3ನೇ ಬಾರಿ ಪ್ರಧಾನಿಯಾದ ಮೋದಿ ತಿಂಗಳ ಸ್ಯಾಲರಿ ಎಷ್ಟು? ಸಿಗುವ ಸೌಲಭ್ಯವೇನು?

By Chethan Kumar  |  First Published Jun 9, 2024, 8:23 PM IST

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎನ್‌ಡಿಎ ಮಿತ್ರ ಪಕ್ಷಗಳ ಸರ್ಕಾರ ಅಧಿಕೃತವಾಗಿ ರಚನೆಗೊಂಡಿದೆ. ಹ್ಯಾಟ್ರಿಕ್ ಪ್ರಧಾನಿಯಾದ ಮೋದಿಗೆ ಪ್ರತಿ ತಿಂಗಳು ಸಿಗುವ ವೇತನ ಎಷ್ಟು? ಇತರ ಸೌಲಭ್ಯ, ಭತ್ಯೆಗಳೇನು?
 


ನವದೆಹಲಿ(ಜೂ.09) ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಮೂರನೇ ಭಾರಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.  ಸತತ 3ನೇ ಬಾರಿಗೆ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ತಿಂಗಳ ವೇತನ ಎಷ್ಟು? ಪ್ರಧಾನಿ ಮೋದಿ ತಿಂಗಳ ವೇತನ 1.66 ಲಕ್ಷ ರೂಪಾಯಿ. ಅಂದರೆ ವಾರ್ಷಿಕ ಸ್ಯಾಲರಿ 19.20 ಲಕ್ಷ ರೂಪಾಯಿ.

ಮೋದಿಯ ತಿಂಗಳ 1.66 ಲಕ್ಷ ರೂಪಾಯಿ ವೇತನದಲ್ಲಿ 50,000 ರೂಪಾಯಿ ಫಿಕ್ಸೆಡ್ ಸ್ಯಾಲರಿಯಾಗಿ ನೀಡಲಾಗುತ್ತದೆ. ಇನ್ನು ಇತರ ಭತ್ಯೆಯಾಗಿ 6,000 ರೂಪಾಯಿ, ಸಂಸದರ ಭತ್ಯೆ 3,000, ಪ್ರಧಾನ ಮಂತ್ರಿ ತಮ್ಮ ಕಾರ್ಯಾಲದಿಂದ ಹೊರಭಾಗದಲ್ಲಿ ಕೆಲಸ ಮಾಡಿದರೆ ಪ್ರತಿ ದಿನದ ವೆಚ್ಚ 3,000 ರೂಪಾಯಿ ನೀಡಲಾಗುತ್ತದೆ. ಈ ಭತ್ಯೆಗಳನ್ನು ಒಟ್ಟುಗೂಡಿಸಿದರೆ ತಿಂಗಳಿಗೆ 90,000 ರೂಪಾಯಿ. ಹೀಗಾಗಿ ಪ್ರಧಾನ ಮಂತ್ರಿ ಫಿಕ್ಸೆಡ್, ಭತ್ಯೆ, ಸಂಸದರ ಭತ್ಯೆ ಸೇರಿದಂತೆ ಒಟ್ಟು 1.66 ಲಕ್ಷ ರೂಪಾಯಿ ತಿಂಗಳ ವೇತನವಾಗಿ 1.66 ಲಕ್ಷ ರೂಪಾಯಿ ನೀಡಲಾಗುತ್ತದೆ. 

Latest Videos

undefined

ವೇತನ ಜೊತೆಗೆ ಭಾರತದ ಪ್ರಧಾನ ಮಂತ್ರಿ ಹಲವು ಸೌಲಭ್ಯಗಳನ್ನೂ ಪಡೆಯಲಿದ್ದಾರೆ. ಪ್ರಧಾನಿಗೆ ಬಾಡಿಗೆ ರಹಿತಿ ಐಷಾರಾಮಿ ಅಧಿಕೃತ ಮನೆ ನೀಡಲಾಗುತ್ತದೆ. 7 ಆರ್‌ಸಿಆರ್ ಎಂದೇ ಖ್ಯಾತಿ ಗೊಂಡಿರುವ ಭಾರತದ ಪ್ರಧಾನಿ ಮನೆ 7 ರೇಸ್ ಕೋರ್ಸ್ ರಸ್ತೆ, ನವಹೆದಲಿಯಲ್ಲಿದೆ. ಇನ್ನು ಪ್ರಧಾನಿಗಳ ಪ್ರಯಾಣಕ್ಕೆ ವಿಶೇಷ ಭದ್ರತೆಗಳನ್ನೊಳಗೊಂಡ ವಾಹನ ನೀಡಲಾಗುತ್ತದೆ. ಜೊತೆಗೆ ಪ್ರಧಾನಿಗೆ ವಿಮಾನ, ಹೆಲಿಕಾಪ್ಟರ್ ಪ್ರಯಾಣದ ಸೌಲಭ್ಯವೂ ನೀಡಲಾಗುತ್ತದೆ. ಪ್ರಧಾನಿಯ ಅಧಿಕೃತ ವಿಮಾನ ಏರ್ ಇಂಡಿಯಾ ಒನ್ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ.

ವೈದ್ಯಕೀಯ ಸೌಲಭ್ಯ ಸಂಪೂರ್ಣ ಉಚಿತವಾಗಿದೆ. ದಿನದ 24 ಗಂಟೆಯೂ ಪ್ರಧಾನಿಗೆ ವೈದ್ಯಕೀಯ ಸೌಲಭ್ಯ, ವೈದ್ಯರ ತಂಡ ಲಭ್ಯವಿರುತ್ತದೆ. ಇನ್ನು ಪ್ರಧಾನಿ ಕುಟುಂಬಕ್ಕೂ ಉಚಿತ ವೈದ್ಯಕೀಯ ಸೌಲಭ್ಯವಿದೆ. ಇನ್ನು ಪ್ರಧಾನಿಗಳಿಗೆ ಪಿಂಚಣಿ ಸೌಲಭ್ಯವೂ ಲಭ್ಯವಿದೆ. ಸುದೀರ್ಘ ಸೇವೆ ಬಳಿಕ ನಿವೃತ್ತಿಯಾದಾಗ ಮಾಜಿ ಪ್ರಧಾನಿಗೆ ಪಿಂಚಣಿ ಸೌಲಭ್ಯವೂ ನೀಡಲಾಗುತ್ತದೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿಗೆ ಊಹೆಗೂ ನಿಲುಕದೆ ಭದ್ರತೆ ನೀಡಲಾಗುತ್ತದೆ. ಎನ್‌ಎಸ್‌ಜಿ ಭದ್ರತೆ ಹೊಣೆ ಹೊತ್ತುಕೊಂಡಿದೆ. ದೇಶದ ಪ್ರಧಾನಿಗೆ ಭಾರಿ ಭದ್ರತೆ ನೀಡಲಾಗುತ್ತದೆ. ಪ್ರಧಾನಿ ಭದ್ರತೆ ಮಾಹಿತಿಗಳು ಬಹಿರಂಗವಾಗುವುದಿಲ್ಲ. ಇದನ್ನು ಗೌಪ್ಯವಾಗಿ ಇಡಲಾಗುತ್ತದೆ. ಮಾಧ್ಯಮಗಳ ಕಣ್ಣಿಗೆ ಬಿದ್ದ ಭದ್ರತೆಗಳು ಮಾತ್ರ ಚರ್ಚೆಯಾಗುತ್ತದೆ.
 

click me!