
ನವದೆಹಲಿ (ಮೇ.6): ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ಭಯೋತ್ಪಾದಕ ಸಂಘಟನೆಯೊಂದಿಗೆ ಹೋಲಿಸಿದ್ದಲ್ಲದೆ, ಹಾಗೇನಾದರೂ ಸರ್ಕಾರ ರಚಿಸಿದರೆ ಬಜರಂಗದಳವನ್ನು ನಿಷೇಧ ಮಾಡುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಚಂಡೀಗಢ ಬಜರಂಗದಳ ಕಾಂಗ್ರೆಸ್‌ಗೆ ಲೀಗಲ್ ನೋಟಿಸ್ ಜಾರಿ ಮಾಡಿದೆ. 100.10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಇದಾಗಿದೆ. ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಇಂದು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಬಜರಂಗದಳ ಚಂಡೀಗಢ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಲೀಗಲ್ ನೊಟೀಸ್ ಕಳುಹಿಸಿದ್ದು, ಸಂಘಟನೆಗೆ ಮಾನಹಾನಿ ಮಾಡಿದ್ದಕ್ಕಾಗಿ ಹಾಗೂ ವಿಶ್ವಾದ್ಯಂತ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ 100.10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎಂದು ವಿಎಚ್‌ಪಿ ಟ್ವೀಟ್ ಮಾಡಿದೆ. ರಾಜಕೀಯ ಕಾರಣಕ್ಕಾಗಿ ಮಾಡಿರುವ ಇಂಥ ಕೀಟಲೆಯಿಂದ ಬಜರಂಗದಳ ತೊಂದರೆ ಎದುರಿಸಲಿದೆ ಎಂದು ಸಂಘಟನೆ ಬರೆದಿದೆ. ಬಜರಂಗದಳವು ವಿಶ್ವ ಹಿಂದು ಪರಿಷತ್ತಿನ ಯುವ ಘಟಕವಾಗಿದೆ.
ನೋಟಿಸ್‌ನಲ್ಲಿ ಏನಿದೆ?: ಬಜರಂಗದಳವು ಕಾಂಗ್ರೆಸ್ ಅಧ್ಯಕ್ಷರಿಗೆ ಕಳುಹಿಸಿರುವ ನೋಟಿಸ್‌ನಲ್ಲಿ ಪಕ್ಷದ ಕರ್ನಾಟಕ ಪ್ರಣಾಳಿಕೆಯನ್ನು ಉಲ್ಲೇಖಿಸಲಾಗಿದೆ. ಪ್ರಣಾಳಿಕೆಯ 10ನೇ ಪುಟದಲ್ಲಿ ಬಜರಂಗದಳವನ್ನು ನಿಷೇಧಿಸುವ ಮೂಲಕ ಬಜರಂಗದಳವನ್ನು ಅವಮಾನಿಸಿದೆ, ಜೊತೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (SIMI) ಭಯೋತ್ಪಾದಕ ಸಂಘಟನೆಯೊಂದಿಗೆ ಹೋಲಿಕೆ ಮಾಡುವ ಮೂಲಕ ಸಂಘಟನೆಯನ್ನು ಅವಮಾನಿಸಿದೆ ಎಂದು ಹೇಳಿದೆ. ಯುಎಪಿಎ ಅಡಿಯಲ್ಲಿ ಈ ಸಂಘಟನೆಯನ್ನು ದೇಶದಲ್ಲಿ ಭಯೋತ್ಪಾದಕ ಸಂಘಟನೆ ಎಂದು ಹೇಳಲಾಗಿದೆ.
ಪಿಎಫ್ಐ ಮತ್ತು ಸಿಮಿ ಭಯೋತ್ಪಾದಕ ಸಂಘಟನೆಗಳು ಅಲ್-ಖೈದಾ ಮತ್ತು ಐಸಿಸ್ ಮತ್ತು ವಿಶ್ವಸಂಸ್ಥೆ ಮತ್ತು ನೂರಾರು ಇತರ ದೇಶಗಳಿಂದ ನಿಷೇಧಿಸಲ್ಪಟ್ಟ ಇತರ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿವೆ ಎಂದು ಹೇಳಲಾಗಿದೆ. ಈ ಸಂಘಟನೆಗಳು ತಮ್ಮ ಪಂಗಡದಿಂದ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವ ಜನರನ್ನು ಗುರಿಯಾಗಿಸಿಕೊಂಡು ಅತ್ಯಾಚಾರ, ಬಾಂಬ್ ಸ್ಫೋಟ, ಅಪಹರಣ, ಮಾನವ ಕಳ್ಳಸಾಗಣೆ, ನರಮೇಧ, ಸೈಬರ್ ದಾಳಿ, ರಾಸಾಯನಿಕ ದಾಳಿ ಇತ್ಯಾದಿಗಳ ರೂಪದಲ್ಲಿ ದೌರ್ಜನ್ಯವನ್ನು ಮಾಡುತ್ತಿದ್ದವು ಎನ್ನಲಾಗಿದೆ.
