ತುರ್ತುಪರಿಸ್ಥಿತಿಯ ಬಳಿಕ ಭಾರತ ಜನಸಂಖ್ಯೆ ನಿಯಂತ್ರಣದತ್ತ ಗಮನ ನೀಡಿಲ್ಲ: ಇನ್ಫಿ ನಾರಾಯಣ ಮೂರ್ತಿ

By Santosh Naik  |  First Published Aug 19, 2024, 10:04 AM IST

population control in India ಭಾರತವು ಜನಸಂಖ್ಯೆ, ತಲಾ ಭೂಮಿ ಲಭ್ಯತೆ ಮತ್ತು ಆರೋಗ್ಯ ಸೌಲಭ್ಯಗಳಿಗೆ ಸಂಬಂಧಿಸಿದ ಮಹತ್ವದ ಸವಾಲುಗಳನ್ನು ಎದುರಿಸುತ್ತಿದೆ. ತುರ್ತು ಪರಿಸ್ಥಿತಿಯ ಅವಧಿಯಿಂದಲೂ, ನಾವು ಜನಸಂಖ್ಯೆ ನಿಯಂತ್ರಣಕ್ಕೆ ಸಾಕಷ್ಟು ಗಮನ ಹರಿಸಿಲ್ಲ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.


ಪ್ರಯಾಗ್‌ರಾಜ್‌ (ಆ.19): ಭಾರತದ ಜನಸಂಖ್ಯೆಯ ಬೆಳವಣಿಗೆ ಮತ್ತು ರಾಷ್ಟ್ರದ ಸುಸ್ಥಿರತೆಯ ಮೇಲೆ ಅದರ ಸಂಭಾವ್ಯ ಪ್ರಭಾವದ ಬಗ್ಗೆ ಇನ್ಫೋಸಿಸ್‌ನ ಸಹ-ಸಂಸ್ಥಾಪಕರಾದ ಎನ್‌ಆರ್ ನಾರಾಯಣ ಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ.  ಪ್ರಯಾಗ್‌ರಾಜ್‌ನಲ್ಲಿರುವ ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಎನ್‌ಎನ್‌ಐಟಿ) ಘಟಿಕೋತ್ಸವ ಸಮಾರಂಭದ ಮುಖ್ಯ ಭಾಷಣದ ವೇಳೆ, ತುರ್ತುಪರಿಸ್ಥಿತಿಯ ಬಳಿಕ ದೇಶದ ಜನಸಂಖ್ಯೆ ನಿಯಂತ್ರಣದ ಬಗ್ಗೆ ಹೆಚ್ಚಿನ ಗಮನ ನೀಡಿಲ್ಲ ಎಂದು ತಿಳಿಸಿದ್ದಾರೆ. ತುರ್ತು ಪರಿಸ್ಥಿತಿಯ ಅವಧಿಯಿಂದಲೂ, ಜನಸಂಖ್ಯೆಯ ನಿಯಂತ್ರಣಕ್ಕೆ ಭಾರತವು ಸಾಕಷ್ಟು ಗಮನ ನೀಡಿಲ್ಲ. ಇದು ದೇಶದ ಸುಸ್ಥಿರತೆಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ ಎನ್ನುವುದನ್ನು ನಾನು ನಂಬುತ್ತೇನೆ. ಇದು ತಲಾ ಭೂಮಿ ಲಭ್ಯತೆ ಮತ್ತು ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ನಿರ್ಣಾಯಕ ಸವಾಲುಗಳಿಗೆ ಕಾರಣವಾಗುತ್ತದೆ ಎಂದಿದ್ದಾರೆ.

"ಭಾರತವು ಜನಸಂಖ್ಯೆ, ತಲಾ ಭೂಮಿ ಲಭ್ಯತೆ ಮತ್ತು ಆರೋಗ್ಯ ಸೌಲಭ್ಯಗಳಿಗೆ ಸಂಬಂಧಿಸಿದ ಮಹತ್ವದ ಸವಾಲುಗಳನ್ನು ಎದುರಿಸುತ್ತಿದೆ. ತುರ್ತು ಪರಿಸ್ಥಿತಿಯ ಅವಧಿಯಿಂದಲೂ, ನಾವು ಭಾರತೀಯರು ಜನಸಂಖ್ಯೆ ನಿಯಂತ್ರಣಕ್ಕೆ ಸಾಕಷ್ಟು ಗಮನ ಹರಿಸಿಲ್ಲ. ಇದು ನಮ್ಮ ದೇಶವನ್ನು ದೊಡ್ಡ ಮಟ್ಟದ ಅಪಾಯವನ್ನುಂಟುಮಾಡುತ್ತದೆ" ಎಂದು ಮೂರ್ತಿ ಹೇಳಿದರು. "ಭಾರತಕ್ಕಿಂತ, ಯುಎಸ್, ಬ್ರೆಜಿಲ್ ಮತ್ತು ಚೀನಾದಂತಹ ದೇಶಗಳು ತಲಾ ಭೂಮಿ ಲಭ್ಯತೆಯನ್ನು ಹೆಚ್ಚು ಹೊಂದಿವೆ" ಎಂದು ಅವರು ಹೇಳಿದರು.

