ಯುವತಿಗೆ ಫ್ರೀ ರೈಡ್ ಜೊತೆಗೆ ಸರ್ಪ್ರೈಸ್ ಗಿಫ್ಟ್ ,ಮೋಡಿ ಮಾಡಿದ ಬೈಕ್ ಟ್ಯಾಕ್ಸಿ ರೈಡರ್ ವಿಡಿಯೋ

Published : Feb 13, 2026, 07:18 PM IST
Uber rider video

ಸಾರಾಂಶ

ಯುವತಿಗೆ ಫ್ರೀ ರೈಡ್ ಜೊತೆಗೆ ಸರ್ಪ್ರೈಸ್ ಗಿಫ್ಟ್ , ಉಬರ್ ರೈಡರ್ ಮೋಡಿಗೆ ಮರುಳಾದ ಯುವತಿ ಪ್ರೀತಿಯಿಂದ ಹಗ್ ಮಾಡಿದ್ದಾಳೆ. ಇಷ್ಟೇ ಅಲ್ಲ, ಇದರ ನಡುವಿನ ಮಾತುಕತೆಯಲ್ಲಿ ಉಬರ್ ರೈಡರ್ ಹೇಳಿದ ಮಾತೊಂದು ಭಾರಿ ವೈರಲ್ ಆಗಿದೆ. 

ಜೈಪುರ (ಫೆ.13) ಟ್ಯಾಕ್ಸಿ ಸೇವೆ ಬಳಸುವ ಗ್ರಾಹಕರು ಕೆಲ ಬಾರಿ ನೀಡಿದ ದೂರು, ಆತಂಕಕಾರಿ ಘಟನೆಗಳು ಭಾರಿ ಸದ್ದು ಮಾಡುತ್ತದೆ. ಇದೀಗ ಉಬರ್ ರೈಡರ್ ಒಬ್ಬನ ಮೋಡಿಗೆ ಯುವತಿ ಮಾತ್ರವಲ್ಲ, ಹಲವರು ಮರುಳಾಗಿದ್ದಾರೆ. ಯುವತಿಯೊಬ್ಬಳು ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾಳೆ. ಕೆಲ ಹೊತ್ತಿನಲ್ಲಿ ಉಬರ್ ರೈಡರ್ ಆಗಮಿಸಿದ್ದಾನೆ. ಇವರಿಬ್ಬರ ನಡುವಿನ ಸಂಭಾಷಣೆ, ಕೊನೆಯಲ್ಲಿ ಯುವತಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದೇ ತಡ, ಯುವತಿ ಫಿದಾ ಆಗಿದ್ದಾಳೆ.ಇಷ್ಟೇ ಅಲ್ಲ ರೈಡರ್‌ಗೆ ಪ್ರೀತಿಯಿಂದ ಹಗ್ ಮಾಡಿದ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ಏನಿದು ಟ್ಯಾಕ್ಸಿ ರೈಡರ್ ಮೋಡಿ

ಬೈಕ್ ಟ್ಯಾಕ್ಸಿ ಬುಕ್ ಮಾಡಿದ ಯುವತಿ ಬಳಿ ಬಂದ ರೈಡರ್, ನಿಮ್ಮ ರೈಡ್, ಆದರೆ ಇದು ಸ್ಪೋರ್ಟ್ಸ್ ಬೈಕ್ ನಿಮಗೆ ಕಂಫರ್ಟೇಬಲ್ ಆಗುತ್ತಾ ನೋಡಿ, ಆದರೆ ಹತ್ತಿ ಎಂದಿದ್ದಾನೆ. ಪರ್ವಾಗಿಲ್ಲ ಎಂದು ಕೆಟಿಎಂ ಬೈಕ್ ಹತ್ತಿದ್ದಾಳೆ. ಬೈಕ್ ಟ್ಯಾಕ್ಸಿ ರೈಡರ್‌ನ ಸೌಜನ್ಯ, ಆಪ್ತತೆಯಿಂದ ರೈಡ್ ನಡುವೆ ಯುವತಿ ಮಾತು ಶುರು ಮಾಡಿದ್ದಾಳೆ. ಆರಂಭದಲ್ಲೇ ನಿಮಗೆ ಎಷ್ಟು ಗರ್ಲ್‌ಫ್ರೆಂಡ್ಸ್ ಇದ್ದಾರೆ ಎಂದು ಯುವತಿ ಪ್ರಶ್ನಿಸಿದ್ದಾಳೆ. ಅರೇ ಈ ಪ್ರಶ್ನೆ ಏನಕ್ಕೆ ಎಂದು ಕೇಳಿದಾಗ, ಹೀಗೆ ಕೇಳಿದೆ ಎಂದು ಯುವತಿ ಹೇಳಿದ್ದಾರೆ. ಈ ಪ್ರಶ್ನೆಗೆ ಉಬರ್ ರೈಡರ್ ನೀಡಿದ ಉತ್ತರ ಹಲವರನ್ನು ಮೋಡಿ ಮಾಡಿದೆ. ನನಗ ಒಬ್ಬಳೇ ಗರ್ಲ್‌ಫ್ರೆಂಡ್. ಆ ಗರ್ಲ್‌ಫ್ರೆಂಡ್ ಮೇಲೆ ನೀವೀಗ ಕುಳಿತಿದ್ದೀರಿ ಎಂದು ಟ್ಯಾಕ್ಸಿ ರೈಡರ್ ಉತ್ತರಿಸಿದ್ದಾನೆ. ತನ್ನನ್ನ ಬೈಕನ್ನೇ ಲವರ್ ಎಂದು ಯುವತಿಗೆ ಪರಿಚಿಯಿಸಿದ್ದಾನೆ. ಈ ಉತ್ತರಕ್ಕೆ ಹಲವರು ಫಿದಾ ಆಗಿದ್ದಾರೆ.

