National Disaster Response Force ಟ್ವೀಟರ್ ಖಾತೆ ಹ್ಯಾಕ್: ತನಿಖೆಗೆ ಆದೇಶ!

Published : Jan 24, 2022, 10:25 AM ISTUpdated : Jan 24, 2022, 10:40 AM IST
National Disaster Response Force ಟ್ವೀಟರ್ ಖಾತೆ ಹ್ಯಾಕ್: ತನಿಖೆಗೆ ಆದೇಶ!

ಸಾರಾಂಶ

@NDRFHQ' ಹ್ಯಾಂಡಲ್‌ ಶನಿವಾರ ಹ್ಯಾಕ್‌ ಮಾಡಿ ರಾತ್ರಿ 10:45 ರ ಸುಮಾರಿಗೆ  ಡಿಸ್ಪ್ಲೇ ಹೆಸರು ಮತ್ತು ಫೋಟೋವನ್ನು ಬದಲಾಯಿ ಕೆಲವು  ಸಂದೇಶಗಳನ್ನು ಪೋಸ್ಟ್ ಮಾಡಲಾಗಿತ್ತು.  

Tech Desk: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಶನಿವಾರ ತಡರಾತ್ರಿ ಹ್ಯಾಕ್ ಮಾಡಲಾಗಿದ್ದು ಮತ್ತು ಭಾನುವಾರ ಸಂಜೆಯ ವೇಳೆಗೆ ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. '@NDRFHQ' ಹ್ಯಾಂಡಲ್‌ ಶನಿವಾರ ಹ್ಯಾಕ್‌ ಮಾಡಿ ರಾತ್ರಿ 10:45 ರ ಸುಮಾರಿಗೆ ಕೆಲವು  ಸಂದೇಶಗಳನ್ನು ಪೋಸ್ಟ್ ಮಾಡಲಾಗಿದೆ ಮತ್ತು ಡಿಸ್ಪ್ಲೇ ಹೆಸರು ಮತ್ತು ಫೋಟೋವನ್ನು ಬದಲಾಯಿಸಲಾಗಿದೆ.

"ತಾಂತ್ರಿಕ ತಜ್ಞರು ಹ್ಯಾಕ್ ಮೇಲೆ ಕೆಲಸ ಮಾಡಿದ ನಂತರ ಮತ್ತು ದಾಳಿಯ 2-3 ನಿಮಿಷಗಳಲ್ಲಿ ಡಿಸ್ಪ್ಲೇ ಹೆಸರು ಮತ್ತು ಚಿತ್ರವನ್ನು ಮರುಸ್ಥಾಪಿಸಿದ ನಂತರ ಖಾತೆಯನ್ನು ಭಾನುವಾರ ಸಂಪೂರ್ಣವಾಗಿ ಮರುಸ್ಥಾಪಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ" ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ (ಡಿಜಿ) ಅತುಲ್ ಕರ್ವಾಲ್ ಪಿಟಿಐಗೆ (PTI) ತಿಳಿಸಿದ್ದಾರೆ.

ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿ ಟ್ವೀಟರ್‌ ಖಾತೆ ಹ್ಯಾಕ್: ಬಿಟ್‌ಕಾಯಿನ್ ಕುರಿತು ಪೋಸ್ಟ್!

ಹ್ಯಾಕಿಂಗ್ ಬಗ್ಗೆ NDRF ದೂರು: ದೆಹಲಿ ಪೊಲೀಸ್ ಸೈಬರ್ ಘಟನೆಗಳ ತನಿಖಾ ಘಟಕಕ್ಕೆ ಹ್ಯಾಕಿಂಗ್ ಬಗ್ಗೆ ಫೋರ್ಸ್ ದೂರು ನೀಡಿದೆ ಎಂದು ಅತುಲ್ ಕರ್ವಾಲ್  ತಿಳಿಸಿದ್ದಾರೆ. ಸೈಬರ್ ದಾಳಿಯನ್ನು‌ ಮೊದಲಿಗೆ ಟ್ವಿಟರ್‌ ಗುರುತಿಸಿದ್ದು ಸಾಮಾಜಿಕ ಮಾಧ್ಯಮ ವೇದಿಕೆಯು ಖಾತೆಗೆ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಹೀಗಾಗಿ ಪ್ರಕಟವಾದ ಸಂದೇಶಗಳು ಗಂಟೆಗಳವರೆಗೆ ಟೈಮ್‌ಲೈನ್‌ನಲ್ಲಿ ತೋರಿಸುತ್ತಿರಲಿಲ್ಲ. ಖಾತೆಯನ್ನು ಈಗ ಪೂರ್ಣ ಮರುಸ್ಥಾಪಿಸಲಾಗಿದ್ದು ಭಾನುವಾರ ಸಂಜೆ 6:12 ಗಂಟೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಕೋಟ್ ಟ್ವೀಟ್‌ನೊಂದಿಗೆ ಸಂದೇಶಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದೆ.

