ಮಿಲಿಯನ್ ವೀವ್ಸ್‌ ಗಳಿಸಿದ ರೀಲ್ಸ್ ನೋಡಿ ಮನೆಗೆ ಬಂದ ಪೊಲೀಸರು: ಸಾಯುವುದಾಗಿ ಬೆದರಿಸಿದ ಯುವತಿ

Published : Sep 22, 2025, 02:00 PM IST
 Woman Refuses to Delete Reels

ಸಾರಾಂಶ

UP Police vs Influencer: ಯುವತಿಯೊಬ್ಬಳು ಪೊಲೀಸ್ ಠಾಣೆಯ ಮುಂದೆ  ರೀಲ್ಸ್ ಮಾಡಿದ್ದಳು ಲಕ್ಷಾಂತರ ವೀವ್ಸ್ ಪಡೆದ ಈ ವಿಡಿಯೋವನ್ನು ಡಿಲೀಟ್ ಮಾಡುವಂತೆ ಪೊಲೀಸರು ಸೂಚಿಸಿದಾಗ, ಆಕೆ ಪ್ರಾಣ ಬಿಡುತ್ತೇನೆ ಹೊರತು ರೀಲ್ಸ್ ಡಿಲೀಟ್ ಮಾಡುವುದಿಲ್ಲ ಎಂದು ಪೊಲೀಸರಿಗೆಯೇ ಧಮ್ಕಿ ಹಾಕಿದ್ದಾಳೆ.

ಪೊಲೀಸ್ ಠಾಣೆ ಮುಂದೆ ಮಾಡಿದ ರೀಲ್ಸ್ ವೈರಲ್

ಇದು ಸಾಮಾಜಿಕ ಜಾಲತಾಣದ ಯುಗ. ಸೋಶಿಯಲ್ ಮೀಡಿಯಾದಲ್ಲಿ ಒಂದು ರೀಲ್ಸ್ ವೈರಲ್ ಆಗುವುದಕ್ಕಾಗಿ ಜನ ಏನೇನೋ ಸಾಹಸ ಮಾಡುತ್ತಾರೆ. ಜೀವಕ್ಕೆ ಅಪಾಯವುಂಟು ಮಾಡುವ ರಿಸ್ಕ್ ತೆಗೆದುಕೊಳ್ಳುತ್ತಾರೆ. ಹೀಗೆ ರೀಲ್ಸ್ ವೈರಲ್ ಆಗುವುದಕ್ಕೋಸ್ಕರ ಪ್ರಾಣ ಬಿಟ್ಟವರು ಇದ್ದಾರೆ. ಅದರಲ್ಲೂ ಚೆನ್ನಾಗಿ ಓಡಿ ವೈರಲ್ ಆದ ರೀಲ್ಸ್‌ ಅನಿವಾರ್ಯ ಕಾರಣಕ್ಕೆ ಡಿಲೀಟ್ ಮಾಡುವಂತಹ ಸ್ಥಿತಿ ಬಂದರೆ, ಅಥವಾ ಅದಾಗಿಯೇ ಅದು ಡಿಲೀಟ್ ಆದರೆ ಅನೇಕ ಇನ್‌ಫ್ಲುಯೆನ್ಸರ್‌ಗಳು ಪ್ರಾಣವೇ ಹೋದಂತೆ ಬೇಸರಿಸುವುದುಂಟು, ಆ ರೀಲ್ಸ್‌ಗಾಗಿ ಎಷ್ಟೊಂದು ಕಷ್ಟಪಟ್ಟೆವು ಅದೇ ರೀಲ್ಸ್ ಡಿಲೀಟ್ ಆಗೋಯ್ತು, ಎಷ್ಟೊಂದು ಚೆನ್ನಾಗಿ ಓಡಿತ್ತು. ಆ ರೀಲ್ಸ್‌ನ್ನೇ ಡಿಲೀಟ್ ಮಾಡಿದ್ರು ಎಂದು ಕೆಲವರು ದುಃಖ ತೋಡಿಕೊಳ್ಳುವುದನ್ನು ಕೇಳಬಹುದು. ಅದೇ ರೀತಿ ಇಲ್ಲೊಂದು ಕಡೆ ಯುವತಿಯೊಬ್ಬಳ ರೀಲ್ಸ್ ಚೆನ್ನಾಗಿ ವೀವ್ಸ್ ಪಡೆದು ವೈರಲ್ ಆಗಿದೆ. ಆದರೆ ಅದನ್ನು ಪೊಲೀಸರು ಡಿಲೀಟ್ ಮಾಡುವಂತೆ ಹೇಳಿದ್ದಾರೆ. ಇದರಿಂದ ಬೇಜಾರಾದ ಆಕೆ, ಪ್ರಾಣ ಬೇಕಾದ್ರೆ ಬಿಡ್ತೀನಿ. ಆದ್ರೆ ರೀಲ್ಸ್ ಮಾತ್ರ ಡಿಲೀಟ್ ಮಾಡಲ್ಲ ಎಂದು ಪೊಲೀಸರಿಗೆಯೇ ಧಮ್ಕಿ ಹಾಕಿದ್ದಾಳೆ.

