Viral News: 99 ಸಾವಿರ ರೂಪಾಯಿ ಕಟ್ಟಿ ಅಜೀವ ಪಾನಿಪೂರಿ ಫ್ರೀ ಪಡೀರಿ!

Published : Feb 07, 2025, 09:59 AM IST
Viral News: 99 ಸಾವಿರ ರೂಪಾಯಿ ಕಟ್ಟಿ ಅಜೀವ ಪಾನಿಪೂರಿ ಫ್ರೀ ಪಡೀರಿ!

ಸಾರಾಂಶ

ನಾಗ್ಪುರದ ಗೋಲಗಪ್ಪಾ ವ್ಯಾಪಾರಿಯೊಬ್ಬರು 99,000 ರೂ.ಗೆ ಜೀವನಪೂರ್ತಿ ಉಚಿತ ಗೋಲಗಪ್ಪಾ ನೀಡುವ ಆಫರ್ ನೀಡಿದ್ದಾರೆ. ಈ ಆಫರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಅದರ ಬಗ್ಗೆ ಚರ್ಚಿಸುತ್ತಿದ್ದಾರೆ.

ಬೆಂಗಳೂರು (ಫೆ.7): ಹೊಸ ವರ್ಷ, ಹಬ್ಬದ ಸೀಸನ್‌ಗಳಲ್ಲಿ ಅಂಗಡಿಗಳಲ್ಲಿ ಏನೇನೋ ಆಫರ್‌ಗಳನ್ನು ನೋಡುತ್ತೇವೆ. ಆದರೆ ಮಹಾರಾಷ್ಟ್ರದ ನಾಗ್ಪುರದ ಗೋಲಗಪ್ಪಾ ವ್ಯಾಪಾರಿಯೊಬ್ಬ ಗ್ರಾಹಕರಿಗೆ ಒಂದು ವಿಶಿಷ್ಟ ಆಫರ್ ಕೊಟ್ಟಿದ್ದಾನೆ. ಒಂದು ಸಲಕ್ಕೆ 99,000 ರು. ಫೀ ಕಟ್ಟಿಬಿಟ್ಟರೆ ಸಾಕು, ಜೀವನಪೂರ್ತಿ ತನ್ನ ಅಂಗಡಿಯಲ್ಲಿ ದುಡ್ಡು ಕೊಡದೆ ಗೋಲಗಪ್ಪಾ ತಿನ್ನಬಹುದು ಎಂದಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಈ ಆಫರ್ ಸಾಕಷ್ಟು ಸುದ್ದಿಯಾಗಿದೆ. ಅನೇಕರು ಈತ ದುಡ್ಡು ತೆಗೆದುಕೊಂಡು ಅಂಗಡಿ ಖಾಲಿ ಮಾಡಿ ಓಡಿ ಹೋಗುತ್ತಾನೆ ಎಂದು ಸಂಶಯ ಪಟ್ಟರೆ, ಇನ್ನೂ ಅನೇಕರು ಜೀವನಪೂರ್ತಿ ಎಂದರೆ ಗ್ರಾಹಕರದ್ದೋ ಅಥವಾ ವ್ಯಾಪಾರಿಯದ್ದೋ ಎಂದು ಪ್ರಶ್ನಿಸಿದ್ದಾರೆ.

