Watch: ರಾಹುಲ್‌ ಗಾಂಧಿ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಗೆ ಅವಮಾನ!

By Santosh NaikFirst Published Jun 1, 2023, 3:56 PM IST
Highlights

ರಾಷ್ಟ್ರಗೀತೆ ಹಾಡುವಾಗ ಅಡ್ಡಿಪಡಿಸುವುದೇ ಅಗೌರವದ ಸಂಗತಿಯಾಗಿದೆ. ಆದರೆ, ರಾಹುಲ್‌ ಗಾಂಧಿಯವರ ಅಮೆರಿಕ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡುವ ವೇಳೆ ಹೆಚ್ಚಿನ ಪ್ರೇಕ್ಷಕರು ಕುಳಿತಿರುವುದು ಮಾತ್ರವಲ್ಲದೆ, ಅತ್ತಿಂದಿತ್ತ ಅಡ್ಡಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
 

ನವದೆಹಲಿ (ಜೂ.1): ರಾಷ್ಟ್ರಗೀತೆಯನ್ನು ಎಲ್ಲಿಯೇ ನುಡಿಸಿದರು, ಎಲ್ಲಿಯೇ ಕೇಳಿದರೂ ಗೌರವದಿಂದ ಎದ್ದು ನಿಂತು ಹೆಮ್ಮೆಯಿಂದ ಹಾಡಬೇಕು. ಹಾಗಿದ್ದರೂ ಮೇ 30 ರಂದು ಅಮೆರಿಕದ ಸ್ಯಾನ್‌ಫ್ರಾನ್ಸಿಸಸ್ಕೋದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮದಲ್ಲಿ ಇದು ನಡೆದಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿರುವ ವಿಡಿಯೋಗಳನ್ನು ಆಡಳಿತಾರೂಢ ಬಿಜೆಪಿ ಸದಸ್ಯರು ಕೂಡ ಹಂಚಿಕೊಳ್ಳಯತ್ತಿದ್ದಾರೆ. ಈ ವಿಡಿಯೋದಲ್ಲಿ ಕಾರ್ಯಕ್ರಮದ ಸ್ಥಳದಲ್ಲಿ ರಾಷ್ಟ್ರಗೀತೆಯನ್ನು  ಮಕ್ಕಳ ಗುಂಪು ಹಾಡುತ್ತಿದ್ದರೆ, ಇದೇ ಸನ್ನಿವೇಶವನ್ನು ಅಲ್ಲಿ ಮೈಕ್‌ ಚೆಕ್‌ ಮಾಡಿಕೊಳ್ಳಲು ಬಳಸಿಕೊಂಡಿದ್ದಾರೆ. ರಾಷ್ಟ್ರಗೀತೆ ಹಾಡುವ ಮಧ್ಯದಲ್ಲಿಯೇ ಮೈಕ್‌ ಚೆಕ್‌ ಪೂರ್ಣಗೊಂಡಿದೆಯೇ ಎಂದು ಹೇಳಿದ್ದೂ ಕೂಡ ಈ ವಿಡಿಯೋದಲ್ಲಿ ದಾಖಲಾಲಾಗಿದೆ. ಇನ್ನು ಕಾರ್ಯಕ್ರಮದಲ್ಲಿದ್ದ ಜನರಿಗೆ ಅಲ್ಲಿ ಮೈಕ್‌ ಚೆಕ್‌ ಮಾಡುತ್ತಿದ್ದಾರೆ ಎನ್ನುವುದು ಕೂಡ ಅರಿವಿರಲಿಲ್ಲ. ರಾಷ್ಟ್ರಗೀತೆ ಹಾಡುವಾಗ ಅಡ್ಡಿಪಡಿಸುವುದೇ ಅಗೌರವದ ಸಂಗತಿಯಾಗಿದೆ. ಆದರೆ, ಇಲ್ಲಿ ರಾಷ್ಟ್ರಗೀತೆ ಹಾಡುವ ಸಮಯದಲ್ಲಿ ಹೆಚ್ಚಿನ ಪ್ರೇಕ್ಷಕರು ತಾವು ಕುಳಿತ ಸೀಟ್‌ನಲ್ಲಿಯೇ ಕುಳಿತುಕೊಂಡಿದ್ದರೆ, ಇನ್ನೂ ಕೆಲವರು ಅಡ್ಡಾದಿಡ್ಡಿಯಾಗಿ ತಿರುಗಾಡುತ್ತಿರುವುದು ಕಂಡುಬಂದಿದೆ.

ಆ ಬಳಿಕ 'ಮೊಹಬ್ಬತ್‌ ಕಿ ದುಕಾನ್‌' ಎಂದು ಹೆಸರಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ, ಪ್ರಜಾಪ್ರಭುತ್ವ ಸಂಸ್ಥೆಗಳ ದುರುಪಯೋಗ ಮತ್ತು ವಿರೋಧ ಪಕ್ಷಗಳು ಮತ್ತು ನಾಯಕರನ್ನು ಗುರಿಯಾಗಿಸಿಕೊಂಡು ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದು ದೇಶಕ್ಕೆ ಮುಜುಗರ ಹಾಗೂ ಅಗೌರವ ನೀಡುವ ಸಂಗತಿಯಾಗಿದ್ದು, ಈ ಕಾರ್ಯಕ್ರಮ ಆಯೋಜನೆ ಮಾಡಿದ್ದ ಭಾರತೀಯ ಸಾಗರೋತ್ತರ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.

