UP Elections 2022 : ಅಲಿಯೂ ಇಲ್ಲ, ಬಾಹುಬಲಿಯೂ ಇಲ್ಲ ಎಂದ ಬಿಜೆಪಿ ಶಾಸಕನಿಗೆ ನೋಟಿಸ್!

By Suvarna NewsFirst Published Jan 16, 2022, 11:40 PM IST
Highlights

ಧರ್ಮಾಧಾರಿತ ಸ್ಲೋಗನ್ ಗಳನ್ನು ಬಳಕೆ ಮಾಡುವಂತಿಲ್ಲ
ಲೋನಿ ಶಾಸಕ ನಂದ ಕಿಶೋರ್ ಗುರ್ಜರ್ ಗೆ ನೋಟಿಸ್
ಮೂರು ದಿನಗಳ ಒಳಗಾಗಿ ಉತ್ತರಿಸುವಂತೆ ಆದೇಶ

ಲಖನೌ (ಜ. 16):  ಮುಂಬರುವ ವಿಧಾನಸಭಾ ಚುನಾವಣೆಯ ( Assembly election) ಪ್ರಚಾರದ ವೇಳೆ ಧಾರ್ಮಿಕ ದ್ವೇಷವನ್ನು ಪ್ರಚೋದಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ  (Uttar Pradesh) ಶಾಸಕ ನಂದ ಕಿಶೋರ್ ಗುರ್ಜರ್ (MLA Nand Kishor Gurjar) ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಧರ್ಮಾಧಾರಿತ ಸ್ಲೋಗನ್ ಗಳನ್ನು ಪ್ರಚಾರದ ವೇಳೆ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ (Election Commission) ನೋಟಿಸ್ (Notice) ಜಾರಿ ಮಾಡಿದ್ದು, ಮೂರು ದಿನಗಳ ಒಳಗಾಗಿ ಉತ್ತರ ನೀಡಬೇಕು ಎಂದು ಆದೇಶ ನೀಡಿದೆ.

ಲೋನಿ (Loni) ಕ್ಷೇತ್ರದ ಬಿಜೆಪಿ ಶಾಸಕ ನಂದ್ ಕಿಶೋರ್ ಗುರ್ಜರ್ ಅವರನ್ನು ಮುಂಬರುವ ಚುನಾವಣೆಯಲ್ಲಿ ಬಿಜೆಪಿ (BJP) ಅಭ್ಯರ್ಥಿಯಾಗಿ ಈಗಾಗಲೇ ಘೋಷಣೆ ಮಾಡಲಾಗಿದೆ. ತಮ್ಮ ಉಮೇದುವಾರಿಕೆಯ ಘೋಷಣೆಯ ನಂತರ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವ ವೇಳೆ, "ನಾ ಅಲಿ, ನಾ ಬಾಹುಬಲಿ, ಲೋನಿ ಮೇ ಸಿರ್ಫ್ ಭಜರಂಗ್ ಬಲಿ" (ಅಲಿಯೂ ಇಲ್ಲ, ಬಾಹುಬಲಿಯೂ ಇಲ್ಲ, ಲೋನಿಯಲ್ಲಿ ಭಜರಂಗ್ ಬಲಿ ಮಾತ್ರ)" ಎನ್ನುವ ಸ್ಲೋಗನ್ ಅನ್ನು ಬಳಸಿದ್ದರು. ಅವರು ಮಾತನಾಡಿರುವ ವಿಡಿಯೋಗಳು ಸಖತ್ ವೈರಲ್ ಆಗಿದ್ದು, ಚುನಾವಣಾ ಆಯೋಗದವರೆಗೂ ಹೋಗಿ ಮುಟ್ಟಿದೆ. ಇದರ ಬೆನ್ನಲ್ಲಯೇ ನೋಟಿಸ್ ಜಾರಿ ಮಾಡಿರುವ ಚುನಾವಣಾ ಆಯೋಗ, ಧರ್ಮಾಧಾರಿತ ಸ್ಲೋಗನ್ ಗಳನ್ನು ಬಳಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಹಾಗಿದ್ದರೂ ಇಂಥ ಘೋಷಣೆಗಳನ್ನು ಮಾಡಿದ್ದೇಕೆ. ಇದಕ್ಕೆ ಸಂಪೂರ್ಣ ವಿವರಣೆ ನೀಡಿದ ನಿಮ್ಮ ಉತ್ತರ ಬುಧವಾರದ ಒಳಗಾಗಿ ಆಯೋಗದ ಮುಂದಿರಬೇಕು ಎಂದು ನೋಟಿಸ್ ನಲ್ಲಿ ತಿಳಿಸಿದೆ. ಜಿಲ್ಲಾ ಚುನಾವಣಾ ಅಧಿಕಾರಿಯ  ಮೂಲಕ ಈ ನೋಟಿಸ್ ಅನ್ನು ನೀಡಲಾಗಿದೆ.

