Narendra Modi Birthday: ವರ್ಷ 75 ಆದ್ರೂ ಮೋದಿ ಇಷ್ಟು ಫಿಟ್ ಆಗಿರೋದು ಹೇಗೆ?

Published : Sep 16, 2025, 01:17 PM IST
Narendra Modi

ಸಾರಾಂಶ

Pm modi lifestyle : ಪ್ರಧಾನ ಮಂತ್ರಿ ನರೇಂದ್ರ ಮೋದಿ 75ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ನಾಳೆ ಅವರ ಹುಟ್ಟುಹಬ್ಬವನ್ನು ದೇಶದಾದ್ಯಂತ ಆಚರಿಸಲು ತಯಾರಿ ನಡೆದಿದೆ. ಈ ವಯಸ್ಸಿನಲ್ಲೂ ಸದಾ ಬ್ಯುಸಿ ಇರುವ ಮೋದಿ ಫಿಟ್ನೆಸ್ ಗುಟ್ಟೇನು? 

ಪ್ರಧಾನಿ ನರೇಂದ್ರ ಮೋದಿ (Narendra Modi) ಸೆಪ್ಟೆಂಬರ್ 17 ರಂದು 75 ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈಗಿನ ಕಾಲದಲ್ಲಿ ವರ್ಷ 50 ಆಗ್ತಿದ್ದಂತೆ ಉಸಿರು ಮೇಲೆ ಕೆಳಗೆ ಬರುತ್ತೆ. 75ನೇ ವಯಸ್ಸಿನಲ್ಲಿಬಿಪಿ, ಶುಗರ್, ಕಾಯಿಲೆ ಅಂತ ಆಸ್ಪತ್ರೆಗೆ ಓಡಾಡ್ತಾ, ಹಾಸಿಗೆ ಹಿಡಿಯೋರೇ ಹೆಚ್ಚು. ಆದ್ರೆ ಪ್ರಧಾನಿ ಮೋದಿಗೆ ವಯಸ್ಸು ಕೇವಲ ಲೆಕ್ಕಕ್ಕೆ ಮಾತ್ರ. ಅವರು ಇಡೀ ದಿನ ಆಕ್ಟಿವ್ ಆಗಿರ್ತಾರೆ. ರಾಜಕೀಯದಿಂದ ಹಿಡಿದು ಸೋಶಿಯಲ್ ಮೀಡಿಯಾವರೆಗೆ ಎಲ್ಲದ್ರಲ್ಲೂ ಆಕ್ಟಿವ್ ಆಗಿರುವ ಅವರು 18 ಗಂಟೆ ನಿರಂತರ ಕೆಲ್ಸ ಮಾಡ್ತಾರೆ. ಮೋದಿ ಈ ಉತ್ಸಾಹಿ, ಚಟುವಟಿಕೆಯ ಲೈಫ್ ಗೆ ಫಿಟ್ನೆಸ್ ಮತ್ತು ದಿನಚರಿಯೇ ಸ್ಫೂರ್ತಿ. ಕಟ್ಟುನಿಟ್ಟಿನ ಡಯಟ್, ಯೋಗ, ಉಪವಾಸ ಮತ್ತು ಶಿಸ್ತಿನ ಜೀವನಶೈಲಿ ಅವರ ಶಕ್ತಿಯ ರಹಸ್ಯ.

ಪ್ರಧಾನಿ ಮೋದಿ ಡಯಟ್ ಶೀಟ್ (Modi Diet Sheet): ಬೆಳಗಿನ ಉಪಹಾರದಿಂದ ರಾತ್ರಿ ಊಟದವರೆಗೆ ಮೋದಿ ಏನೇನು ತಿಂತಾರೆ.

ಉಪಹಾರ : ಸರಳ ಆದರೆ ಪೌಷ್ಟಿಕ ಉಪಹಾರವನ್ನು ಮೋದಿ ಬೆಳಿಗ್ಗೆ 9 ಗಂಟೆ ಒಳಗೆ ಮುಗಿಸ್ತಾರೆ. ಅವರ ಬ್ರೆಕ್ ಫಾಸ್ಟ್ ನಲ್ಲಿ ಋತುಮಾನದ ಹಣ್ಣು, ಹಸಿರು ತರಕಾರಿ ಮತ್ತು ಧಾನ್ಯ ಇರುತ್ವೆ. ಕೆಲವೊಮ್ಮೆ ಅವರು ಲಘು ಪೋಹಾ ಮತ್ತು ಶುಂಠಿ ಚಹಾ ಸೇವಿಸುತ್ತಾರೆ. ಇದು ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ.