“ ಕಾಂಗ್ರೆಸ್‌ಗೆ ಇಂಥವೆಲ್ಲಾ ಮಾಡುವುದು ಯಾವಾಗಲೋ ಸಿದ್ದಿಸಿದೆ. ಇನ್ನು ಖಾಲಿ ಹಾಲ್‌ನದ್ದು ಇನ್ನೊಂದು ಕಥೆ"ಬಿಜೆಪಿ ನಾಯಕ ಅಮಿತ್ ಮಾಳವಿಯಾ ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ಘಟನೆಯನ್ನು ಆಘಾತಕಾರಿ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಹೇಳಿರುವ ಇನ್ನೊಬ್ಬ ನಾಯಕ ಶೆಹಜಾದ್ ಪೂನವಾಲಾ "ರಾಷ್ಟ್ರಗೀತೆಯ ಸಮಯದಲ್ಲಿ ರಾಹುಲ್ ಉದ್ದೇಶಿಸಿ ಮಾತನಾಡಿದ ಅರ್ಧದಷ್ಟು ಜನರು ನಂತರ ಎದ್ದು ನಿಲ್ಲಲು ಸಹ ಯೋಚನೆ ಮಾಡಲಲಿಲ್ಲ. ನಂತರ ಅವರು ರಾಷ್ಟ್ರಗೀತೆಯನ್ನು ಮಧ್ಯದಲ್ಲಿ ನಿಲ್ಲಿಸಿ ಕೇವಲ 'ಮೈಕ್ ಚೆಕ್' ಆಗಿತ್ತು. ದೇಶದ ರಾಷ್ಟ್ರಗೀತೆಗೆ ಈ ಅಗೌರವ ಏಕೆ ಮಾಡಲಾಗಿದೆ. ಇದನ್ನು ಸ್ಪಷ್ಟಪಡಿಸುವ ಜವಾಬ್ದಾರಿ ರಾಹುಲ್‌ ಗಾಂಧಿಯವರ ಸಂಘಟನಾ ತಂಡದ ಮೇಲಿದೆ. ರಾಷ್ಟ್ರಗೀತೆಗೆ ಅಗೌರವ ಸಲ್ಲಿಸಿದ ಪ್ರೇಕ್ಷಕರು ಯಾರು? ಯಾವ ಭಾರತೀಯ ಕೂಡ ಇದನ್ನು ಮಾಡೋದಿಲ್ಲ. ರಾಹುಲ್‌ಗೆ ಮೈಕ್‌ ಚೆಕ್‌ ಮಾಡಲು ರಾಷ್ಟ್ರಗೀತೆಯೇ ಬೇಕಾಗಿತ್ತೇ? ಎಂದು ಪ್ರಶ್ನೆ ಮಾಡಿದ್ದಾರೆ.

I don’t know of any Indian in the Bay Area, who wouldn’t stand up for the National Anthem, unless Rahul Gandhi is addressing Pakistanis and Bangladeshis in America, and passing them off as Indians…

But then the Congress is capable of any chicanery. Empty hall is another story. pic.twitter.com/dzmGdDeDuh

— Amit Malviya (@amitmalviya)

ರಾಹುಲ್‌ ಗಾಂಧಿ ಕಾರ್ಯಕ್ರಮದಲ್ಲಿ ಮೊಳಗಿದ 'ಖಲಿಸ್ತಾನಿ ಜಿಂದಾಬಾದ್‌' ಘೋಷಣೆ!

ಇನ್ನೊಂದೆಡೆ ಇನ್ನೂ ಕೆಲವರು ಬಿಜೆಪಿ ಟೀಕೆಗೆ ಉತ್ತರ ನೀಡಿದ್ದಾರೆ. ಅದರೊಂದಿಗೆ ಅದೇ ಕಾರ್ಯಕ್ರಮದ ಅಧಿಕೃತ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಈ ವಿಡಿಯೋದಲ್ಲಿ ರಾಹುಲ್‌ ಗಾಂಧಿ ಇತರ ಮಕ್ಕಳೊಂದಿಗೆ ರಾಷ್ಟ್ರಗೀತೆ ಹಾಡುತ್ತಿದ್ದಾರೆ. ಈ ಸಮಯದಲ್ಲೂ ಹೆಚ್ಚಿನವರು ಅತ್ತಿತ್ತ ತಿರುಗಾಡುತ್ತಿದ್ದರೆ, ಇನ್ನೂ ಕೆಲವರಿಗೆ ಇದರ ವಿಡಿಯೋ ಮಾಡುವುದೇ ಹೆಚ್ಚು ಮುಖ್ಯವಾಗಿ ಕಂಡಿತ್ತು. ಇವೆಲ್ಲವನ್ನು ನೋಡಿದ ಬಳಿಕ ರಾಹುಲ್‌ ಗಾಂಧೀ ಅವರ ಟೀಮ್‌ ಕಾರ್ಯಕ್ರಮಗಳನ್ನು ಉತ್ತಮವಾಗಿ ಮ್ಯಾನೇಜ್‌ ಮಾಡಲು ಕಲಿಯಬೇಕಾಗಿದೆ ಎನ್ನುವುದು ಸ್ಪಷ್ಟವಾಗಿದೆ.

