
ಬೆಂಗಳೂರು (ಮೇ.6): ನಾಗರಿಕರ ಅನುಕೂಲಕ್ಕಾಗಿ ಸರ್ಕಾರವು ಹಲವಾರು ವೆಬ್‌ಸೈಟ್‌ಗಳನ್ನು ಪ್ರಾರಂಭಿಸಿದೆ, ಅದರ ಸಹಾಯದಿಂದ ನೀವು ಮನೆಯಲ್ಲಿ ಕುಳಿತು ನಿಮ್ಮ ಕೆಲಸವನ್ನು ಮುಗಿಸಿಕೊಳ್ಳಬುದು. ಆದರೆ ನಾವು ಈ ಎಲ್ಲಾ ವೆಬ್‌ಸೈಟ್‌ಗಳ ಬಗ್ಗೆ ನಮಗೆ ಹೆಚ್ಚಾಗಿ ತಿಳಿದಿರೋದಿಲ್ಲ. ಇದರಿಂದಾಗಿ ನಮ್ಮ ಕೆಲಸಕ್ಕಾಗಿ ಕಚೇರಿಯಿಂದ ಕಚೇರಿಗೆ ತಿರುಗಾಡುತ್ತಾ ಇರುತ್ತೇವೆ. ದೂರದ ಪ್ರದೇಶಗಳಲ್ಲಿ ವಾಸಿಸುವ ಜನರು ಸರ್ಕಾರದ ಅನೇಕ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಪ್ರತಿದಿನ ಕಚೇರಿಗಳಿಗೆ ಅಲೆಯೋದು ಸಾಧ್ಯವಾಗೋದಿಲ್ಲ. ಇವರಿಗೆ ಸಹಾಯ ಮಾಡಲು, ಅಗತ್ಯ ಸರ್ಕಾರಿ ದಾಖಲೆಗಳನ್ನು ಸಿದ್ಧಮಾಡಲು ನಮ್ಮ ನಡುವೆಯೇ ಸಾಕಷ್ಟು ವೆಬ್‌ಸೈಟ್‌ಗಳು ಇರುತ್ತದೆ. ಆದರೆ, ಇದರ ಮಾಹಿತಿ ಯಾರಿಗೂ ಇರೋದಿಲ್ಲ. ಸರ್ಕಾರ ತನ್ನ ಯೋಜನೆಗಳು ಮತ್ತು ಸರ್ಕಾರಿ ಕೆಲಸಗಳ ಲಾಭವನ್ನು ಜನರಿಗೆ ತಲುಪಿಸಲು ಆನ್‌ಲೈನ್ ವಿಧಾನವನ್ನು ಸಹ ರೂಪಿಸಿದೆ, ಅದರ ಮೂಲಕ ಸರ್ಕಾರಿ ಕೆಲಸಗಳನ್ನು ಸುಲಭವಾಗಿ ಮಾಡಬಹುದಾಗಿದೆ. ಇಂದು ನಾವು ನಿಮಗೆ ಕೆಲವೊಂದದು ಸರ್ಕಾರಿ ವೆಬ್‌ಸೈಟ್ ಬಗ್ಗೆ ಮಾಹಿತಿಯನ್ನು ಈ ಸುದ್ದಿಯಲ್ಲಿ ನೀಡಲಿದ್ದೇವೆ. ಅದರ ಮೂಲಕ ನೀವು ಮನೆಯಲ್ಲಿಯೇ 13000 ಕ್ಕೂ ಹೆಚ್ಚು ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸಬಹುದು.
13000ಕ್ಕೂ ಹೆಚ್ಚು ಸೇವೆಗಳು ಸಿಗಲಿದೇ: ನಾವು ಇಂದು ನಿಮಗೆ ಹೇಳುತ್ತಿರುವ ಪೋರ್ಟಲ್‌ನ ಹೆಸರು services.india.gov.in ಇಲ್ಲಿ ಯಾವುದೇ ನಾಗರಿಕರು 13,350 ಸೇವೆಗಳ ಲಾಭ ಪಡೆಯಬಹುದು. ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಮಾಡಬೇಕೋ, ಸರ್ಕಾರಿ ಹರಾಜಿನಲ್ಲಿ ಭಾಗವಹಿಸಬೇಕಾದಲ್ಲಿ, ನಿಮ್ಮ ತೆರಿಗೆಯನ್ನು ತಿಳಿದುಕೊಳ್ಳಬೇಕಾದಲ್ಲಿ ಅಥವಾ ಜನ್ಮ ಪ್ರಮಾಣಪತ್ರವನ್ನು ಮಾಡಬೇಕಾದಲ್ಲಿ ಈ ಎಲ್ಲಾ ಕಾರ್ಯಗಳಿಗೂ ಈ ವೆಬ್‌ಸೈಟ್ ಪರಿಹಾರ. ಈ ವೆಬ್‌ಸೈಟ್‌ಗೆ ಬಂದ ನಂತರ, ನಿಮ್ಮ ಎಲ್ಲಾ ಕೆಲಸಗಳು ತ್ವರಿತವಾಗಿ ಆಗುತ್ತವೆ. ಇಲ್ಲಿ ನೀವು ಯಾವುದೇ ಸರ್ಕಾರಿ ಕಚೇರಿಗೆ ಭೇಟಿ ನೀಡುವ ಅವಶ್ಯಕತೆಯೇ ಇರೋದಿಲ್ಲ.
