ಬೆಂಗಳೂರು (ಜುಲೈ 10): ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನ, ಭಾರತದ ರಫೇಲ್ ಜೆಟ್‌ಅನ್ನು ಉರುಳಿಸಿದ್ದಾಗಿ ಹೇಳಿಕೊಂಡಿತ್ತು. ಕೊನೆಗೆ ಚೀನಾ ಕೂಡ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲು ಬಳಸಿಕೊಂಡಿತ್ತು. ಆದರೆ, ಆಪರೇಷನ್ ಸಿಂದೂರ್ ಟೈಮ್‌ಅಲ್ಲಿ ಪಾಕಿಸ್ತಾನ ಹಾಗೂ ಚೀನಾಗೆ ಚಳ್ಳೆಹಣ್ಣು ತಿನ್ನಿಸಿದ್ದು ರಫೇಲ್‌ನ ಬಾಲ ಎನ್ನುವುದು ಗೊತ್ತಾಗಿದೆ. ಡಿಕಾಯ್ ಸಿಸ್ಟಮ್ ಎನ್ನುವ ಎಐ ಆಧಾರಿತ ರಫೇಲ್‌ನ ಬಾಲಕ್ಕೆ ಪಾಕಿಸ್ತಾನ ಕ್ಷಿಪಣಿ ಮೂಲಕ ದಾಳಿ ನಡೆಸಿತ್ತು ಎನ್ನುವುದು ಗೊತ್ತಾಗಿದೆ. ವಿಮಾನ ರಕ್ಷಣೆಗಾಗಿ ಇರುವ ವ್ಯವಸ್ಥೆ ಇದಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
06:56 PM (IST) Jul 10
06:36 PM (IST) Jul 10
ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಗಿಂತ ಶ್ರೀಮಂತ ಉದ್ಯಮಿ, ಅಮೆರಿಕದಲ್ಲಿರುವ ಟಾಪ್ 10 ಶ್ರೀಮಂತರ ವಲಸಿಗರ ಪೈಕಿ ಚೌಧರಿ ಸ್ಥಾನ ಪಡೆದಿದ್ದಾರೆ.
06:27 PM (IST) Jul 10
ಪ್ರತಿಯೊಂದು ಕೆಲಸದಲ್ಲೂ ನಿವೃತ್ತಿ ಇರುತ್ತದೆ, ಆದರೆ ರಾಜಕೀಯದಲ್ಲಿ ಮಾತ್ರ ಇಲ್ಲ. ಆದರೆ, ಬಿಜೆಪಿ 75 ವರ್ಷಗಳ ನಂತರ ನಿವೃತ್ತಿ ಹೊಂದಬೇಕೆಂಬ ನಿಯಮವನ್ನು ಜಾರಿಗೊಳಿಸುತ್ತಿದೆ ಎಂದು ವರದಿಯಾಗಿದೆ. ಇದೀಗ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
06:17 PM (IST) Jul 10
ಕಡಿಮೆ ಹೂಡಿಕೆಯಲ್ಲಿ ಲಾಭದಾಯಕ ವ್ಯವಹಾರ ಆರಂಭಿಸುವ ಕನಸು ಕಾಣುತ್ತಿದ್ದೀರಾ? ₹1 ಲಕ್ಷದೊಳಗೆ ಆರಂಭಿಸಬಹುದಾದ 10 ಲಾಭದಾಯಕ ವ್ಯವಹಾರಗಳಿವೆ. ಬ್ಲಾಗಿಂಗ್ ನಿಂದ ಡಿಜಿಟಲ್ ಮಾರ್ಕೆಟಿಂಗ್ ವರೆಗೆ, ನಿಮ್ಮ ಕೌಶಲ್ಯಕ್ಕೆ ತಕ್ಕ ವ್ಯವಹಾರವನ್ನು ಆಯ್ಕೆ ಮಾಡಿ ಯಶಸ್ಸಿನತ್ತ ಹೆಜ್ಜೆ ಹಾಕಿ.
04:06 PM (IST) Jul 10
ಯೆಮನ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಬಿಡುಗಡೆಗೆ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದೆ.
03:38 PM (IST) Jul 10
03:16 PM (IST) Jul 10
ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ಮುಟ್ಟಿನ ತಪಾಸಣೆ ಹೆಸರಿನಲ್ಲಿ ಅಮಾನವೀಯ ಘಟನೆ ನಡೆದಿದ್ದು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ
03:10 PM (IST) Jul 10
ಈ ಫ್ಲೆಕ್ಸಿಬಿಲಿಟಿ ನೀಡುವ ಕೆಲವು ಯೋಜನೆಗಳಲ್ಲಿ ICICI ಲೊಂಬಾರ್ಡ್ ಎಲಿವೇಟ್ ಪ್ಲ್ಯಾನ್, CARE ಸುಪ್ರೀಂ ಪ್ಲ್ಯಾನ್ ಮತ್ತು ನಿವಾ ಬುಪಾ ಹೆಲ್ತ್ ರೀಅಶ್ಯೂರ್ ಯೋಜನೆ ಸೇರಿವೆ.
12:50 PM (IST) Jul 10
ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ರಾಷ್ಟ್ರೀಯವಾದಿ ಮುಸ್ಲಿಮರು ಬಿಜೆಪಿಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.