ಇನ್‌ಫ್ಲುಯೆನ್ಸರ್ ಅರಸಿ ಮನೆಗೆ ಬಂದ ಪೊಲೀಸರು: ವೀಡಿಯೋ ಡಿಲೀಟ್ ಮಾಡುವಂತೆ ಆಗ್ರಹ

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿಯಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಮಹಿಳೆಯ ಈ ರೀಲ್ಸ್ ಕ್ರೇಜ್‌ಗೆ ಪೊಲೀಸರೇ ದಂಗಾಗಿದ್ದಾರೆ. ಅಂದಹಾಗೆ ಈ ಮಹಿಳೆ ಪೊಲೀಸ್ ಠಾಣೆಯ ಮುಂದೆಯೇ ರೀಲ್ಸ್ ಮಾಡಿದ್ದಾಳೆ. ಇದು ಸ್ವಲ್ಪ ಸಮಯದಲ್ಲೇ ಚೆನ್ನಾಗಿ ಓಡಿ ವೈರಲ್ ಆಗಿತ್ತು. ಆದರೆ ಆಕೆಯ ರೀಲ್ಸ್‌ನಲ್ಲಿ ಪೊಲೀಸ್ ಸ್ಟೇಷನ್ ಇದ್ದ ಕಾರಣಕ್ಕೆ ಪೊಲೀಸರು ರೀಲ್ಸ್ ಡಿಲೀಟ್ ಮಾಡುವಂತೆ ಆಕೆಗೆ ವಾರ್ನ್ ಮಾಡಿದ್ದಾರೆ. ಆದರೆ ಆಕೆ ಮತ್ತೊಂದು ವೀಡಿಯೋ ಮಾಡಿದ್ದು, ಬೇಕಾದರೆ ಸಾಯ್ತಿನಿ ಆದರೆ ರೀಲ್ಸ್ ಮಾತ್ರ ಡಿಲೀಟ್ ಮಾಡಲ್ಲ ಎಂದು ಪೊಲೀಸರಿಗೆ ವೀಡಿಯೋ ಮೂಲಕವೇ ವಾರ್ನ್ ಮಾಡಿದ್ದಾಳೆ. ಪೊಲೀಸರು ಡಿಲೀಟ್ ಮಾಡಲು ಹೇಳಿದ ವೀಡಿಯೋದಲ್ಲಿ ಆಕೆ ಪೊಲೀಸ್ ಠಾಣೆಯಿಂದ ಹೊರಗೆ ಬರುತ್ತಿರುವ ದೃಶ್ಯವಿದೆ. ಇದನ್ನು ಗಮನಿಸಿದ ನಂತರ ಪೊಲೀಸರು ಆಕೆಯನ್ನು ಗುರುತಿಸಿ ವಿಡಿಯೋ ಡಿಲೀಟ್ ಮಾಡುವಂತೆ ಹೇಳಿದ್ದಾರೆ. ಆಕೆ ಹೇಳುವ ಪ್ರಕಾರ ಆ ವೀಡಿಯೋವನ್ನು ಮಿಲಿಯನ್ ಜನರು ವೀಕ್ಷಿಸಿದ್ದಾರಂತೆ. ಹೀಗಾಗಿ ಆಕೆಗೆ ಆ ವೀಡಿಯೋ ಡಿಲೀಟ್ ಮಾಡುವ ಮನಸ್ಸಿಲ್ಲ...

