
ಕೊಚ್ಚಿ[ಜ.18]: ಪ್ರಧಾನಿ ಮೋದಿಯನ್ನು ಟೀಕಿಸುತ್ತಿದ್ದ ಇತಿಹಾಸ ತಜ್ಞ ರಾಮಚಂದ್ರ ಗುಹಾ ಇದೇ ಮೊದಲ ಬಾರಿ ಪ್ರಧಾನಿ ಮೋದಿ ತಮ್ಮ ಸ್ವಂತ ಪರಿಶ್ರಮದಿಂದ ಮೇಲೆ ಬಂದಿದ್ದಾರೆ ಎನ್ನುವ ಮೂಲಕ ಹಾಡಿ ಹೊಗಳಿದ್ದಾರೆ. ಈ ವಿಚಾರ ಹಲವರನ್ನು ಅಚ್ಚರಿಗೀಡು ಮಾಡಿದೆ.
ಗೋ ಮಾಂಸ ತಿಂದು ಟ್ವೀಟ್ ಮಾಡಿದ್ದ ಗುಹಾಗೆ ಬೆದರಿಕೆ ಕರೆ
ಎಡಪಂಥ ಬಲಿಷ್ಟವಾಗಿರುವ ಕೇರಳದ ಕೊಯಿಕ್ಕೋಡ್‌ನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರದಂದು ಮಾತನಾಡಿದ ರಾಮಚಂದ್ರ ಗುಹಾ ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾತನಾಡಿದ ಗುಹಾ 'ಸ್ವಂತ ಪ್ರಯತ್ನದಿಂದ ಹಾಗೂ ಕಠಿಣ ಪರಿಶ್ರಮದಿಂದ ಮೇಲೆ ಬಂದ ಮೋದಿ ವಿರುದ್ಧ ರಾಹುಲ್ ಗಾಂಧಿ ಸಾಧನೆ ಏನೂ ಅಲ್ಲ. ಕೇರಳ ಭಾರತಕ್ಕೆ ಹಲವಾರು ಅದ್ಭುತ ಕೊಡುಗೆಗಳನ್ನು ನೀಡಿದೆ. ಆದರೆ ರಾಹುಲ್ ಗಾಂಧಿ ಆಯ್ಕೆ ಮಾಡಿ ದುರಂತವೆಸಗಿದೆ' ಎಂದಿದ್ದಾರೆ.
ರಾಹುಲ್ ಗಾಂಧಿ 2019ರ ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಕಣಕ್ಕಿಳಿದಿದ್ದರು. ಇವುಗಳಲ್ಲಿ ಅಮೇಠಿ ಕ್ಷೇತ್ರದಲ್ಲಿ ಸೋಲನುಭವಿಸಿದ್ದರು. ಆದರೆ ಮತ್ತೊಂದು ಕ್ಷೇತ್ರವಾದ ಕೇರಳದ ವಯನಾಡಿನಲ್ಲಿ ಭಾರೀ ಅಂತರದ ಗೆಲುವು ಕಂಡಿದ್ದರು.
‘ಗಾಂಧಿಜೀ ಇದ್ದಿದ್ರೆ ಅವ್ರನ್ನೂ ಮೋದಿ ಒಳಗಾಗ್ತಿದ್ರು’!
ಇನ್ನು ಕಾಂಗ್ರೆಸ್ ಪಕ್ಷದ ಕುರಿತಾಗಿ ಮಾತನಾಡಿದ ರಾಮಚಂದ್ರ ಗುಹಾ 'ಕಾಂಗ್ರೆಸ್ ಪತನಗೊಂಡಿದೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ಮಹಾನ್ ಪಕ್ಷವೆನಿಸಿಕೊಂಡಿದ್ದ ಕಾಂಗ್ರೆಸ್, ಇವತ್ತು ನಿಷ್ಪ್ರಯೋಜಕ ನಿಷ್ಕ್ರಿಯ ಕುಟುಂಬ ಕಂಪನಿಯಾಗಿ ಉಳಿದುಕೊಂಡಿದೆ. ಇದೇ ಪಕ್ಷದಿಂದಾಗಿ ಇಂದು ದೇಶದಲ್ಲಿ ಹಿಂದುತ್ವ ಹಾಗೂ ಹಿಂದೂ ರಾಷ್ಟ್ರಭಕ್ತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ನನಗೆ ರಾಹುಲ್ ಗಾಂಧಿ ಮೇಲೆ ಯಾವುದೇ ವೈಯುಕ್ತಿಕ ದ್ವೇಷ ಇಲ್ಲ. ಅವರೊಬ್ಬ ಉತ್ತಮ ಹಾಗೂ ಸಭ್ಯ ನಡತೆಯುಳ್ಳ ವ್ಯಕ್ತಿಯಾಗಿದ್ದಾರೆ. ಆದರೆ ಇಂದಿನ ಯುವಜನತೆ ಅವರನ್ನು ನಾಯಕರನ್ನಾಗಿ ನೋಡಲು ಇಚ್ಛಿಸುತ್ತಿಲ್ಲ. ಒಂದು ವೇಳೆ ಕೇರಳದ ಜನತೆ 2024ರ ಚುನಾವಣೆಯಲ್ಲೂ ರಾಹುಲ್ ಗಾಂಧಿಗೆ ಮತ ನೀಡಿ ಗೆಲ್ಲಿಸಿದರೆ, ಮೋದಿಗೆ ಲಾಭ ಮಾಡುತ್ತೀರೆಂದು ಅರ್ಥ’ ಎಂದಿದ್ದಾರೆ.
'ಜನವರಿ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