ವಿಎಚ್‌ಪಿ ಮತ್ತು ಬಜರಂಗದಳ ಭಾರತ ಮಾತೆಯ ಸೇವೆಗೆ ಸಮರ್ಪಿತವಾಗಿದೆ: ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ದಶಕಗಳಿಂದ ಸಾರ್ವಭೌಮತೆ, ಸಹಿಷ್ಣುತೆ, ಧಾರ್ಮಿಕ ಐಕ್ಯತೆ, ರಾಷ್ಟ್ರೀಯ ಸಮಗ್ರತೆ ಮತ್ತು ಭಾರತಮಾತೆಯ ಸೇವೆಯಲ್ಲಿ ನಂಬಿಕೆ ಇಟ್ಟಿದೆ ಮತ್ತು ಅದರ ಸ್ಫೂರ್ತಿ ಧರ್ಮದ ವಿಗ್ರಹಗಳು ಮತ್ತು ಭಗವಾನ್ ರಾಮ ಮತ್ತು ಭಗವಾನ್ ಹನುಮಾನ್‌ಜೀ ಸೇವೆಯಾಗಿದೆ. ಭಜರಂಗದಳದ ಬಗ್ಗೆ ಹೇಳುವುದಾದರೆ, ಇದು ಸಂಪೂರ್ಣವಾಗಿ ಧರ್ಮ ಮತ್ತು ಮಾನವೀಯತೆಯ ಸೇವೆಗೆ ಮೀಸಲಾದ ಸಂಘಟನೆಯಾಗಿದೆ ಮತ್ತು ಈ ವಿಷಯಗಳನ್ನು ಎಂದಿಗೂ ಇದು ಅವಮಾನಿಸೋದಿಲ್ಲ. ಭೂಕಂಪದಂತಹ ಪ್ರಾಕೃತಿಕ ವಿಕೋಪಗಳಾಗಲಿ ಅಥವಾ ಕೊರೊನಾದಂತಹ ಸಾಂಕ್ರಾಮಿಕ ರೋಗಗಳಾಗಲಿ, ಭಜರಂಗದಳದ ಕಾರ್ಯಕರ್ತರು ರಾಷ್ಟ್ರದ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇದಲ್ಲದೇ ಈ ಸಂಸ್ಥೆಯು ಸಮಾಜ ಸೇವೆಗಾಗಿ ಹಲವಾರು ಕೆಲಸಗಳನ್ನು ಮಾಡುತ್ತಲೇ ಇದೆ ಎಂದಿದೆ.
ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ: ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ವಿರುದ್ಧ ಬೃಹತ್ ಪ್ರತಿಭಟನೆ
ಯಾವುದೇ ಪುರಾವೆಗಳಿಲ್ಲದೆ ಬಜರಂಗದಳವನ್ನು ಪಿಎಫ್‌ಐ ಮತ್ತು ಇತರ ತಾಲಿಬಾನ್ ಸಂಘಟನೆಗಳೊಂದಿಗೆ ಹೋಲಿಸುವುದು ಈ ಸಂಘಟನೆಗಳ ಕೋಟ್ಯಂತರ ಸದಸ್ಯರಿಗೆ ಮತ್ತು ಕೋಟ್ಯಂತರ ಹಿಂದೂಗಳ ಆರಾಧಕರಾದ ಹನುಮಂತನಿಗೆ ಮಾಡಿದ ಅವಮಾನವಾಗಿದೆ ಎಂದು ವಿಎಚ್‌ಪಿ ಕಾಂಗ್ರೆಸ್‌ಗೆ ಕಳುಹಿಸಿರುವ ನೋಟಿಸ್‌ನಲ್ಲಿ ಹೇಳಿದೆ. ಪಕ್ಷದ ಈ ಅವಮಾನಕರ ಹೇಳಿಕೆಯಿಂದ ಈ ಸಂಘಟನೆಗಳ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎನ್ನಲಾಗಿದೆ. ನೋಟಿಸ್ ಸಿಕ್ಕ 14 ದಿನಗಳಲ್ಲಿ 1 ಕೋಟಿ ರೂ.ಗಳನ್ನು ಪಾವತಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದ್ದು, ಇಲ್ಲದಿದ್ದಲ್ಲಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು. ಸಾಹಿಲ್ ಬನ್ಸಾಲ್ ಎಂಬ ವಕೀಲರು ಈ ನೋಟಿಸ್ ಕಳುಹಿಸಿದ್ದಾರೆ.
ಬಜರಂಗದಳ ವಿಚಾರದಲ್ಲಿ ಕಾಂಗ್ರೆಸ್ ಮೂರ್ಖತನ ಮಾಡಿದೆ : ಬಿಎಸ್‌ವೈ
ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿತ ರಾಡಿಕಲ್ ಇಸ್ಲಾಮಿಕ್ ಸಂಘಟನೆಯಾದ ಪಿಎಫ್‌ಐಗೆ ಹೋಲಿಸಿ ಅಧಿಕಾರಕ್ಕೆ ಬಂದರೆ ಅಂತಹ ಸಂಘಟನೆಗಳನ್ನು ನಿಷೇಧಿಸುವುದಾಗಿ ಭರವಸೆ ನೀಡಿತ್ತು. ಅಂದಿನಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