ಶಿಸ್ತು, ಜವಾಬ್ದಾರಿಯ ಮೂರ್ತರೂಪ ಪ್ರಧಾನಿ ಮೋದಿ ಜೀ: ಬಿ.ಎಲ್.ಸಂತೋಷ್ ಲೇಖನ

ನುಗ್ಗೆಕಾಯಿ ಪರಾಠ : ಮೋದಿ ಶಕ್ತಿಯ ರಹಸ್ಯ ಡ್ರಮ್ ಸ್ಟಿಕ್ ಪರಾಠ. ಇದನ್ನು ಈ ಹಿಂದೆ ಅವರೇ ಒಪ್ಪಿಕೊಂಡಿದ್ದಾರೆ. ಇದು ವಿಟಮಿನ್ ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಪ್ರೋಟೀನ್ನಲ್ಲಿ ಸಮೃದ್ಧವಾಗಿದೆ. ಇದು ಅವರ ಮೂಳೆಗಳನ್ನು ಬಲಪಡಿಸುವುದಲ್ಲದೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಿಂದ ಅವರನ್ನು ದೂರವಿಟ್ಟಿದೆ.

ಗುಜರಾತಿ ಖಿಚಡಿ : ಮೋದಿ ಅವರು ಆಗಾಗ್ಗೆ ಭೋಜನಕ್ಕೆ ಗುಜರಾತಿ ಖಿಚಡಿಯನ್ನು ತಿನ್ನುತ್ತಾರೆ. ಇದು ಹಗುರವಾಗಿದ್ದು, ಸುಲಭವಾಗಿ ಜೀರ್ಣವಾಗುತ್ತದೆ. ಮಸಾಲೆ ಆಹಾರದಿಂದ ಮೋದಿ ದೂರ ಇರ್ತಾರೆ. ಬಹುತೇಕ ದಿನಗಳಲ್ಲಿ ಮೋದಿ ಸಂಜೆ 7 ಗಂಟೆಯ ತಮ್ಮ ರಾತ್ರಿ ಊಟ ಮುಗಿಸ್ತಾರೆ.

ಪ್ರಧಾನಿ ಮೋದಿ ಫಿಟ್ನೆಸ್ : ಆಹಾರದ ಜೊತೆ ಮೋದಿ ದೈಹಿಕ ವ್ಯಾಯಾಮಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಯೋಗ ಮತ್ತು ಧ್ಯಾನ : ಪ್ರಧಾನಿ ಮೋದಿ ಫಿಟ್ನೆಸ್ ಮಂತ್ರ ಯೋಗ. ಯೋಗದಿಂದ ಎಲ್ಲವೂ ಸಾಧ್ಯ ಎಂದು ಅವರು ನಂಬುತ್ತಾರೆ. ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನ ಮತ್ತು ಯೋಗ ನಿದ್ರಾ ಸೇರಿದಂತೆ ಅವರು ಪ್ರತಿದಿನ ಪಂಚತ್ವ ಯೋಗ ಮಾಡ್ತಾರೆ. ಯೋಗ ಅವರಿಗೆ ಕೇವಲ ವ್ಯಾಯಾಮವಲ್ಲ, ಜೀವನಶೈಲಿ. ಇದು ಅವರ ಮಾನಸಿಕ ಮತ್ತು ದೈಹಿಕ ಸಮತೋಲನದ ರಹಸ್ಯ.

PM Modi Birthday: ನರೇಂದ್ರ ಮೋದಿಗೆ 2026 ಶುಭವಾ – ಅಶುಭವಾ? ಏನು ಹೇಳುತ್ತೆ ಅವರ ಜಾತಕ?