ಇಂತಹ ಘಟನೆಗಳು ಮರುಕಳಿಸದಂತೆ ಪಡೆ ಭದ್ರತಾ ಲೆಕ್ಕಪರಿಶೋಧನೆ ನಡೆಸಲಿದೆ ಎಂದು ಡಿಜಿ ಹೇಳಿದ್ದಾರೆ. NDRF ಅನ್ನು 2006 ರಲ್ಲಿ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳ ವಿರುದ್ಧ Federal Contingency Force ಆಗಿ ಪ್ರಾರಂಭ ಮಾಡಲಾಯಿತು. ಇದು ಜನವರಿ 19 ರಂದು ತನ್ನ 17 ನೇ ಸ್ಥಾಪನಾ  ದಿನವನ್ನು ಆಚರಿಸಿತು.

I&B Ministry‌ ಟ್ವೀಟರ್‌ ಖಾತೆ ಹ್ಯಾಕ್: ಕಳೆದ ಎರಡು ತಿಂಗಳಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ಸ್ವತಃ ಪ್ರಧಾನಿ ಮೋದಿ ಟ್ವೀಟರ್‌ ಖಾತೆ ಹ್ಯಾಕ್‌ ವರದಿಯಾಗಿದೆ. ಜನವರಿ 12ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ (I&B) ಸಚಿವಾಲಯದ ಟ್ವಿಟರ್ ಖಾತೆಯನ್ನು ಕೂಡ ಬುಧವಾರ ಹ್ಯಾಕ್‌ ಮಾಡಲಾಗಿತ್ತು. ಟ್ವಿಟರ್ ಅಕೌಂಟ್ ಹ್ಯಾಕ್​ ಮಾಡಿದ್ದ ಹ್ಯಾಕರ್ಸ್​ಗಳು, ಖಾತೆಯ ಹೆಸರನ್ನು ಎಲೋನ್​ ಮಸ್ಕ್​ (Elon Musk) ಎಂದು ಬದಲಿಸಿದ್ದರು. ಖಾತೆಯನ್ನು ಹ್ಯಾಕ್ ಮಾಡಿದ ನಂತರ, ಬಿಟ್‌ಕಾಯಿನ್‌ ಎಂದು ಬರೆಯಲಾಗಿದ್ದ  'amazing news' ಗೆ ಲಿಂಕ್‌ಗಳನ್ನು ಹೊಂದಿರುವ ಹಲವಾರು ಟ್ವೀಟ್‌ಗಳನ್ನು ಹಂಚಿಕೊಳ್ಳಲಾಗಿತ್ತು. 

ಹ್ಯಾಕರ್‌ಗಳು ಖಾತೆಯನ್ನು 'ಎಲೋನ್ ಮಸ್ಕ್' ಎಂದು ಮರುನಾಮಕರಣ ಮಾಡುವುದರ ಜತೆಗೆ 'Great Job' (ಉತ್ತಮ ಕೆಲಸ) ಎಂದು ಟ್ವೀಟ್ ಮಾಡಲು ಪ್ರಾರಂಭಿಸಿದ್ದರು. ಆದರೆ ತಕ್ಷಣ ಎಚ್ಚೆತ್ತ ಸಚಿವಾಲಯ ತನ್ನ ಟ್ವೀಟರ್‌ ಖಾತೆಯನ್ನು ಮರುಸ್ಥಾಪಿಸಿತ್ತು. ಅಲ್ಲದೆ ಹ್ಯಾಕರ್ಸ್‌ ಮಾಡಿದ ಟ್ವೀಟ್‌ಗಳನ್ನು ಡೀಲಿಟ್‌ ಮಾಡಿ ಖಾತೆಯನ್ನು ಭದ್ರಪಡಿಸಲಾಗಿತ್ತು.‌ ಜನವರಿ 3 ರಂದು ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ (ICWA), ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ​​(IMA) ಮತ್ತು ಮನ್ ದೇಶಿ ಮಹಿಳಾ ಬ್ಯಾಂಕ್ (ಮೈಕ್ರೋ ಫೈನಾನ್ಸ್ ಬ್ಯಾಂಕ್) ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಲಾಗಿತ್ತು. ಇನ್ನು ಡಿಸೆಂಬರ್‌ ಡಿಸೆಂಬರ್ 12, 2021 ರಂದು, ಪ್ರಧಾನಿ ನರೇಂದ್ರ ಮೋದಿಯವರ (Narendra Modi) ವೈಯಕ್ತಿಕ ಟ್ವಿಟರ್ ಹ್ಯಾಂಡಲ್  ಹ್ಯಾಕ್ ಮಾಡಲಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