ತಮ್ಮ ಭಾಷಣದಲ್ಲಿ ರಾಷ್ಟ್ರೀಯ ಪ್ರಗತಿಯ ಕಡೆಗೆ ವೃತ್ತಿಪರರ ಕರ್ತವ್ಯದ ಮಹತ್ವವನ್ನು ಒತ್ತಿ ಹೇಳಿದರು. ಪದವೀಧರರು ಉನ್ನತ ಆಕಾಂಕ್ಷೆಗಳನ್ನು ಹೊಂದಿರಬೇಕು, ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಆ ಕನಸುಗಳನ್ನು ವಾಸ್ತವಕ್ಕೆ ಪರಿವರ್ತಿಸಲು ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು. "ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದು ನಿಜವಾದ ವೃತ್ತಿಪರರ ಜವಾಬ್ದಾರಿಯಾಗಿದೆ" ಎಂದು ತಿಳಿಸಿದ್ದಾರೆ ಈ ಕೊಡುಗೆಯು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. "ಈ ಕೊಡುಗೆಯು ಹೆಚ್ಚಿನ ಆಕಾಂಕ್ಷೆಗಳನ್ನು ಹೊಂದುವುದು, ದೊಡ್ಡ ಕನಸುಗಳನ್ನು ಕಾಣುವುದು ಮತ್ತು ಆ ಕನಸುಗಳನ್ನು ವಾಸ್ತವಕ್ಕೆ ತಿರುಗಿಸಲು ಶ್ರಮಿಸುವುದರ ಮೇಲೆ ಅವಲಂಬಿತವಾಗಿದೆ" ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕರು ಹೇಳಿದ್ದಾರೆ.

Tap to resize

Latest Videos

ಭಾರತೀಯರ ಮೆದುಳನ್ನು ವಿದೇಶಿಯರಿಗೆ ಅಡವಿಟ್ಟ ನಾರಾಯಣ ಮೂರ್ತಿ ಅವಕಾಶವಾದಿ: ಲೇಖಕ ರಾಜೀವ್‌ ಮಲ್ಹೋತ್ರಾ ಟೀಕೆ!

ತಮ್ಮ ವೈಯಕ್ತಿಕ ಪ್ರಯಾಣವನ್ನು ಈ ವೇಳೆ ವಿವರಿಸಿದ ನಾರಾಯಣ ಮೂರ್ತಿ ಅವರು ತಮ್ಮ ಯಶಸ್ಸಿಗೆ ಅವರ ಕುಟುಂಬ ಮತ್ತು ಶಿಕ್ಷಕರು ಮಾಡಿದ ತ್ಯಾಗವನ್ನು ಒಪ್ಪಿಕೊಂಡರು. ಒಂದು ತಲೆಮಾರು ಮುಂದಿನವರ ಬದುಕನ್ನು ಹಸನಾಗಿಸಲು ಹಲವಾರು ತ್ಯಾಗಗಳನ್ನು ಮಾಡಬೇಕು, ನನ್ನ ಪ್ರಗತಿಗಾಗಿ ನನ್ನ ತಂದೆ-ತಾಯಿ, ಒಡಹುಟ್ಟಿದವರು ಮತ್ತು ಶಿಕ್ಷಕರು ಗಣನೀಯ ತ್ಯಾಗ ಮಾಡಿದ್ದಾರೆ ಮತ್ತು ಮುಖ್ಯ ಅತಿಥಿಯಾಗಿ ನಾನು ಇಲ್ಲಿ ಹಾಜರಿರುವುದು ಅವರ ತ್ಯಾಗ ವ್ಯರ್ಥವಾಗಲಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

 

ದೇಶದ ಪ್ರತಿಯೊಬ್ಬ ಮಕ್ಕಳು ಇದೊಂದು ಪುಸ್ತಕ ಓದ್ಲೇಬೇಕು ಅಂದ್ರು ಇನ್ಫಿ ನಾರಾಯಣ ಮೂರ್ತಿ, ಆ ಬುಕ್‌ ಯಾವ್ದು?

click me!