Kashmir Files ಸಿನಿಮಾ ನೋಡಲು ಬಯಸುವವರಿಗೆ ರಜೆ ನೀಡಿದ ಸರ್ಕಾರ

Suvarna News   | Asianet News
Published : Mar 16, 2022, 10:34 AM ISTUpdated : Mar 16, 2022, 10:45 AM IST
Kashmir Files ಸಿನಿಮಾ ನೋಡಲು ಬಯಸುವವರಿಗೆ ರಜೆ ನೀಡಿದ ಸರ್ಕಾರ

ಸಾರಾಂಶ

ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ನೋಡಲು ಅರ್ಧ ದಿನ ರಜೆ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ ನೀಡಿದ ಅಸ್ಸಾಂ ಸರ್ಕಾರ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಘೋಷಣೆ

ಅಸ್ಸಾಂ(ಮಾ.16): ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ದೇಶದಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕತೆ ಆಧರಿಸಿದ ಸಿನಿಮಾ ಇದಾಗಿದ್ದು, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ಸಿನಿಮಾಗೆ ಈಗಾಗಲೇ ತೆರಿಗೆ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ ಈಗ ಅಸ್ಸಾಂ ಸರ್ಕಾರ ಈ ಸಿನಿಮಾ ನೋಡಲು ಬಯಸುವ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ ನೀಡಲು ನಿರ್ಧರಿಸಿದೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma)ಮಂಗಳವಾರ ಈ ಘೋಷಣೆ ಮಾಡಿದ್ದಾರೆ. ನೀವು ಕಾಶ್ಮೀರ ಫೈಲ್‌ ಸಿನಿಮಾವನ್ನು ನೋಡಲು ಬಯಸುವುದಾದರೆ ಅರ್ಧ ದಿನ ರಜೆ ತೆಗೆದುಕೊಳ್ಳಿ ಎಂದು ಅಸ್ಸಾಂ ಸಿಎಂ ರಾಜ್ಯ ಸರ್ಕಾರಿ ನೌಕರರಿಗೆ ಹೇಳಿದ್ದಾರೆ. 

ಸಂಜೆ ಬಜೆಟ್ ಅಧಿವೇಶನದ ಎರಡನೇ ದಿನದ ಭಾಷಣವನ್ನು ಮುಗಿಸಿದ ನಂತರ ಶರ್ಮಾ ಅವರು ತಮ್ಮ ಇಡೀ ಕ್ಯಾಬಿನೆಟ್‌ನೊಂದಿಗೆ ಗುವಾಹಟಿಯ ಥಿಯೇಟರ್‌ನಲ್ಲಿ ದಿ ಕಾಶ್ಮೀರ ಫೈಲ್ಸ್‌ ಚಲನಚಿತ್ರವನ್ನು ವೀಕ್ಷಿಸಿದರು.  ಅದೇ ದಿನ ಅವರು ಈ ಪ್ರಕಟಣೆ ಮಾಡಿದರು. ಈ ಸಂದರ್ಭದಲ್ಲಿ ಸಿಎಂ ಜತೆ ಬಿಜೆಪಿಯ ಶಾಸಕರು, ಸಚಿವರು ಇದ್ದರು. ಇತ್ತೀಚೆಗೆ ಬಿಡುಗಡೆಯಾದ ದಿ ಕಾಶ್ಮೀರ ಫೈಲ್ಸ್‌ ಚಲನಚಿತ್ರವನ್ನು ಶ್ಲಾಘಿಸಿದ ಶರ್ಮಾ, ಕಾಶ್ಮೀರ ಫೈಲ್ಸ್ ಚಲನಚಿತ್ರವನ್ನು ವೀಕ್ಷಿಸಲು ರಾಜ್ಯ ಸರ್ಕಾರದ ಎಲ್ಲಾ ನೌಕರರು ಅರ್ಧ ದಿನದ ರಜೆಯನ್ನು ಪಡೆಯಬಹುದು ಎಂದು ಹೇಳಿದರು.

The Kashmir Files: ಕಾಶ್ಮೀರ ಫೈಲ್ಸ್ ಸಿನಿಮಾ ಬಗ್ಗೆ ಬುದ್ಧಿಜೀವಿಗಳೇಕೆ ಉರಿದುಕೊಳ್ತಿದಾರೆ?
 

ಚಿತ್ರವು ಕಾಶ್ಮೀರಿ ಹಿಂದೂಗಳ ವಲಸೆ ಹಾಗೂ ಕಾಶ್ಮೀರದಲ್ಲಿ ನಡೆದ ಹತ್ಯಾಕಾಂಡ ಘಟನೆಯನ್ನು ಆಧರಿಸಿದೆ. ಕಾಶ್ಮೀರ ಫೈಲ್‌ ಸಿನಿಮಾದ ಸತ್ಯ ಕುರಿತು ಮಾತನಾಡಿದ ಅವರು, ಭಯೋತ್ಪಾದಕರ ಕೃತ್ಯವು ಹೇಯವಾಗಿದೆ ಮತ್ತು ಅದನ್ನು ಯಾರೂ ಧಾರ್ಮಿಕ ನೆಲೆಯಲ್ಲಿ ತೆಗೆದುಕೊಳ್ಳಬಾರದು. ಭಯೋತ್ಪಾದಕ ಯಾವುದೇ ಧರ್ಮದವನಾಗಿರಬಹುದು ಎಂದರು. 90 ರ ದಶಕದ ಆರಂಭದಲ್ಲಿ ಕಣಿವೆಯಿಂದ ಪಂಡಿತ ಸಮುದಾಯದ ನಿರ್ಗಮನವನ್ನು ಚಿತ್ರಿಸುವ ದಿ ಕಾಶ್ಮೀರ ಫೈಲ್ಸ್ ಚಲನಚಿತ್ರಕ್ಕೆ ಬಿಜೆಪಿ ಆಡಳಿತದ ರಾಜ್ಯಗಳು ತೆರಿಗೆ ಮುಕ್ತ ಎಂದು ಘೋಷಣೆ ಮಾಡಿವೆ.


