ರಾಹುಲ್, ಸೋನಿಯಾಗೆ ಇಡಿ ಶಾಕ್, ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ 700 ಕೋಟಿ ಆಸ್ತಿ ಜಪ್ತಿ ನೋಟಿಸ್

ನ್ಯಾಷನಲ್ ಹೆರಾಲ್ಡ್ ಪ್ರಕರಣ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಇಡಿ ಮತ್ತೊಂದು ಶಾಕ್ ನೀಡಿದೆ. ಈ ಪ್ರಕರಣ ಸಂಬಂಧ ಬರೋಬ್ಬರಿ 700 ಕೋಟಿ ರೂಪಾಯಿ ಆಸ್ತಿ ಜಪ್ತಿಗೆ ಇಡೀ ಮುಂದಾಗಿದೆ.
 


ನವದೆಹಲಿ(ಏ.12) ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ನಾಯಕ ರಾಹುಲ್ ಗಾಂಧಿಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣ ತಲೆನೋನವಾಗಿ ಪರಿಣಿಸುತ್ತಿದೆ. ಈ ಪ್ರಕರಣ ಸಂಬಂಧ ಇಡಿ ತನಿಖೆ ಚುರುಕುಗೊಳಿಸಿದೆ. ಇದರ ಬೆನ್ನಲ್ಲೇ ಇದೀಗ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಸೋಸಿಯೇಟ್ ಜರ್ನಲ್ ಲಿಮಿಟೆಡ್(AJL) ಸೇರಿದ ಬರೋಬ್ಬರಿ 700 ಕೋಟಿ ರೂಪಾಯಿ ಆಸ್ತಿ ಜಪ್ತಿಗೆ ಇಡಿ ಮುಂದಾಗಿದೆ. ಈಗಾಗಲೇ ಈ ಕುರಿತು ನೋಟಿಸ್ ಇಡಿ ನೋಟಿಸ್ ನೀಡಿದೆ. ಈ ಆಸ್ತಿಗಳ ಪೈಕಿ ನವದೆಹಲಿಯ ಕೇಂದ್ರ ಭಾಗದಲ್ಲಿರುವ ಹೆರಾಲ್ಡ್ ಹೌಸ್ ಆಸ್ತಿಯೂ ಸೇರಿದೆ.

ನೋಟಿಸ್ ಅಂಟಿಸಿದ  ಇಡಿ
AJL ನಡೆಸಿದ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣ ತನಿಖೆಯಲ್ಲಿ ಕೆಲ ಸ್ಫೋಟಕ ಮಾಹಿತಿಗಳನ್ನು ಇಡಿ ಕಲೆಹಾಕಿದೆ. ದೆಹಲಿಯ ಐಟಿಒದಲ್ಲಿರುವ ಹೆರಾಲ್ಡ್ ಹೌಸ್ (Herald House), ಮುಂಬೈನ ಬಾಂದ್ರಾದಲ್ಲಿರುವ ಆಸ್ತಿ, ಲಖನೌದ ಬಿಶ್ವೇಶ್ವರನಾಥ್ ರಸ್ತೆಯಲ್ಲಿರುವ ಎಜೆಎಲ್ ಕಟ್ಟಡಕ್ಕೆ ಇಡಿ ಈ ನೋಟಿಸ್‌ಗಳನ್ನು ಅಂಟಿಸಿದೆ. ಇಡಿ ಪ್ರಕಾರ, ಈ ಕ್ರಮವನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಯ ಸೆಕ್ಷನ್ 8 ಮತ್ತು ನಿಯಮ 5(1) ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಈ ಹಿಂದೆ, ಇಡಿ ನವೆಂಬರ್ 2023 ರಲ್ಲಿ ಈ ಆಸ್ತಿಗಳನ್ನು ತಾತ್ಕಾಲಿಕ ಲಗತ್ತು ಆದೇಶದ (PAO) ಅಡಿಯಲ್ಲಿ ಲಗತ್ತಿಸಿತ್ತು. 988 ಕೋಟಿ ರೂಪಾಯಿಗಳ ಅಪರಾಧದಿಂದ ಗಳಿಸಿದ ಆಸ್ತಿಯನ್ನು (Proceeds of Crime) ಬಳಸಿದ ಮತ್ತು ನಿಯಂತ್ರಿಸಿದ ಪುರಾವೆಗಳು ಲಭ್ಯವಾದ ನಂತರ ಈ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.

Latest Videos

ಒಂದು ದೇಶ-ಒಂದು ಚುನಾವಣೆ ವಿರುದ್ಧ ಎಐಸಿಸಿ ನಿರ್ಣಯ!

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ದೂರು
ಈ ಪ್ರಕರಣದ ತನಿಖೆ 2021 ರಲ್ಲಿ ಆರಂಭಗೊಂಡಿದೆ. ಜೂನ್ 2014 ರಲ್ಲಿ ಪಟಿಯಾಲ ಹೌಸ್ ಕೋರ್ಟ್‌ನ ಆದೇಶದ ಅಡಿಯಲ್ಲಿ ಈ ತನಿಖೆ ನಡೆಸಲಾಯಿತು. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದೆ. ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಮೂಲಕ ನ್ಯಾಷನಲ್ ಹೆರಾಲ್ಡ್‌ನ ಮೂಲ ಕಂಪನಿ ಎಜೆಎಲ್‌ನ ಆಸ್ತಿಗಳನ್ನು 2000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಆಸ್ತಿಯನ್ನು ವಂಚನೆಯಿಂದ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಸ್ವಾಮಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಯಂಗ್ ಇಂಡಿಯನ್‌ನಲ್ಲಿ ಕಾಂಗ್ರೆಸ್ ನಾಯಕತ್ವದ ಪಾಲು
ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಎಜೆಎಲ್ ಮಾಲೀಕತ್ವವನ್ನು ಹೊಂದಿರುವ ಕಂಪನಿಯಾಗಿದ್ದು, ನ್ಯಾಷನಲ್ ಹೆರಾಲ್ಡ್ ವಾರ್ತಾಪತ್ರಿಕೆಯನ್ನು ಪ್ರಕಟಿಸುತ್ತದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಈ ಕಂಪನಿಯಲ್ಲಿ 38% ಷೇರುಗಳನ್ನು ಹೊಂದಿದ್ದಾರೆ.

ಇಡಿ ಪ್ರಕಾರ, ಎಜೆಎಲ್‌ನ ಸ್ಥಿರ ಆಸ್ತಿಗಳು 661 ಕೋಟಿ ರೂಪಾಯಿ ಮತ್ತು ಎಜೆಎಲ್‌ನ ಷೇರುಗಳನ್ನು 90.2 ಕೋಟಿ ರೂಪಾಯಿ ಮೌಲ್ಯದೊಂದಿಗೆ ಲಗತ್ತಿಸಲಾಗಿದೆ, ಇದನ್ನು ಈಗ ನ್ಯಾಯನಿರ್ಣಯ ಪ್ರಾಧಿಕಾರವು 10 ಏಪ್ರಿಲ್ 2024 ರಂದು ಅನುಮೋದಿಸಿದೆ.

ಸದನದಲ್ಲಿ ಸುಮ್ಮನಿದ್ದ ರಾಹುಲ್ ಗಾಂಧಿ, ಇದೀಗ ವಕ್ಫ್ ವಿರುದ್ಧ ಕೆಂಡಾಮಂಡಲ
 

click me!