'ನಿಮಗೆ ನಿಮ್ಮನ್ನು ನೋಡ್ಕೊಳೋಕೆ ಆಗಲ್ವೇನ್ರೀ? ಫಸ್ಟ್‌ ಬಜೆಟ್‌ ಬಳಿಕ Narendra Modi ಹೀಗಂದ್ರು'-ನಿರ್ಮಲಾ ಸೀತಾರಾಮನ್

Published : Sep 17, 2025, 11:46 AM IST
narendra modi, nirmala sitharaman

ಸಾರಾಂಶ

Narendra Modi 75th Birthday: ನರೇಂದ್ರ ಮೋದಿ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ನರೇಂದ್ರ ಮೋದಿ ಅವರು ಸಹದ್ಯೋಗಿಯಾಗಿ ಎಷ್ಟು ಕಾಳಜಿ ಮಾಡ್ತಾರೆ ಎಂದು ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದಾರೆ. 

ಇಂದು ನರೇಂದ್ರ ಮೋದಿ ಅವರ 75ನೇ ಜನ್ಮದಿನ. ಅನೇಕರು ಮೋದಿ ಅವರನ್ನು ಹೊಗಳೋದುಂಟು, ಆರಾಧಿಸೋದುಂಟು, ಇನ್ನೂ ಕೆಲವರು ವಿಮರ್ಶೆ ಮಾಡಿ ಟೀಕಿಸುವುದೂ ಇದೆ. ಅವೆಲ್ಲವೂ ವ್ಯಕ್ತಿಗತ ಅಭಿಪ್ರಾಯ. ಆದರೆ ಸಹದ್ಯೋಗಿಯ ಆರೋಗ್ಯದ ಬಗ್ಗೆ ನರೇಂದ್ರ ಮೋದಿ ಎಷ್ಟು ಕೇರ್‌ ಮಾಡ್ತಾರೆ ಎನ್ನೋದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಟ್ವೀಟ್‌ ಮಾಡಿ ಹೇಳಿಕೊಂಡಿದ್ದಾರೆ. ಮೊದಲ ಬಜೆಟ್‌ ಮಂಡನೆಯು ವಿಶೇಷ ಕಾರಣಕ್ಕೆ ನೆನಪಿದೆ ಎಂದು ಅವರು ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್‌ ಟ್ವೀಟ್‌ ಏನು?

ಕೆಲವೇ ದಿನಗಳಲ್ಲಿ ನಾವು ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವನ್ನು #SevaPakhwada2025 ರ ಭಾಗವಾಗಿ ಆಚರಿಸಲಿದ್ದೇವೆ. ನರೇಂದ್ರ ಮೋದಿ ಅವರನ್ನು ನೆನಪಿಸಿಕೊಂಡಾಗ, ಪ್ರಧಾನಮಂತ್ರಿಗಳಲ್ಲಿ ನಾನು ಮೊದಲು ದೃಢವಾದ, ಕಾಳಜಿಯುಳ್ಳ, ಸಹಾನುಭೂತಿಯಿಂದ ಕೂಡಿದ ನಾಯಕತ್ವವನ್ನು ನೋಡುತ್ತೇನೆ.

ನನ್ನ ಮೊದಲ ಬಜೆಟ್ ಭಾಷಣದ ದಿನವನ್ನು ನಾನು ಎಂದಿಗೂ ಮರೆಯೋದಿಲ್ಲ. ಆದರೆ ಇದನ್ನು ಬಹುತೇಕ ಜನರು ಬೇರೆ ಬೇರೆ ಕಾರಣಗಳಿಗೆ ಊಹಿಸಬಹುದು, ಆದರೆ ವಿಷಯ ಅದಲ್ಲ. ನಾನು ಬಜೆಟ್ ಭಾಷಣ ಮುಗಿಸಿ ಮನೆಗೆ ಹೋದೆ, ಮನೆಗೆ ಹೋಗುತ್ತಿದ್ದಂತೆ ಫೋನ್‌ ರಿಂಗ್‌ ಆಯ್ತು. ಅದು ಗೌರವಾನ್ವಿತ ಪ್ರಧಾನಮಂತ್ರಿಯವರ ಫೋನ್‌ ಆಗಿತ್ತು.