ದಿ ಕಾಶ್ಮೀರ ಫೈಲ್ಸ್ ಸಿನಿಮಾ ತುಂಬಾ ಸದ್ದು ಮಾಡುತ್ತಿದೆ. ಇದರಲ್ಲಿ ಅನುಪಮ್ ಖೇರ್ ಅವರು ಅಭಿನಯಿಸಿ ಜೀವ ತುಂಬಿರುವ ಪುಷ್ಕರನಾಥ ಪಂಡಿತ್ ಎಂಬ ಪಾತ್ರ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಹೃದಯ ಆರ್ದ್ರಗೊಳಿಸುತ್ತದೆ. ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯಾಕಾಂಡದ ಪ್ರತ್ಯಕ್ಷ ಸಾಕ್ಷಿ ಮತ್ತು ಅದರ ಬಲಿಪಶು ಕೂಡ. ಸ್ವತಃ ಅನುಪಮ್ ಖೇರ್ ಅವರು ಕೂಡ ಪಂಡಿತ ಸಮುದಾಯದ ಹಿನ್ನೆಲೆಯವರು ಆದುದರಿಂದ ಈ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. 

The Kashmir Files ಚಿತ್ರ ಪ್ರದರ್ಶನ ಮಾಡಿ, ಭಟ್ಕಳದಲ್ಲಿ ಚಿತ್ರಮಂದಿರದ ಮುಂದೆ ಪ್ರತಿಭಟನೆ
 

ಕಾಶ್ಮೀರ ಪಂಡಿತರು, ಹಿಂದೂಗಳ ಮೇಲೆ ನಡೆದ ನರಮೇಧ ನೈಜ ಘಟನೆ ಆಧರಿಸಿ ಬಂದಿರುವ ದಿ ಕಾಶ್ಮೀರ ಫೈಲ್ಸ್ ಬಾಲಿವುಡ್ ಚಿತ್ರ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇಷ್ಟು ದಿನ ಅಡಗಿದ್ದ ನೋವು ಒಂದೊಂದಾಗಿ ಹೊರಬರುತ್ತಿದೆ. ನೋವಿನಲ್ಲಿ ಬೆಂದು ಹೋದ ಕಾಶ್ಮೀರ ಪಂಡಿತರು ಬಿಕ್ಕಿ ಬಿಕ್ಕಿ ಅತ್ತು ಸಮಾಧಾನ ಪಡುತ್ತಿದ್ದಾರೆ. ಇತ್ತ ಕಾಶ್ಮೀರ ಪಂಡಿತರ ನರಮೇಧ ಕಣ್ಣಾರೆ ನೋಡಿದ ಹಲವರು 32 ವರ್ಷಗಳ ಬಳಿಕ ಸತ್ಯ ಬಿಚ್ಚಿಡುತ್ತಿದ್ದಾರೆ. ಇದೀಗ ಕಾಶ್ಮೀರದ ಪೀಪಲ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯ ಕಾರ್ಯದರ್ಶಿ ಜಾವೇದ್ ಬೈಗ್ ಕಾಶ್ಮೀರಿ ಪಂಡಿತ್ ಕುಟುಂಬ ಗಿರಿಜಾ ಟಿಕೂ ಮೇಲೆ ನಡೆದ ಅತ್ಯಂತ ಘನಘೋರ ಘಟನೆಯನ್ನು ಹೇಳಿದ್ದಾರೆ. 

ಕಾಶ್ಮೀರದ ಮೂಲಭೂತ ವಾದಿ ಮುಸ್ಲಿಂವರು ಪಾಕಿಸ್ತಾನ ನೀಡಿದ ಗನ್ ಬಳಸಿ ಕಾಶ್ಮೀರ ಪಂಡಿತರ ಮೇಲೆ ಗುಂಡಿನ ಸುರಿಮಳೆಗೈದಿದ್ದರು. ಸ್ವತಂತ್ರ್ಯ ಕಾಶ್ಮೀರ ಹೆಸರಿನಲ್ಲಿ ಗಿರಿಜಾ ಟಿಕೂವನ್ನು ಜೀವಂತವಾಗಿ ಕತ್ತರಿಸಿದ್ದರು. ಇದು ಸತ್ಯ ಘಟನೆ. ಇದರಲ್ಲಿ ಯಾವುದೇ ಪ್ರಚಾರ ಅಥವಾ ಇನ್ಯಾವುದೇ ಉದ್ದೇಶವಿಲ್ಲ. ನಾನು ಈ ಸಂದರ್ಭದಲ್ಲಿ ಕೈಮುಗಿದ ಪಂಡಿತ್ ಬಿರಾದಾರಿ ಕುಟುಂಬದಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಜಾವೇದ್ ಬೈಗ್ ಟ್ವೀಟ್ ಮಾಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?