ಲಭ್ಯವಿರುವ ಸೌಲಭ್ಯಗಳು ಯಾವುವು: ಈ ಸರ್ಕಾರಿ ಪೋರ್ಟಲ್‌ನಲ್ಲಿ ಹಣಕಾಸು ಸಚಿವಾಲಯದಿಂದ 121 ಸೇವೆಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಿಂದ 100 ಸೇವೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ 72 ಸೇವೆಗಳು, ವೈಯಕ್ತಿಕ ಸಾರ್ವಜನಿಕ ಕುಂದುಕೊರತೆಗಳ ಸಚಿವಾಲಯದಿಂದ 60 ಸೇವೆಗಳು ಮತ್ತು ಪಿಂಚಣಿ, ಶಿಕ್ಷಣ ಸಚಿವಾಲಯದ 46 ಸೇವೆಗಳು, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ 39 ಸೇವೆಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ 38 ಸೇವೆಗಳಂತಹ ವಿವಿಧ ಸೇವೆಗಳು ಲಭ್ಯವಿದ್ದು, ಇವುಗಳಲ್ಲಿ ನೀವು ನಿಮ್ಮ ಅಗತ್ಯದ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಅದರ ಪ್ರಯೋಜನವನ್ನು ಪಡೆಯಬಹುದು.
ಮತ್ತೆ 71 ಸಾವಿರ ಮಂದಿಗೆ ಉದ್ಯೋಗ: ನೇಮಕ ಪತ್ರ ವಿತರಣೆಗೆ ಮೋದಿ ಚಾಲನೆ
ವೆಬ್‌ಸೈಟ್‌ಗೆ ಹೋಗೋದು ಹೇಗೆ: ನಿಮಗೆ ಸರ್ಕಾರಿ ಕಚೇರಿಯಿಂದ ಯಾವುದೇ ಕೆಲಸ ಆಗಬೇಕಿದ್ದರೆ, ಮೊದಲು services.india.gov.in ಲಿಂಕ್ ಅನ್ನು ಕ್ಲಿಕ್ ಮಾಡಿ. ಅದರ ನಂತರ, ಬಲಭಾಗದಲ್ಲಿರುವ ಆಲ್ ಕೆಟಗರಿ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಯಾವ ಸೇವೆ ಬೇಕೋ ಆ ಸೇವೆಯನ್ನು ಆಯ್ಕೆ ಮಾಡಿಕೊಳ್ಳಿ. ನೀವು ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುವ ಸೇವೆಗಳನ್ನು ತೆಗೆದುಕೊಳ್ಳಬೇಕು ಎಂದಾದಲ್ಲಿ, ವೀಸಾ ಮತ್ತು ಪಾಸ್‌ಪೋರ್ಟ್ ಕ್ಲಿಕ್ ಮಾಡಿ. ಆನ್‌ಲೈನ್ ಪಾಸ್‌ಪೋರ್ಟ್‌ಗೆ ಕೂಡ ನೀವು ಇಲ್ಲಿ ಕ್ಲಿಕ್ ಮಾಡಬಹುದು. ನೀವು ಕ್ಲಿಕ್ ಮಾಡಿದ ತಕ್ಷಣ, ನೀವು ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಅನ್ನು ತಲುಪುತ್ತೀರಿ. ಈಗ ಪಾಸ್‌ಪೋರ್ಟ್‌ಗೆ ನೀವು ಅರ್ಜಿ ಸಲ್ಲಿಕೆ ಮಾಡಬಹುದು.
PM Modi Birthday: ಬಡ ಜನರ 'ಅಚ್ಚೇದಿನ್' ಸಲುವಾಗಿ ಪ್ರಧಾನಿ ಮೋದಿ ಘೋಷಿಸಿದ 10 ಯೋಜನೆಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