12:47 PM (IST) Jul 10
ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯಲ್ಲಿ ವಿಜಯ್ ದೇವರಕೊಂಡ ಮತ್ತು ರಾಣಾ ದಗ್ಗುಬಾಟಿ ಸೇರಿದಂತೆ 29 ಸೆಲೆಬ್ರಿಟಿಗಳನ್ನು ಜಾರಿ ನಿರ್ದೇಶನಾಲಯ (ED) ಹೆಸರಿಸಿದೆ.
12:05 PM (IST) Jul 10
ಪೊಲೀಸ್ ಠಾಣೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯ ಮನವೊಲಿಸಲು ಹಾಡೊಂದನ್ನು ಹಾಡಿ ದಾಂಪತ್ಯ ವಿರಹಕ್ಕೆ ಬ್ರೇಕ್ ಹಾಕಿದ್ದಾನೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಈ ಘಟನೆಯ ವೀಡಿಯೋ ಮತ್ತೆ ವೈರಲ್ ಆಗುತ್ತಿದೆ.
10:00 AM (IST) Jul 10
ಲಕ್ನೋದ ಲುಲು ಮಾಲ್‌ನಲ್ಲಿ ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರ ಮತ್ತು ಕಿರುಕುಳ ನೀಡಿದ ಆರೋಪದ ಮೇಲೆ ಕ್ಯಾಶ್ ಸೂಪರ್‌ವೈಸರ್‌ನನ್ನು ಬಂಧಿಸಲಾಗಿದೆ. ಮತಾಂತರಕ್ಕೆ ಒತ್ತಾಯಿಸಿ, ನಿರಾಕರಿಸಿದರೆ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಸಂತ್ರಸ್ತೆ ವರದಿ ಮಾಡಿದ್ದಾರೆ.
09:17 AM (IST) Jul 10
ನವದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯದಲ್ಲಿ ಗುರುವಾರ ಬೆಳಿಗ್ಗೆ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಕರ್ನಾಟಕ ಭವನ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಕಂಪದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.
08:01 AM (IST) Jul 10
ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ನೆರವು ನೀಡಲು ಉಗ್ರ ಸಂಘಟನೆಗಳು ಇ-ಕಾಮರ್ಸ್ ಮತ್ತು ಆನ್‌ಲೈನ್ ಪೇಮೆಂಟ್ ಸೇವೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಪುಲ್ವಾಮಾ ದಾಳಿ ಮತ್ತು ಗೋರಖ್‌ನಾಥ್ ದೇವಸ್ಥಾನ ದಾಳಿಯಲ್ಲಿ ಇದನ್ನು ಬಳಸಲಾಗಿದೆ ಎಂದು ಎಫ್‌ಎಟಿಎಫ್ ವರದಿ ಮಾಡಿದೆ.
07:44 AM (IST) Jul 10
ಆಪರೇಷನ್ ಸಿಂದೂರದಲ್ಲಿ ಪಾಕಿಸ್ತಾನ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬ ಹೇಳಿಕೆ ಸುಳ್ಳು. ರಫೇಲ್‌ನ ಎಕ್ಸ್-ಗಾರ್ಡ್ ಡಿಕಾಯ್ ಸಿಸ್ಟಂನಿಂದ ಪಾಕಿಸ್ತಾನ ವಂಚಿತವಾಗಿದೆ. ಈ ತಂತ್ರಜ್ಞಾನದಿಂದ ರಫೇಲ್ ಹೇಗೆ ಪಾರಾಗುತ್ತದೆ ಎಂಬುದನ್ನು ತಿಳಿಯಿರಿ.
07:41 AM (IST) Jul 10
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತರಿಕ್ಷದಲ್ಲಿ ಧಾರವಾಡದ ವಿಜ್ಞಾನಿಗಳ ಸಂಶೋಧನೆಯ ಭಾಗವಾಗಿ ಹೆಸರು ಮತ್ತು ಮೆಂತ್ಯ ಬೀಜಗಳ ಕೃಷಿಯನ್ನು ನಡೆಸಿದ್ದಾರೆ.
07:40 AM (IST) Jul 10
ಭೂಮಿಯು ಸಾಮಾನ್ಯಕ್ಕಿಂತ ವೇಗವಾಗಿ ತಿರುಗುತ್ತಿರುವುದರಿಂದ ಇತಿಹಾಸದಲ್ಲೇ ಅತಿ ಚಿಕ್ಕ ದಿನ ದಾಖಲಾಗಿದೆ. ಜುಲೈ 9, 22 ಮತ್ತು ಆಗಸ್ಟ್ 5 ರಂದು ಚಂದ್ರನ ಸ್ಥಾನದಿಂದಾಗಿ ಈ ವಿದ್ಯಮಾನ ಸಂಭವಿಸಿದೆ. ಈ ದಿನಗಳಲ್ಲಿ ದಿನದ ಅವಧಿ 1.3 ರಿಂದ 1.51 ಮಿಲಿಸೆಕೆಂಡ್‌ಗಳಷ್ಟು ಕಡಿಮೆಯಾಗಿದೆ.