ಬೈಕರ್ ಅಪ್ಪಿಕೊಂಡ ಯುವತಿ

ಬೈಕ್ ವೇಗವಾಗಿ ಹೋದರೆ ನಿಮಗೆ ಸಮಸ್ಯೆ ಇದೆಯಾ, ಭಯವಾಗುತ್ತಾ ಎಂದು ರೈಡರ್ ಪ್ರಶ್ನಿಸಿದ್ದಾನೆ. ಇದಕ್ಕೆ ಪರ್ವಾಗಿಲ್ಲ, ಆದರೆ ಕಣ್ಣಲ್ಲಿ ನೀರು ಬರುತ್ತೆ, ಗಾಳಿ ಹೊಡೆಯುತ್ತೆ ಎಂದಿದ್ದಾಳೆ. ಇದಕ್ಕೆ ಯುವತಿಗೆ ಕ್ಯಾಪ್ ನೀಡಿದ್ದಾಳೆ. ಬಳಿಕ ರೈಡ್ ಮುಂದುವರಿದಿದೆ. ಯುವತಿಯ ಡ್ರಾಪ್ ಲೋಕೇಶನ್ ಬಂದ ಬಳಿಕ ರೈಡ್ ಅಂತ್ಯಗೊಳಿಸಿದ್ದಾನೆ. ಈ ವೇಳೆ 39ರೂಪಾಯಿ ಆಗಿತ್ತು. ಯುವತಿ ಪಾವತಿಗೆ ಫೋನ್ ತೆಗೆದಾಗ ಹಣ ಬೇಡ, ಇರಲಿ ಎಂದಿದ್ದಾನೆ. ಇಷ್ಟೇ ಅಲ್ಲ ಯುವತಿಗೆ ಅಚ್ಚರಿಯಾಗಿ ಚಾಕೋಲೇಟ್ ಉಡುಗೊರೆಯಾಗಿ ನೀಡಿದ್ದಾನೆ. ಸರ್ಪೈರ್ಸೈ ಗಿಫ್ಟ್ ನೋಡಿ ಯುವತಿ ಫುಲ್ ಖುಷಿಯಾಗಿದ್ದಾಳೆ. ಬಳಿಕ ರೈಡರಿಗೆ ಪ್ರೀತಿಯ ಅಪ್ಪುಗೆ ನೀಡಿದ್ದಾಳೆ.

ತಾನು ರೈಡಿಂಗ್ ವೇಳೆಯ ಕೆಲ ಘಟನೆಗಳು, ಸಂದರ್ಭಗಳ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಲ್ಲಿ ಪೋಸ್ಟ್ ಮಾಡುತ್ತೇನೆ. ನಿಮ್ಮ ಅನುಮತಿ ಇದ್ದರೆ ವಿಡಿಯೋ ಅಪ್ಲೋಡ್ ಮಾಡುತ್ತೇನೆ ಎಂದಿದ್ದಾರೆ. ಇದಕ್ಕೆ ಯುವತಿ ಅನುಮತಿ ನೀಡಿದ್ದಾಳೆ. ಇದೀಗ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಜೈಪುರ ಉಬರ್ ರೈಡರ್ ಹಾಗೂ ವ್ಲಾಗರ್ ವಿಡಿಯೋಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವ್ಯಾಲಂಟೈನ್‌ ಡೇ ಸಂಭ್ರಮಿಸುತ್ತಿದ್ದ ಕಾಲೇಜಿನ ಮೇಲೆ ಬಜರಂಗದಳ ದಾಳಿ: ವೇದಿಕೆ ಪುಡಿಪುಡಿ, ವಿದ್ಯಾರ್ಥಿಗಳಿಗೆ ಥಳಿತ!
ಪಿಎಂ ಕಿಸಾನ್ ಯೋಜನೆಗೆ ಆಧಾರ್ ಲಿಂಕ್ ಮಾಡಿ ₹2000 ಪಡೆಯಿರಿ; 30 ಲಕ್ಷ ರೈತರಿಗೆ ಸೂಚನೆ ಕೊಟ್ಟ ಸರ್ಕಾರ!