ಬೇಕಾದ್ರೆ ಸಾಯ್ತಿನಿ ವೀಡಿಯೋ ಮಾತ್ರ ಡಿಲೀಟ್ ಮಾಡಲ್ಲ ಎಂದ ಯುವತಿ...

zoyakhan.9513 ಎಂಬ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವ ರೂಹಿ ಎಂಬ ಮಹಿಳೆಯೇ ಹೀಗೆ ವೀಡಿಯೋ ಡಿಲೀಟ್ ಮಾಡಲು ಹಿಂದೇಟು ಹಾಕುತ್ತಿರುವ ಮಹಿಳೆ, ಈಕೆ ಈ ಇನ್ಸ್ಟಾಗ್ರಾಮ್ ಖಾತೆಯಿಂದಲೇ ವೀಡಿಯೋ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಭೋಜ್‌ಪುರಿ ಹಾಡೊಂದು ಹಿನ್ನೆಲೆಯಲ್ಲಿ ಕೇಳಿ ಬರುತ್ತಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ರೀಲ್ಸ್‌ನಂತೆಯೇ ಇತ್ತು. ಆದರೆ ಕೆಲ ಸಮಯದಲ್ಲೇ ಈ ರೀಲ್ಸ್ ಪೊಲೀಸರ ಗಮನವನ್ನು ಸೆಳೆದಿದೆ. ಹೀಗಾಗಿ ಪೊಲೀಸರು ರೂಹಿಯ ನಿವಾಸವನ್ನು ಹುಡುಕಿಕೊಂಡು ಮನೆಗೆ ಬಂದಿದ್ದಾರೆ. ವೀಡಿಯೋವನ್ನು ಡಿಲೀಟ್ ಮಾಡುವಂತೆ ಹೇಳಿದ್ದಾರೆ. ಆದರೆ ಈ ವೀಡಿಯೋ ತುಂಬಾ ಫೇಮಸ್ ಆಗಿದ್ದು, ಅದನ್ನು ನಾನು ಡಿಲೀಟ್ ಮಾಡಲ್ಲ ಎಂದು ಆಕೆ ಪೊಲೀಸರಿಗೆ ಹೇಳಿದ್ದಾಳೆ. ಆದರೆ ಪೊಲೀಸರು ಆಕೆಯ ಮಾತು ಕೇಳಲು ಸಿದ್ಧರಿಲ್ಲದೇ ಹೋದಾಗ ಆಕೆ ಅವರಿಗೆ ಚಾಕು ತೋರಿಸಿ ತಾನು ಸಾಯುವುದಾಗಿ ಹೇಳಿದ್ದಾಳೆ. ಅಲ್ಲದೇ ಅದೇ ರೀತಿ ಮಾಡುವುದಕ್ಕೂ ಮುಂದಾಗಿದ್ದಾಳೆ.

ಇಷ್ಟಕ್ಕೆ ಸಮಸ್ಯೆ ಅಂತ್ಯಗೊಂಡಿಲ್ಲ, ಮತ್ತೊಂದು ವೀಡಿಯೋ ಮಾಡಿದ ರೂಹಿ ಪೊಲೀಸ್ ಠಾಣೆಯ ಹೊರಗೆ ವೀಡಿಯೋ ಮಾಡಲಾಗಿದೆ. ಆಗಷ್ಟೇ ರಿಲೀಸ್ ಆಗಿದ್ದ ಹಾಡನನು ಬಳಸಿ ರೀಲ್ಸ್ ಮಾಡಲಾಗಿತ್ತು. ಪೊಲೀಸರು ಈ ವೀಡಿಯೋ ಡಿಲೀಟ್ ಮಾಡುವಂತೆ ನಮಗೆ ಕಿರುಕುಳ ನೀಡುತ್ತಿದ್ದಾರೆ. ನಾವು ಯಾಕೆ ವೀಡಿಯೋ ಡಿಲೀಟ್ ಮಾಡಬೇಕು ಎಂದು ಹೇಳಿದ ಆಕೆ ಈ ರೀಲನ್ನು ಕೂಡ ವೈರಲ್ ಮಾಡುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಭಾರತದ್ದೇ ನೆಲದಲ್ಲಿರುವ ಈ ಹೊಟೇಲ್‌ಗೆ ಭಾರತೀಯರಿಗಿಲ್ಲ ಪ್ರವೇಶ: ತೀವ್ರ ಆಕ್ರೋಶ..

ಇದನ್ನೂ ಓದಿ: 72ರ ವೃದ್ಧನ ಕೈ ಹಿಡಿದ 27ರ ಯುವತಿ: ಹಿಂದೂ ಸಂಪ್ರದಾಯದಂತೆ ದಾಂಪತ್ಯಕ್ಕೆ ಕಾಲಿಟ್ಟ ಉಕ್ರೇನ್ ಜೋಡಿ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..