಿಯಲ್ಲ ಎಂದು ಉದಿತ್ ರಾಜ್ ಹೇಳಿದ್ದಾರೆ.
ನವರಾತ್ರಿ ಹಬ್ಬಕ್ಕೆ ಮಾಂಸಹಾರ ನಿಷೇಧ ಮಾಡುವ ಅಗ್ರಹವೇ ಅಸಂವಿಧಾನಿಕ ಎಂದು ಉದಿತ್ ರಾಜ್ ಹೇಳಿದ್ದಾರೆ. ಯಾರಿಗೂ ಮಾಂಸಾಹಾರ ಬ್ಯಾನ್ ಮಾಡುವ ಅಧಿಕಾರವಿಲ್ಲ. ಯಾರ ಯಾವ ಆಹಾರ ತಿನ್ನಬೇಕು ಎಂದು ಮುಖಂಡರು ಅಥವಾ ಇನ್ಯಾರೋ ಹೇಳುವುದಲ್ಲ. ನವರಾತ್ರಿ ವೇಳೆ ಹಲವು ಹಿಂದೂಗಳು ಮಾಂಸಾಹಾರ ಸೇವಿಸುತ್ತಾರೆ. ಹಲವು ದೇವಸ್ಥಾನ, ಗುಡಿಗಳಲ್ಲಿ ಪ್ರಾಣಿ ಬಲಿಗಳು ನಡೆಯುತ್ತದೆ. ಪ್ರಮುಖವಾಗಿ ಕಾಳಿ ಮಾತೆಗೆ ಮಾಂಸಾಹಾರ ಪ್ರಸಾದ ನೀಡುವ ಪದ್ಧತಿಗೆಳು ಕೆಲವೆಡೆ ಇದೆ. ಹೀಗಾಗಿ ಮಾಂಸಾಹಾರ ಬ್ಯಾನ್ ಆಗ್ರಹವೇ ತಪ್ಪು ಎಂದು ಉದಿತ್ ರಾಜ್ ಹೇಳಿದ್ದಾರೆ.
ಯಾರೋ ಹೇಳಿದರು, ಸಂಘಟನೆ ಹೇಳಿತು ಎಂದು ಮಾಂಸಾಹಾರ ಬ್ಯಾನ್ ಮಾಡಲು ಸಾಧ್ಯವಿಲ್ಲ. ಸರ್ಕಾರಕ್ಕೆ, ಸ್ಥಳೀಯ ಆಡಳಿತಕ್ಕೆ ಮಾತ್ರ ಈ ಅಧಿಕಾರವಿದೆ. ಆರ್ಟಿಕಲ್ 19ರ ಪ್ರಕಾರ ನಾಗರೀಕರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಯಾರೂ ನಾಗರೀಕರ ಮೇಲೆ ಯಾವ ಆಹಾರ ತಿನ್ನಬೇಕು, ಬೇಡ ಎಂದು ಹೇರಲು ಸಾಧ್ಯವಿಲ್ಲ ಎಂದು ಉದಿತ್ ರಾಜ್ ಹೇಳಿದ್ದಾರೆ.ಯಾರೋ ಹೇಳಿದರೂ ಎಂದು ಶೇಕಡಾ 100ರಷ್ಟು ಹಿಂದೂಗಳು ನವರಾತ್ರಿಗೆ ಮಾಂಸಾಹಾರ ಸೇವನೆ ತ್ಯಜಿಸುತ್ತಾರಾ?, ನವರಾತ್ರಿಗೆ ಎಲ್ಲಾ ಹಿಂದೂಗಳು ಚಿಕನ್, ಮಟನ್ ತಿನ್ನವುದು ಬಿಡುತ್ತಾರಾ? ಇವೆಲ್ಲಾ ಕಾನೂನು ಬಾಹಿರ ನಡೆಗಳು ಎಂದು ಉದಿತ್ ರಾಜ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಉದಿತ್ ರಾಜ್ ಹೇಳಿಕೆಗೆ ಪರ ವಿರೋಧಗಳು ವ್ಯಕ್ತವಾಗಿದೆ. ಕೆಲವರು ನವರಾತ್ರಿ ಸಮಯದಲ್ಲಿ ಮಾಂಸಾಹಾರ ನಿಷೇಧ ಸರಿಯಲ್ಲ ಎಂದಿದ್ದಾರೆ. ಇದೇ ವೇಳೆ ಹಿಂದೂಗಳ ನಂಬಿಕೆ ಹಾಗೂ ಭಾವನೆಗಳ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ. ನಮ್ಮ ಪವಿತ್ರ ಹಬ್ಬದ ವೇಳೆ ಮಾಂಸಾಹರ ನಿಷೇಧ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