ನೂತನ ಸಂಸತ್‌ ಭವನ ಉದ್ಘಾಟನೆ ರಾಜನ ಪಟ್ಟಾಭಿಷೇಕದಂತಿತ್ತು: ವಿಪಕ್ಷಗಳ ಟೀಕೆ

ವಿದೇಶಿ ಮಣ್ಣಲ್ಲಿ ನಿಂತು ದೇಶಕ್ಕೆ ಕಪ್ಪು ಮಸಿ ಬಳಿಯುವ ರಾಹುಲ್ ಒಬ್ಬ ಫೇಕ್ ಗಾಂಧಿ :  ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ಗಾಂಧಿ ಹೆಸರಿನ ನೆರಳಲ್ಲೇ ರಾಜಕೀಯ ಮಾಡುವ ರಾಹುಲ್, ಒಬ್ಬ ಫೇಕ್ ಗಾಂಧಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ವಾಗ್ದಾಳಿ ನಡೆಸಿದ್ದಾರೆ.  ಅಮೆರಿಕಾದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ ಭಾರತ ದೇಶದ ಒಂದು ವರ್ಗ ತನಗೆ ಎಲ್ಲವೂ ಗೊತ್ತು ಎಂದು ತಿಳಿದಿದೆ, ದೇವರಿಗೂ ಹೇಳಿಕೊಡುವಷ್ಟು ತಮಗೆ ಗೊತ್ತಿದೆ ಎಂದು‌ ಭಾವಿಸಿದೆ. ಭಾರತ ದೇಶದ ಪ್ರಧಾನಮಂತ್ರಿಯೂ ಆ ಸಾಲಿಗೆ ಸೇರುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಎದುರಿಗೆ ದೇವರು ಬಂದರೆ ಆಗ ಮೋದಿಯವರು ದೇವರಿಗೇ ಈ ಸೃಷ್ಟಿಯ ಬಗ್ಗೆ ವಿವರಿಸುವಂತವರು ಅಂತ ವ್ಯಂಗ್ಯವಾಡಿದ್ದ ರಾಹುಲ್ ಗಾಂಧಿ ಈ ಭಾಷಣದಲ್ಲಿ ಪದೇ ಪದೇ ಭಾರತದ ದೇಶದ ಒಂದು ವರ್ಗ ಎಂದು ಮೂದಲಿಸಿ ಮಾತನಾಡಿದ್ದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಟ್ಚಿಟ್ಟರ್ ಮೂಲಕ ತಿರುಗೇಟು ನೀಡಿದ್ದಾರೆ.

"ಮಿಸ್ಟರ್ ಫೇಕ್ ಗಾಂಧಿಗೆ ಭಾರತದ ತಿರುಳು ಅದರ ಸಂಸ್ಕೃತಿ ಗೊತ್ತಿಲ್ಲ, ದೇಶಕ್ಕೆ ಕಳಂಕ ತರಲು ವಿದೇಶಿ ಮಣ್ಣನ್ನು ಬಳಸುವ ರಾಹುಲ್ ಗಾಂಧಿಯಂಥವರಿಂದ ಬೇರೆ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಭಾರತೀಯರು ತಮ್ಮ ಇತಿಹಾಸದ ಬಗ್ಗೆ ಬಹಳ ಹೆಮ್ಮೆಪಡುತ್ತಾರೆ ಮತ್ತು ತಮ್ಮ ಭೌಗೋಳಿಕತೆಯನ್ನು ಚೆನ್ನಾಗಿ ರಕ್ಷಿಸಿಕೊಳ್ಳುತ್ತಾರೆ. 

ಏನೂ ಅರಿಯದೇ ಇದ್ದಕ್ಕಿದ್ದಂತೆ ಎಲ್ಲದರಲ್ಲೂ ಪರಿಣಿತನಾಗಿರುವಂತೆ ರಾಹುಲ್ ಗಾಂಧಿ ವರ್ತಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟಾಂಗ್ ನೀಡಿದ್ದಾರೆ. ರಾಹುಲ್ ಹೇಳಿಕೆ ಹಿನ್ನಲೆಯಲ್ಲಿ ಪ್ರಲ್ಹಾದ ಜೋಶಿಯವರು ತಿರುಗೇಟು ನೀಡಿರುವ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

 

click me!