UP Elections: 19 ವರ್ಷದ ಬಳಿಕ ಚುನಾವಣೆಯಲ್ಲಿ ಸಿಎಂ ಸ್ಪರ್ಧೆ, ಇತಿಹಾಸ ರಚಿಸಿದ್ದ ಮುಲಾಯಂ!
ನಂದಕಿಶೋರ್ ಗುರ್ಜರ್ ಮಾಡಿರುವ ಘೋಷಣೆಯೊಂದಿಗೆ ಲೋನಿ ಕ್ಷೇತ್ರದಲ್ಲಿ ಬಿಜೆಪಿ ಹಿಂದು ವೋಟ್ ಗಳನ್ನು ಪಡೆಯುವ ನಿಟ್ಟಿನಲ್ಲಿ ಶ್ರಮವಹಿಸಿದೆ. ಇದರ ನಡುವೆ ನಂದಕಿಶೋರ್ ಗುರ್ಜರ್ ಅವರ ಕಾರ್ಯಕ್ರಮದ ವೇಳೆ, ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದ್ದು, ಇದರ ವಿರುದ್ಧವೂ ದೂರು ದಾಖಲಾಗಿದೆ.  ಕ್ಷೇತ್ರದಲ್ಲಿ ನಾನು ಮಾಡಿದ ಕೆಲಸಗಳಿಂದಾಗಿಯೇ ಮತ್ತೊಮ್ಮೆ ಗೆದ್ದು ಬರುವ ವಿಶ್ವಾಸದಲ್ಲಿದ್ದೇನೆ ಎಂದು ನಂದ ಕಿಶೋರ್ ಗುರ್ಜರ್ ಹೇಳಿದ್ದು, ಆರ್ ಎಲ್ ಡಿ ಹಾಗೂ ಎಸ್ ಪಿ ಮೈತ್ರಿಕೂಟದ ಅಭ್ಯರ್ಥಿ ಮದನ್ ಭಯ್ಯಾ (Madan Bhaiya) ಅವರನ್ನು ಟೀಕೆ ಮಾಡಿದರು. ಅವರ ವಿರುದ್ಧ ಈಗಾಗಲೇ ಒಂದು ಕೇಸ್ ದಾಖಲಾಗಿದೆ ಎಂದು ಹೇಳಿದದ್ದಾರೆ. ಜಿನ್ನಾ ಪರವಾಗಿ ಮಾತನಾಡುವ ಯಾವ ಪಕ್ಷ ಕೂಡ ಇಲ್ಲಿ ಉಳಿಯುವುದಿಲ್ಲ ಎಂದು ಹೇಳಿದರು.

UP Elections: ಎದುರಾಳಿಗಳ ನಿರ್ನಾಮಕ್ಕೆ ಬಿಜೆಪಿ ವ್ಯೂಹ, ಇದೇ ನೋಡಿ ಯೋಗಿ ಉಪಾಯ!
ಉತ್ತರ ಪ್ರದೇಶ ಚುನಾವಣೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದ್ದು, ಫೆಬ್ರವರಿ 10 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು 403 ಕ್ಷೇತ್ರಗಳ ಮತಎಣಿಕೆ ನಡೆಯಲಿದೆ. 2017ರ ಉತ್ತರ ಪ್ರದೇಶ ಚುನಾವಣೆ ಕೂಡ ಏಳು ಹಂತಗಳಲ್ಲಿ ನಡೆದಿತ್ತು. ಈ ವೇಳೆ ಬಿಜೆಪಿ 312 ಸೀಟ್ ಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿಯುವಲ್ಲಿ ಯಶ ಕಂಡಿತ್ತು. ಈ ಬಾರಿ ಉತ್ತರ ಪ್ರದೇಶದಲ್ಲಿ ಗಡ್ಡುಗೆ ಹಿಡಿಯಲು ನಾಲ್ಕು ದಿಕ್ಕುಗಳಿಂದ ಹೋರಾಟ ನಡೆಯಲಿದೆ. ಬಿಜೆಪಿ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಹಾಗೂ ಬಹುಜನ ಸಮಾಜ್ ಪಾರ್ಟಿ ನಡುವೆ ಹೋರಾಟ ನಡೆಯಲಿದೆ.  ಆಡಳಿತಾರೂಢ ಬಿಜೆಪಿ ಪಕ್ಷವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಸರಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯುವ ಪ್ರಯತ್ನದಲ್ಲಿದೆ.

click me!