“ನೀವು ನಿಮ್ಮ ಆರೋಗ್ಯದ ಬಗ್ಗೆ ಯಾಕೆ ಗಮನ ಕೊಡಲಿಲ್ಲ?” ಎಂದು ಅವರು ಕೇಳಿದರು. ನಾನು ನನ್ನ ಬಗ್ಗೆ ಗಮನ ಕೊಟ್ಟು, ಮುಂದೆ ಏನು ಮಾಡಬೇಕು ಅಂತ ಯೋಚಿಸುವ ಮೊದಲೇ ಅವರು ಕ್ರಮ ಕೈಗೊಂಡಿದ್ದರು. ಅವರು ತಮ್ಮ ಪರ್ಸನಲ್‌ ಡಾಕ್ಟರ್‌ ಅನ್ನು ನನ್ನ ಮನೆಗೆ ಡೈರೆಕ್ಟ್‌ ಆಗಿ ಕಳಿಸಿದ್ದರು. ಎಲ್ಲ ಅಗತ್ಯ ಪರೀಕ್ಷೆಗಳನ್ನು ಮಾಡಿ, ನಾನು ಕಂಪ್ಲೀಟ್‌ ಆಗಿ ಆರಾಮಾಗಿದ್ದೇನೆ ಎಂದು ಕನ್ಫರ್ಮ್‌ ಮಾಡಿಕೊಳ್ಳಲು ಹೇಳಿದ್ದರು.

ಇದು ಯಾವಾಗಲೂ ನನಗೆ ನೆನಪಿನಲ್ಲಿ ಇರುತ್ತದೆ. ಇಂದಿಗೂ, ಪ್ರತಿಬಾರಿ ಅವರು “ನೀವು ನಿಮ್ಮ ಆರೋಗ್ಯವನ್ನು ನೋಡಿಕೊಳ್ತಿದ್ದೀರಾ? ನೀವು ಹೇಗಿದ್ದೀರಿ?” ಎಂದು ಕೇಳುತ್ತಾರೆ.

ಒಂದು ರಾಷ್ಟ್ರವನ್ನು ಮುನ್ನಡೆಸುವ, ದೇಶದ ಎಲ್ಲ ಮೂಲೆಗಳನ್ನು ತಲುಪುವ ಜವಾಬ್ದಾರಿಗಳನ್ನು ನಿರ್ವಹಿಸುವ ಒಬ್ಬ ವ್ಯಕ್ತಿಯು, ತನ್ನ ಸಹೋದ್ಯೋಗಿಗಳ ಯೋಗಕ್ಷೇಮವನ್ನು ನೆನಪಿಟ್ಟುಕೊಂಡು ಕಾಳಜಿವಹಿಸುವುದು ಒಂದು ಅಸಾಮಾನ್ಯ ವಿಷಯವಂತೂ ಹೌದು.

ಜನರು ಕೂಡ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ದೃಢವಾದ, ಗಂಭೀರ, ಸಂಕಲ್ಪಿತ ಲೀಡರ್‌ ಥರ ಕಾಣುತ್ತಾರೆ. ಹೌದು, ಅವರು ಆ ಎಲ್ಲ ಗುಣಗಳನ್ನು ಹೊಂದಿದ್ದಾರೆ. ಆದರೆ ನಾನು ಅವರ ಮತ್ತೊಂದು ಆಯಾಮವನ್ನೂ ಕೂಡ ಕಂಡಿದ್ದೇನೆ, ಅದು ಕೋಮಲವಾದ, ಚಿಂತನಶೀಲ, ಮಾನವೀಯವಾಗಿರೋ ಗುಣವನ್ನು ನೋಡಿದ್ದೇನೆ. ಈ ದೃಢತೆ, ಕಾಳಜಿಯ ಸಂಯೋಜನೆಯೇ ಅವರನ್ನು ವಿಶಿಷ್ಟರನ್ನಾಗಿಸುತ್ತದೆ.

ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ 1950ರಲ್ಲಿ ಸೆಪ್ಟೆಂಬರ್‌ 17ರಂದು ಜನಿಸಿದರು. ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದಹಾಗೆ 15 ಡೆವಲಪ್‌ಮೆಂಟ್‌ ಪ್ರಾಜೆಕ್ಟ್‌ಗಳನ್ನು SevaPakhwada2025 ಎಂದು ಹೆಸರಿಡಲಾಗಿದೆ. ಇದನ್ನು ಅಮಿತ್‌ ಶಾ ಉದ್ಘಾಟನೆ ಮಾಡಲಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್