ನಿದ್ರೆ : ನರೇಂದ್ರ ಮೋದಿ ಕೇವಲ 3 ರಿಂದ 4 ಗಂಟೆಗಳ ಕಾಲ ನಿದ್ರಿಸುತ್ತಾರೆ. ಉಳಿದ ಟೈಂ ಕೆಲಸದಲ್ಲಿ ಬ್ಯುಸಿ. ನಿದ್ರೆ ಕೊರತೆ ತಪ್ಪಿಸಲು ಅವರು ಯೋಗ ನಿದ್ರೆಯ ಸಹಾಯ ಪಡೆಯುತ್ತಾರೆ. ಇದು ಅವರ ದೇಹಕ್ಕೆ ಆಳವಾದ ವಿಶ್ರಾಂತಿ ನೀಡುತ್ತದೆ. ದಿನವಿಡೀ ಅವರು ಚೈತನ್ಯದಿಂದ ಇರುವಂತೆ ಮಾಡುತ್ತದೆ.

ವಾಕಿಂಗ್ : ಯೋಗ, ನಿದ್ರೆ ಜೊತೆ ಮೋದಿ ಪ್ರಕೃತಿಯ ಜೊತೆ ವಿಶೇಷ ಸಂಬಂಧ ಹೊಂದಿದ್ದಾರೆ. ಅವರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುತ್ತಾರೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ನೋವು ಮತ್ತು ಊತವನ್ನು ನಿವಾರಿಸುತ್ತದೆ ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಮೋದಿ ಉಪವಾಸ ದಿನಚರಿ: ಮೋದಿ ಕಳೆದ 50 ವರ್ಷಗಳಿಂದ ಉಪವಾಸದ ರೂಲ್ಸ್ ಫಾಲೋ ಮಾಡ್ತಿದ್ದಾರೆ. ಉಪವಾಸವನ್ನು ಅವರು ತಪ್ಪಿಸೋದಿಲ್ಲ.

• ಜೂನ್ ನಿಂದ ನವೆಂಬರ್ ವರೆಗೆ ಅವರು ದಿನಕ್ಕೆ ಒಮ್ಮೆ ಮಾತ್ರ ಆಹಾರ ಸೇವನೆ ಮಾಡ್ತಾರೆ.

• ನವರಾತ್ರಿಯ ಸಮಯದಲ್ಲಿ, ಅವರು ಬಿಸಿನೀರನ್ನು ಮಾತ್ರ ಕುಡಿಯುತ್ತಾರೆ. ಹಣ್ಣುಗಳನ್ನು ಮಾತ್ರ ಸೇವನೆ ಮಾಡ್ತಾರೆ.

• ಚೈತ್ರ ನವರಾತ್ರಿಯಲ್ಲಿ ಅವರು ಕೇವಲ ಒಂದು ಹಣ್ಣನ್ನು ತಿನ್ನುತ್ತಾರೆ. ಒಂಬತ್ತು ದಿನಗಳವರೆಗೆ ಅವರು ಇದೆ ರೀತಿ ಉಪವಾಸ ಮಾಡ್ತಾರೆ.

ಮೋದಿ ಆರೋಗ್ಯಕರ ಅಭ್ಯಾಸಗಳು:

• ಮೋದಿ ದಿನವಿಡೀ ಬಿಸಿನೀರನ್ನು ಕುಡಿಯುತ್ತಾರೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಸಕ್ರಿಯವಾಗಿರಿಸುತ್ತದೆ. ಆದ್ರೆ ತುಂಬಾ ಬಿಸಿಯಾದ ನೀರನ್ನು ಕುಡಿಯುವುದಿಲ್ಲ.

• ವರ್ಷಕ್ಕೆ ಸುಮಾರು 300 ದಿನ ಅವರು ಮಖಾನಾ ತಿನ್ನುತ್ತೇನೆ ಎಂದಿದ್ದಾರೆ. ಮಖಾನಾ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪ್ರೋಟೀನ್ ತಿಂಡಿ.

• ಮೋದಿ ಆಹಾರದಲ್ಲಿ ಮೊಸರಿರುತ್ತದೆ. ಇದು ಜೀರ್ಣಕ್ರಿಯೆ ಸುಧಾರಿಸುತ್ತದೆ.

• ಕಡಿಮೆ ಮಸಾಲೆ, ಕಡಿಮೆ ಎಣ್ಣೆ ಆಹಾರ ಸೇವನೆ ಮಾಡ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..