ಸರಿಸುಮಾರು ರಾತ್ರಿ 2 ಗಂಟೆ, ಬೆತ್ತಲಾಗಿರುವ ಜೋಡಿ ನಡು ರಸ್ತೆಯಲ್ಲಿ ವಾಗ್ವಾದ ಮಾಡುತ್ತಾ ಸಾಗುತ್ತಿರುವ ದೃಶ್ಯ ವೈರಲ್ ಆಗಿದೆ. ಜೊತೆಗೆ ಆತಂಕವೂ ಹೆಚ್ಚಾಗಿದೆ. ಈ ಘಟನೆ ಕುರಿತು ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ.
ನಾಗ್ಪುರ(ಜು.29) ಸಾರ್ವಜನಿಕವಾಗಿ ಅಸಭ್ಯ ವರ್ತನೆ, ರೊಮ್ಯಾನ್ಸ್, ಅಶ್ಲೀಲ ನಡೆಗಳ ವಿಡಿಯೋಗಳು ಈಗಾಗಲೇ ಕೋಲಾಹಲ ಸೃಷ್ಟಿಸಿದೆ. ಇದೀಗ ಬೆತ್ತಲಾಗಿರುವ ಜೋಡಿ ನಡು ರಸ್ತೆಯಲ್ಲಿ ನಡೆದುಕೊಂಡು ಸಾಗುತ್ತಾ ವಾಗ್ವಾದ ನಡೆಸಿದ ಘಟನೆ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.ಮಧ್ಯ ರಾತ್ರಿ ಇದೇ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಈ ಘಟನೆ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಿದ ಪೊಲೀಸ್ ತನಿಖೆ ಆರಂಭಿಸಿದ್ದಾರೆ.
ನಾಗ್ಪುರದ ಲಕ್ಷ್ಮಿ ನಗರದ ರಸ್ತೆಯಲ್ಲಿ ಜೋಡಿ ಬೆತ್ತಲಾಗಿ ನಡೆದುಕೊಂಡು ಸಾಗಿದೆ. ಇಷ್ಟೇ ಅಲ್ಲ ಇಬ್ಬರು ಪರಸ್ಪರ ವಾಗ್ವಾದ ನಡೆಸಿದ್ದಾರೆ. ಯುವಕ ಸಂಪೂರ್ಣ ಬೆತ್ತಲಾಗಿದ್ದಾನೆ. ಆತನ ಜೊತೆಗಿದ್ದ ಯುವತಿಯೂ ಸಂಪೂರ್ಣ ಬೆತ್ತಲಾಗಿದ್ದಾಳೆ. ಇಬ್ಬರು ವಾಗ್ವಾದ ನಡೆಸುತ್ತಾ ಸಾಗಿದ್ದಾರೆ. ಇದೇ ರಸ್ತೆಯಲ್ಲಿ ಕಾರು ಸವಾರರು ಈ ವಿಡಿಯೋ ಸೆರೆ ಹಿಡಿದ್ದಾರೆ.
ನಡು ರಸ್ತೆಯಲ್ಲಿ ಜೋಡಿಯ ರೊಮ್ಯಾನ್ಸ್, ಸಿನ್ಮಾ ಶೈಲಿಯಲ್ಲಿ ಎಸ್ಕೇಪ್ ಆದರೂ ಪಜೀತಿ ದೃಶ್ಯ ಸೆರೆ!
ವಿಡಿಯೋ ಚಿತ್ರೀಕರಿಸುತ್ತಿರುವುದು ಅರಿವಿಗೆ ಬರುತ್ತಿದ್ದಂತೆ ಯುವಕ ತಕ್ಷಣವೇ ರಸ್ತೆ ಬದಿಯಲ್ಲಿದ್ದ ಮನೆಗಳ ಮರೆಗೆ ಸರಿದಿದ್ದಾನೆ. ಇತ್ತ ಯುವತಿ ಕಿರುಚಾಡುತ್ತಿದ್ದ ವಾಗ್ವಾದ ನಡೆಸುತ್ತಿರುವ ದೃಶ್ಯವಿದೆ. ರೆಕಾರ್ಡಿಂಗ್ ಆಗುತ್ತಿದ್ದಂತೆ ಯುವತಿ ಏಕಾಂಗಿಯಾದರೆ, ಯುವಕ ಮನೆಗಳ ಹಿಂದೆ ಮರೆಯಾಗಿದ್ದಾನೆ. ಬಳಿಕ ಏನಾಗಿದೆ ಅನ್ನೋ ಕುರಿತು ಮಾಹಿತಿ ಇಲ್ಲ. ಇಷ್ಟೇ ಅಲ್ಲ ಈ ವಿಡಿಯೋ ಕೂಡ ಇಲ್ಲಿಗೆ ಮುಕ್ತಾಯಗೊಂಡಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಲಕ್ಷ್ಮಿ ನಗರ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಹಲವರು ಪೊಲೀಸರಿಗೆ ಈ ವಿಡಿಯೋ ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿ ಅಸಭ್ಯ ವರ್ತನೆ ಸರಿಯಲ್ಲ. ಇಬ್ಬರು ನಶೆಯಲ್ಲಿರುವ ಸಾಧ್ಯತೆ ಇದೆ. ಯುವ ಸಮೂಹದಲ್ಲಿ ಈ ರೀತಿಯ ವರ್ತನೆಗಳು ಹೆಚ್ಚಾಗುತ್ತಿದೆ. ಹೀಗಾಗಿ ಯುವ ಸಮೂಹಕ್ಕೆ ಮನೆಯಲ್ಲಿ ಉತ್ತಮ ಸಂಸ್ಕಾರ ಕಲಿಸಿ ಎಂದು ಹಲವು ತಿಳಿ ಹೇಳಿದ್ದಾರೆ.
Nagpur - Laxmi Nagar की सड़को पर शनिवार की रात नग्न घूमते Couple का Video आया सामने
Follow for more Updates pic.twitter.com/KRxJqT5Hxu
ನೀವು ಲವ್ ಮಾಡ್ತಿದ್ದೀರಾ? ಚುಚ್ಚು ಮಾತಿನ ಸವಾಲು ಸ್ವೀಕರಿಸಿ ಜಾತ್ರೆಯಲ್ಲೇ ಚುಂಬಿಸಿದ ಜೋಡಿ!
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಡಿಯೋ ಆಧರಿಸಿ ತನಿಖೆ ಆರಂಭಿಸಿದ್ದಾರೆ. ಜೊತೆ ಇಲ್ಲಿನ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿದ್ದಾರೆ. ನಾಗ್ಪುರದಲ್ಲಿ ಕೆಲ ಪ್ರದೇಶಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸುತ್ತಿದೆ. ಧರ್ಮಪೀಠ, ಸದರ್, ಬಜಾಜ್ ನಗರ ಸೇರಿದಂತೆ ಕೆಲವೆಡೆ ಈ ರೀತಿ ಬೆತ್ತಲೆ ಪ್ರಕರಣಗಳು ಪತ್ತೆಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.