ಗೋಲಗಪ್ಪಾವನ್ನು ಭಾರತದಲ್ಲಿ ಕೆಲವಡೆ ಪಾನೂಪುರಿ ಎಂತಲೂ ಪುಚ್ಕಾ ಎಂತಲೂ ಕರೆಯುತ್ಥಾರೆ. ಭಾರತೀಯ ಉಪಖಂಡದಲ್ಲಿ ಇದು ಅತ್ಯಂತ ಪ್ರಖ್ಯಾತ ಬೀದಿಬದಿ ಆಹಾರವಾಗಿದೆ. ಕಳೆದ ಕೆಲವು ವರ್ಷಗಳಿಂದ ಇದು ಜಾಗತಿಕವಾಗಿಯೂ ಮಾನ್ಯತೆ ಪಡೆದುಕೊಂಡಿದೆ. ಖಾರದ ಬಾಂಬ್‌ ಆಗಿರುವ ಇದನ್ನು ಎಲ್ಲಾ ವರ್ಗದ ಜನರೂ ಇಷ್ಟಪಟ್ಟು ಆನಂದಿಸುತ್ತಾರೆ. ಮದುವೆಗಳಿಂದ ಹಿಡಿದು ಆರತಕ್ಷತೆಗಳವರೆಗೆ, ಉದ್ಯಾನವನಗಳಿಂದ ಮಾರುಕಟ್ಟೆ ಸ್ಥಳಗಳವರೆಗೆ ಎಲ್ಲೆಡೆ  ಗೋಲಗಪ್ಪಾ ಅಂಗಡಿಗಳು ಇರೋದು ಇದೇ ಕಾರಣಕ್ಕೆ. ಹಾಗಾಗಿ ಅಜೀವ ಗೋಲಗಪ್ಪ ನೀಡುವ ಆಫರ್‌ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ.

ಪಾನಿಪುರಿಗೆ ಇರುವ ಜನರ ಕ್ರೇಜ್‌ಅನ್ನು ಎನ್‌ಕ್ಯಾಶ್‌ ಮಾಡಿಕೊಂಡಿರುವ ನಾಗ್ಪುರದ ವ್ಯಾಪಾರಿ ಈ ಆಫರ್‌ ನೀಡಿದ್ದು, ಒಮ್ಮೆ ನೀವು 99 ಸಾವಿರ ಪಾವತಿ ಮಾಡಿದರೆ ಸಾಕು ಆಜೀವವಾಗಿ ನೀವು ಬೇಕಾದಷ್ಟು ಗೋಲಗಪ್ಪಾವನ್ನು ಫ್ರೀಯಾಗಿ ತಿನ್ನಬಹುದು ಎಂದು ಹೇಳಿದ್ದಾರೆ. ಅವರ ಈ ಡೀಲ್‌ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ನಾನು ಬಿಎಸ್ಸಿ ಪದವೀಧರ, ಕನ್ನಡ ಬರೆಯಲು ಬರದಷ್ಟು ದಡ್ಡನಲ್ಲ ಎಂದ 'ಶಬವಾಗಲಿ' ಸಚಿವ ಶಿವರಾಜ್‌ ತಂಗಡಗಿ

ಮಾರ್ಕೆಟಿಂಗ್‌ ಗ್ರೋವ್‌ಮ್ಯಾಟಿಕ್ಸ್‌ ಇನ್ಸ್‌ಟಾಗ್ರಾಮ್‌ ಪೇಜ್‌ ಇದನ್ನು ಹಂಚಿಕೊಂಡಿದ್ದು, 16 ಸಾವಿರಕ್ಕೂ ಅಧಿಕ ಮಂದಿ ಇನ್ನು ಲೈಕ್‌ ಮಾಡಿದ್ದಾರೆ. '99 ಸಾವಿರ ಯಾರೂ ಕೊಡೋದಿಲ್ಲ ಅನ್ನೋದು ವ್ಯಾಪಾರಿಗೂ ಗೊತ್ತು. ಆದರೆ, ಈ ಬಗ್ಗೆ ಚರ್ಚೆ ಆಗಬೇಕು ಅನ್ನೋ ಆತನ ಉದ್ದೇಶ ಮಾತ್ರ ಈಡೇರಿದೆ' ಎಂದು ಒಬ್ಬ ಯೂಸರ್‌ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಈ ಡೀಲ್‌ನ ಅಧಿಕೃತೆಯ ಬಗ್ಗಯೂ ಚರ್ಚೆ ಮಾಡಿದ್ದಾರೆ.

ಬಿಗ್​ಬಾಸ್​ ವಿನ್ನರ್​ ಹನುಮಂತು 'ಫಸ್ಟ್​ ನೈಟ್​' ಹೀಗಿತ್ತು:​ ಸುಸ್ತಾಗೋದ್ರು ಕಿಚ್ಚ ಸುದೀಪ್​! ವಿಡಿಯೋ ವೈರಲ್​

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